ಬಂಗಾಲದಲ್ಲಿ ರಾಜಕೀಯ ಬೆಂಕಿ

ಹಿಂಸಾಚಾರ ಸಂಬಂಧ ಬಿಜೆಪಿ-ಟಿಎಂಸಿ ಪರಸ್ಪರ ವಾಕ್ಸಮರ

Team Udayavani, May 16, 2019, 6:00 AM IST

ಹೊಸದಿಲ್ಲಿ: ಪಶ್ಚಿಮ ಬಂಗಾಲದ ಕೋಲ್ಕತಾದಲ್ಲಿ ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರೋಡ್‌ಶೋ ವೇಳೆ ನಡೆದ ಹಿಂಸಾಚಾರ ಮತ್ತು ದಾಂಧಲೆಯು ಬಿಜೆಪಿ ಮತ್ತು ಟಿಎಂಸಿ ನಡುವೆ ರಾಜಕೀಯ ಯುದ್ಧಕ್ಕೆ ನಾಂದಿ ಹಾಡಿದೆ. ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆ ಧ್ವಂಸ ಪ್ರಕರಣ ಹಾಗೂ ಹಿಂಸಾ ಚಾರಕ್ಕೆ ಸಂಬಂಧಿಸಿ ಎರಡೂ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟ ನಡೆಸಿಕೊಂಡಿದ್ದಾರೆ. ಇದೇ ವೇಳೆ, ಈ ಘಟ ನೆಯು ಪಶ್ಚಿಮ ಬಂಗಾಲ ವರ್ಸಸ್‌ ಹೊರಗಿ ನವರು ಎಂಬ ಸಂಘರ್ಷವನ್ನೂ ಹುಟ್ಟುಹಾಕಿದೆ.

ಬಂಗಾಲದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಅರಿವೇ ಇಲ್ಲದಂಥ ಹೊರರಾಜ್ಯದ ಗೂಂಡಾ ಗಳನ್ನು ಬಿಜೆಪಿ ಬಂಗಾಲಕ್ಕೆ ಕರೆತಂದು ದಾಂಧಲೆ ಮಾಡಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಆದರೆ, ಬಿಜೆಪಿಯ ವರ್ಚ ಸ್ಸನ್ನು ಕುಂದಿಸಲೆಂದು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರೇ ಹಿಂಸಾಚಾರ ಆರಂ ಭಿ ಸಿ ದರು ಎಂದು ಅಮಿತ್‌ ಶಾ ಪ್ರತ್ಯಾರೋಪ ಮಾಡಿದ್ದಾರೆ. ಇದರ ಜೊತೆಗೆ, ಎರಡೂ ಪಕ್ಷಗಳ ನಾಯಕರು ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮಲ್ಲಿವೆ ಎಂದು ಹೇಳಿಕೊಂಡಿವೆ.

ಆಯೋಗಕ್ಕೆ ದೂರು: ತೃಣಮೂಲ ಕಾಂಗ್ರೆಸ್‌ ಪಕ್ಷವು ಬುಧವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಕೂಡ ಸಾಕ್ಷ್ಯವನ್ನಾಗಿ ನೀಡಿದೆ. ಘಟನೆ ಸಂಬಂಧ 58 ಮಂದಿಯನ್ನು ಬಂಧಿಸ ಲಾಗಿದ್ದು, ಆ ಪೈಕಿ ಹೆಚ್ಚಿನವರು ಬಂಗಾಲದ ನಿವಾಸಿಗಳೇ ಅಲ್ಲ ಎಂದು ಟಿಎಂಸಿ ಹೇಳಿದೆ.

ಎಲ್ಲ ಪಕ್ಷಗಳಿಂದಲೂ ಪ್ರತಿಭಟನೆ: ಹಿಂಸಾಚಾರ ಖಂಡಿಸಿ ಬಿಜೆಪಿ ನಾಯಕರು ದಿಲ್ಲಿಯ ಜಂತರ್‌ ಮಂತರ್‌ ಸೇರಿದಂತೆ ಹಲವು ಪ್ರದೇಶ ಗಳಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾಸಾಗರ್‌ ಪ್ರತಿಮೆ ಧ್ವಂಸ ಖಂಡಿಸಿ ಪ.ಬಂಗಾಲದಲ್ಲಿ ವಿದ್ಯಾರ್ಥಿಗಳು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಎಡಪಕ್ಷ ಗಳು ಕೂಡ ಮೌನ ಮೆರವಣಿಗೆ ನಡೆಸಿವೆ.

ಎಲ್ಲವನ್ನೂ ನಾಶ ಮಾಡಲು ಯತ್ನ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬುಧವಾರ ಪ್ರಧಾನಿ ಮೋದಿ ಪಶ್ಚಿಮ ಬಂಗಾಲದಲ್ಲಿ ರ್ಯಾಲಿ ನಡೆಸಿದ್ದು, ಸಿಎಂ ಮಮತಾ ವಿರುದ್ಧ ಕಿಡಿಕಾರಿ ದ್ದಾರೆ. ಮಮತಾ ಬ್ಯಾನರ್ಜಿ ಸರಕಾರವು ಪಶ್ಚಿಮ ಬಂಗಾ ಳದಲ್ಲಿ ಎಲ್ಲವನ್ನೂ ನಾಶ ಮಾಡಲು ಹೊರಟಿದೆ. ಆದರೆ, ಇಲ್ಲಿನ ಜನರ ಬದ್ಧತೆ ಮತ್ತು ಧೈರ್ಯವು ಈ ಚಿತ್ರಹಿಂಸೆಯ ಆಡಳಿತವನ್ನು ಕಿತ್ತುಹಾಕಲಿದೆ ಎಂದು ಮೋದಿ ಹೇಳಿದ್ದಾರೆ. ಅಮಿತ್‌ ಶಾ ರೋಡ್‌ಶೋ ಮೇಲೆ ಟಿಎಂಸಿ ಗೂಂಡಾಗಳು ಹೇಗೆ ದಾಳಿ ನಡೆಸಿದರು ಎಂಬು ದನ್ನು ಇಡೀ ದೇಶವೇ ನೋಡಿದೆ. ದೀದಿಯ ಗೂಂಡಾಗಳು ಗನ್‌, ಬಾಂಬ್‌ ಹಿಡಿದು ಕೊಂಡೋ ಸಾಗುತ್ತಿರು ತ್ತಾರೆ. ಜಮ್ಮು-ಕಾಶ್ಮೀರ ದಲ್ಲಿ ಕೂಡ ಚುನಾ ವ ಣೆಯು ಬಂಗಾಲಕ್ಕಿಂತ ಶಾಂತಿ ಯುತವಾಗಿ ನಡೆದಿದೆ ಎಂದೂ ಹೇಳಿದ್ದಾರೆ.

ಡಿಪಿ ಬದಲಿಸಿಕೊಂಡ ನಾಯಕರು
ಮಂಗಳವಾರದ ಹಿಂಸಾಚಾರದ ವೇಳೆ ಶ್ರೇಷ್ಠ ಸಮಾಜ ಸುಧಾರಕ ಈಶ್ವರ್‌ಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಕೃತ್ಯ ಖಂಡಿಸಿ ಬುಧವಾರ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಯ ಇತರೆ ನಾಯಕರು ತಮ್ಮ ಟ್ವಿಟರ್‌, ಫೇಸ್‌ಬುಕ್‌ ಖಾತೆಗಳ ಡಿಪಿ(ಡಿಸ್‌ಪ್ಲೇ ಪಿಕ್ಚರ್‌)ಯನ್ನು ಬದಲಿಸಿಕೊಂಡಿದ್ದಾರೆ. ಎಲ್ಲರೂ ವಿದ್ಯಾಸಾಗರ್‌ರ ಫೋಟೋವನ್ನೇ ಪ್ರೊಫೈಲ್‌ ಪಿಕ್‌ನಲ್ಲಿ ಬಳಸಿಕೊಂಡಿದ್ದಾರೆ. ಟಿಎಂಸಿಯ ಅಧಿಕೃತ ಟ್ವಿಟರ್‌ ಮತ್ತು ಫೇಸ್‌ಬುಕ್‌ ಖಾತೆಯಲ್ಲೂ ಈ ಬದಲಾವಣೆ ಮಾಡಲಾಗಿದೆ.

ಮಹಾಮೈತ್ರಿಯ ಬೆಸೆಯಲು ಸೋನಿಯಾ ಸಜ್ಜು
ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರದಂತೆ ತಡೆಯಲು ಹಾಗೂ ಯುಪಿಎಯ ಎಲ್ಲ ಮಿತ್ರ ಪಕ್ಷಗಳು ಮತ್ತು ಇತರೆ ಪ್ರಾದೇಶಿಕ ಪಕ್ಷಗಳನ್ನು ಸೆಳೆದು ಮಹಾಮೈತ್ರಿಯನ್ನು ಬೆಸೆಯಲು ಈಗ ಸ್ವತಃ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅಖಾಡಕ್ಕಿಳಿದಿದ್ದಾರೆ. ಮೇ 23 ರಂದು ಫ‌ಲಿತಾಂಶ ಘೋಷಣೆಯಾದ ಕೂಡಲೇ ಈ ಎಲ್ಲ ಪಕ್ಷಗಳ ಸಭೆ ನಡೆ ಸಲು ಅವರು ಮುಂದಾಗಿದ್ದಾರೆ. ಈ ಪೈಕಿ ನವೀನ್‌ ಪಾಟ್ನಾಯಕ್‌ ಅವರ ಬಿಜು ಜನತಾದಳ ಮತ್ತು ಕೆಸಿಆರ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ ಯನ್ನೂ ಮಹಾಮೈತ್ರಿಯ ಬುಟ್ಟಿಗೆ ಹಾಕಿಕೊಳ್ಳುವ ಲೆಕ್ಕಾಚಾರವನ್ನೂ ಸೋನಿಯಾ ಹಾಕಿ ಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಮಿತ್ರಪಕ್ಷಗಳ ಸಂಬಂಧದ ವಿಚಾರದಲ್ಲಿ ಹಿನ್ನೆಲೆಗೆ ಸರಿದಿದ್ದ ಸೋನಿಯಾ, ಎಲ್ಲ ಜವಾಬ್ದಾರಿ ಯನ್ನೂ ರಾಹುಲ್‌ಗೆ ಬಿಟ್ಟುಕೊಟ್ಟಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಮಹಾಮೈತ್ರಿ ರಚನೆಗೆ ನಡೆಸಿದ ಯತ್ನಗಳು ವಿಫ‌ಲವಾದ ಹಿನ್ನೆಲೆಯಲ್ಲಿ, ಈಗ ತಾವೇ ಮಹಾಮೈತ್ರಿಯ ಪರಿಕಲ್ಪನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಆಯ್ದ ನಾಯ ಕರು ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು ಮೇ 23ರ ಸಭೆ ಕುರಿತು ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಟಿಆರ್‌ಎಸ್‌, ಬಿಜೆಡಿ, ವೈ ಎಸ್ಸಾರ್‌ ಕಾಂಗ್ರೆಸ್‌ ಅನ್ನೂ ಮೈತ್ರಿಗೆ ಸೇರಿಸಿಕೊಳ್ಳುವ ಇರಾದೆ ಸೋನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಹಿಯಾ ಭವಿಷ್ಯ ನಿಜವಾಗುತ್ತೆ
ಬಡವರಿಗೆ ಶೌಚಾಲಯ ಮತ್ತು ಇಂಧನ ಒದ ಗಿಸುವ ಪ್ರಧಾನಿ 25 ವರ್ಷಗಳವರೆಗೆ ದೇಶವನ್ನು ಆಳುತ್ತಾನೆ ಎಂದು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಈ ಮಾತನ್ನು ಪ್ರಧಾನಿ ಮೋದಿ ನಿಜವಾಗಿಸ ಲಿದ್ದಾರೆ ಎಂದು ಉ.ಪ್ರದೇಶದ ಸಿಎಂ ಯೋಗಿ ಹೇಳಿ ದ್ದಾರೆ. 1966 ಅಥವಾ 1967ರಲ್ಲಿ ಸಂಸತ್‌ನಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಸಮ್ಮುಖದಲ್ಲೇ ಲೋಹಿಯಾ ಈ ಮಾತು ಹೇಳಿದ್ದರು. ಲೋಹಿಯಾ ಅವರ ಕನಸನ್ನು ಪೂರೈಸಿದ್ದು ಪ್ರಧಾನಿ ಮೋದಿ ಎಂದು ಯೋಗಿ ಹೇಳಿದ್ದಾರೆ.

ಪ್ರಿಯಾಂಕಾ ರೋಡ್‌ಶೋ
ಪ್ರಧಾನಿ ಮೋದಿ ಸ್ಪರ್ಧಿಸುತ್ತಿರುವ ವಾರಾ ಣಸಿ ಕ್ಷೇತ್ರದಲ್ಲಿ ಬುಧವಾರ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ರೋಡ್‌ಶೋ ನಡೆಸಿದ್ದಾರೆ. ಬನಾ ರಸ್‌ ಹಿಂದೂ ವಿವಿಯಲ್ಲಿ ಮದನ್‌ ಮೋಹನ ಮಾಳ ವೀಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಆರಂಭವಾದ ರೋಡ್‌ಶೋ, ದಶಾಶ್ವ ಮೇಧ ಘಾಟ್‌ನಲ್ಲಿ ಸಮಾಪ್ತಿಗೊಂಡಿತು. 3 ವಾರಗಳ ಹಿಂದೆ ಮೋದಿಯವರೂ ಇದೇ ಹಾದಿಯಲ್ಲಿ ರೋಡ್‌ಶೋ ನಡೆಸಿದ್ದರು.

ಬಿಜೆಪಿ-ಟಿಎಂಸಿ ವಿಡಿಯೋ ಸಾಕ್ಷ್ಯಗಳ ವಾರ್‌
ಪ.ಬಂಗಾಲದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಟಿಎಂಸಿ ನಾಯಕ ಡೆರೆಕ್‌ ಒಬ್ರಿಯಾನ್‌ ನಡುವೆ ವಾಕ್ಸಮರ ನಡೆದಿದೆ. ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂದಿರುವ ಶಾ, ಇದಕ್ಕೆ 3 ಫೋಟೋಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ. ಇನ್ನೊಂದೆಡೆ, ಒಬ್ರಿಯಾನ್‌ ಅವರು ಬಿಜೆಪಿ ಮೇಲೆ ಆರೋಪ ಹೊರಿಸಿದ್ದು, ತಮ್ಮಲ್ಲಿ 44 ವಿಡಿಯೋ ಸಾಕ್ಷ್ಯವಿದೆ ಎಂದಿದ್ದಾರೆ.

ಟಿಎಂಸಿ ಗೂಂಡಾಗಳ ಕೃತ್ಯ: ಶಾ
ಕೋಲ್ಕತಾದಲ್ಲಿ ನನ್ನ ರೋಡ್‌ಶೋ ವೇಳೆ ಹಿಂಸಾಚಾರ ನಡೆಯುವಂತೆ ನೋಡಿಕೊಂಡಿದ್ದು ಸಿಎಂ ಮಮತಾ ಬ್ಯಾನರ್ಜಿ.. ಹಿಂಸಾಚಾರದಿಂದ ನಾವೇನೂ ಬಗ್ಗುವುದಿಲ್ಲ. ಬಂಗಾಳಿಗಳ ಆಕ್ರೋಶವು ರಾಜ್ಯದಲ್ಲಿ ಪ್ರಜಾಸತ್ತೆಯ ಕತ್ತು ಹಿಸುಕುತ್ತಿರುವ ಮಮತಾ ಬ್ಯಾನರ್ಜಿಗೆ ಸೋಲುಣಿಸುವುದರಲ್ಲಿ ಅಂತ್ಯವಾಗಲಿದೆ.

ಸರಕಾರವು ನನ್ನ ವಿರುದ್ಧ ಎಫ್ಐಆರ್‌ ದಾಖಲಿಸಿದೆಯಂತೆ. ನಾನು ಅದಕ್ಕೆಲ್ಲ ಹೆದರಲ್ಲ. ಎಷ್ಟೋ ಹಿಂಸಾತ್ಮಕ ಘಟನೆಗಳಲ್ಲಿ ನಮ್ಮ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ.
ವಿದ್ಯಾಸಾಗರ್‌ ಪ್ರತಿಮೆಯನ್ನು ಧ್ವಂಸಗೈದಿದ್ದು ತೃಣಮೂಲ ಕಾಂಗ್ರೆಸ್‌ ಸದಸ್ಯರು. ಕಾಲೇಜು ಗೇಟುಗಳನ್ನು ಮುಚ್ಚಲಾಗಿತ್ತು. ಕೊಠಡಿಗಳಿಗೆ ಬೀಗ ಹಾಕಲಾಗಿತ್ತು. ಈ ಲಾಕ್‌ ಓಪನ್‌ ಮಾಡಿದ್ದು ಯಾರು? ಬಿಜೆಪಿ ಕಾರ್ಯಕರ್ತರೇನೂ ಕಾಲೇಜಿನೊಳಕ್ಕೆ ನುಗ್ಗಿಲ್ಲ.
ಟಿಎಂಸಿ ಕಾರ್ಯಕರ್ತರಿಂದಲೇ ಈ ಕೃತ್ಯ ನಡೆದಿದೆ ಎನ್ನುವುದಕ್ಕೆ ನನ್ನಲ್ಲಿರುವ 3 ಫೋಟೋಗಳೇ ಸಾಕ್ಷಿ.

ನಿನ್ನೆಯ ಹಿಂಸಾಚಾರದಲ್ಲಿ ನಾನು ಅದೃಷ್ಟವಶಾತ್‌ ಪಾರಾದೆ. ಸಿಆರ್‌ಪಿಎಫ್ನವರು ಆಗ ಸ್ಥಳದಲ್ಲಿ ಇರದಿದ್ದರೆ, ನನಗೆ ಅಲ್ಲಿಂದ ಬಚಾವಾಗಲು ಆಗುತ್ತಿರಲಿಲ್ಲ
ರಾಜ್ಯ ಸರಕಾರ ಹಿಂಸಾಚಾರದ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆಗೆ ಆದೇಶಿಸಲಿ. ನಾವು(ಬಿಜೆಪಿ) ಎಲ್ಲ ರಾಜ್ಯಗಳಲ್ಲೂ ಚುನಾವಣೆ ಎದುರಿಸುತ್ತಿದ್ದೇವೆ. ಆದರೆ ಎಲ್ಲೂ ಹಿಂಸಾಚಾರ ನಡೆದಿಲ್ಲ. ಬಂಗಾಲದಲ್ಲಿ ಮಾತ್ರವೇ ನಡೆದಿದೆ. ಅದಕ್ಕೆ ಕಾರಣ ಸ್ಪಷ್ಟ.

ಶಾ ಸುಳ್ಳುಗಾರ: ಒಬ್ರಿಯಾನ್‌
ಅಮಿತ್‌ ಶಾ ದೊಡ್ಡ ಸುಳ್ಳುಗಾರ. ಅವರ ಸುಳ್ಳುಗಳನ್ನು ನಮ್ಮಲ್ಲಿರುವ 40 ವಿಡಿಯೋ ಸಾಕ್ಷ್ಯಗಳೇ ಬಹಿರಂಗಪಡಿಸುತ್ತಿವೆ. ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲೆಂದೇ ಅಮಿತ್‌ ಶಾ ರೋಡ್‌ಶೋ ಆಯೋಜಿಸಿದ್ದರು. ರೋಡ್‌ಶೋನಲ್ಲಿ ಪಾಲ್ಗೊಂಡಿದ್ದವರು ಗೋಡೆ ಹಾರಿ ಕಾಲೇಜು ಆವರಣ ಪ್ರವೇಶಿಸಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಬಿಜೆಪಿ ಧ್ವಜ ಹಿಡಿದುಕೊಂಡು, ಕೇಸರಿ ಬಣ್ಣದ ಟಿಶರ್ಟ್‌ ಹಾಕಿಕೊಂಡಿರುವ ಬಿಜೆಪಿ ಕಾರ್ಯಕರ್ತರು ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವ ವಿಡಿಯೋ ಇಲ್ಲಿದೆ.
ಪ್ರತಿಮೆ ಕೆಡವಲೆಂದು ಉತ್ತರಪ್ರದೇಶ ಸಹಿತ ಬೇರೆ ಬೇರೆ ರಾಜ್ಯಗಳಿಂದ ಬಿಜೆಪಿಯು ಜನರನ್ನು ಕರೆತಂದಿತ್ತು “ವಿದ್ಯಾಸಾಗರ್‌ ಫಿನಿಷ್‌. ವೇರ್‌ ಈಸ್‌ ದಿ ಜೋಷ್‌’ ಎಂದು ಕೆಲವರು ಘೋಷಣೆ ಕೂಗುತ್ತಿದ್ದ ಆಡಿಯೋ ಕ್ಲಿಪ್‌ ನಮ್ಮಲ್ಲಿದೆ. ಅದರ ಸತ್ಯಾಸತ್ಯತೆಯನ್ನು ಅರಿಯಲು ಯತ್ನಿಸುತ್ತಿದ್ದೇವೆ ಅಮಿತ್‌ ಶಾ ರೋಡ್‌ಶೋಗೆ ಬರುವಾಗ ರಾಡ್‌ ಮತ್ತು ಶಸ್ತ್ರಗಳೊಂದಿಗೆ ಬನ್ನಿ. ಟಿಎಂಸಿ ಮತ್ತು ಪೊಲೀಸರೊಂದಿಗೆ ಘರ್ಷಣೆಗಿಳಿಯಲು ಅವುಗಳು ಬೇಕು ಎಂಬ ವಾಟ್ಸ್‌ ಆ್ಯಪ್‌ ಸಂದೇಶಗಳೂ ಹರಿದಾಡಿದ್ದವು.

ಈಶ್ವರ ಚಂದ್ರ ವಿದ್ಯಾಸಾಗರ್‌ ಅವರು ದೇಶದ ಶ್ರೇಷ್ಠ ಸಮಾಜ ಸುಧಾರಕ. ಅವರ ಪ್ರತಿಮೆಯನ್ನು ಟಿಎಂ ಸಿಯೇ ಧ್ವಂಸಗೈದಿದೆ. ಆದರೆ, ಈಗ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ.
ಆದಿತ್ಯನಾಥ್‌,ಉ.ಪ್ರದೇಶ ಸಿಎಂ

ಬಿಜೆಪಿ ಮತ್ತು ಆರೆಸ್ಸೆಸ್‌ ವ್ಯವಸ್ಥಿತವಾಗಿ ಬಂಗಾಲ ಮತ್ತು ಅದರ ಮೌಲ್ಯಗಳ ಮೇಲೆ ದಾಳಿ ನಡೆಸು ತ್ತಿವೆ. ಇವರು ವಿದ್ಯಾಸಾಗರ್‌ರ ಚಿಂತನೆ ಗಳನ್ನು ವಿರೋಧಿಸುತ್ತಲೇ ಬಂದವರು. ಆದರೆ ಬಂಗಾಲ ಯಾವತ್ತೂ ಸೋಲಲ್ಲ.
ಸೀತಾರಾಂ ಯೆಚೂರಿ, ಸಿಪಿಎಂ ನಾಯಕ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ