ದೆಹಲಿ ಮೆಟ್ರೋ ಮಜೆಂಟಾ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ
Team Udayavani, Dec 25, 2017, 2:32 PM IST
ನವದೆಹಲಿ:ಬಹುನಿರೀಕ್ಷೆಯ ದಕ್ಷಿಣ ದೆಹಲಿಯ ಕಲ್ ಕಾಜಿ ಮಂದಿರದಿಮದ ನೋಯ್ಡಾದ ಬೊಟಾನಿಕಲ್ ಗಾರ್ಡನ್ ವರೆಗಿನ 12.64 ಕಿ.ಮೀಟರ್ ಉದ್ದದ ಮಜೆಂಟಾ ಮೆಟ್ರೋ ಟ್ರೈನ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು.
ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೆಹಲಿಯ ಮಜೆಂಟಾ ಮೆಟ್ರೋ ರೈಲು ದೆಹಲಿ ಮತ್ತು ನೋಯ್ಡಾವನ್ನು ಅತೀ ವೇಗವಾಗಿ ಸಂಪರ್ಕಿಸಲಿದೆ. ಮಜೆಂಟಾ ಮಾರ್ಗ ನಗರ ಸಾರಿಗೆ ವ್ಯವಸ್ಥೆಯ ಆಧುನಿಕರಣಕ್ಕೊಂದು ಉತ್ತಮ ಉದಾಹರಣೆ ಎಂದು ಪ್ರಧಾನಿ ಹೇಳಿದರು.
ಈ ಮಾರ್ಗವನ್ನು ಉದ್ಘಾಟಿಸುವ ಮೂಲಕ ತಮಗೆ ಕೊಡುಗೆಯನ್ನು ನೀಡಿದ್ದಕ್ಕೆ ಪ್ರಧಾನಿ ಮೋದಿಜೀಯವರಿಗೆ ಅಭಿನಂದನೆಗಳು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.