ಮುಂಬಯಿ : 91 ರೂ. ದಾಟಿದ ಪೆಟ್ರೋಲ್ ದರ, ಡೀಸೆಲ್ 80 ರೂ. ಗೆ ಸನಿಹ
Team Udayavani, Oct 1, 2018, 11:06 AM IST
ಮುಂಬಯಿ : ಅಕ್ಟೋಬರ್ ತಿಂಗಳ ಮೊದಲ ದಿನವಾದ ಇಂದು ಸೋಮವಾರವೇ ಮುಂಬಯಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 91 ರೂ ದಾಟಿದೆ.
ಈ ವರ್ಷ ಆಗಸ್ಟ್ ಮಧ್ಯ ಭಾಗದಿಂದಲೇ ಒಂದೇ ಸಮನೆ ಏರಲು ತೊಡಗಿದ ಪೆಟ್ರೋಲ್ ದರ ಇಂದು ಮುಂಬಯಿಯಲ್ಲಿ ಲೀಟರಿಗೆ 24 ಪೈಸೆ ಏರಿ 91.08 ರೂ. ಗೆ ಏರಿತು.
ದಿಲ್ಲಿಯಲ್ಲಿ ಮುಂಬಯಿಗೆ ಸಮನಾದ ಏರಿಕೆ ಕಂಡು ಬಂದಿರುವ ಹೊರತಾಗಿಯೂ ಲೀಟರ್ ಪೆಟ್ರೋಲ್ ದರ 83.73 ರೂ. ಆಗಿದೆ.
ಮುಂಬಯಿ ಯಲ್ಲಿ ಡೀಸೆಲ್ ಲೀಟರ್ ದರ 32 ಪೈಸೆ ಏರಿ 79.72 ರೂ. ಆಗಿದೆಯಾದರೆ ದಿಲ್ಲಿಯಲ್ಲಿ 30 ಪೈಸೆ ಏರಿ 75.09 ರೂ. ಆಗಿದೆ.
ಮುಂಬಯಿ, ದಿಲ್ಲಿಗೆ ಹೋಲಿಸಿದರೆ ಚೆನ್ನೈನಲ್ಲಿ ಇಂದು ಪೆಟ್ರೋಲ್ ದರ ಲೀಟರಿಗೆ 25 ಪೈಸೆ ಏರಿ 87.0ಡ ರೂ.ಆಗಿದೆ. ಡೀಸೆಲ್ ದರ ಲೀಟರಿಗೆ 32 ಪೈಸೆ ಏರಿ 79.40 ರೂ. ಆಗಿದೆ.
ಕೋಲ್ಕತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರಿಗೆ ಅನುಕ್ರಮವಾಗಿ 23 ಪೈಸೆ ಮತ್ತು 30 ಪೈಸೆ ಏರಿದೆ; ಹಾಗಾಗಿ ಇವುಗಳ ದರ ಲೀಟರಿಗೆ ಅನುಕ್ರಮವಾಗಿ 85.53 ಮತ್ತು 76.94 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ