ಪ್ರಧಾನಿ ಮೋದಿಯನ್ನು ಡೆಂಗ್ಯೂ ಸೊಳ್ಳೆ ಎಂದ ಕಾಂಗ್ರೆಸ್ ಶಾಸಕಿ
Team Udayavani, Oct 28, 2018, 2:05 PM IST
ಸೋಲಾಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆ ಎಂದು ಕರೆಯುವ ಮೂಲಕ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆ ಬಿಜೆಪಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮಾಜಿ ಕೇಂದ್ರ ಸಚಿವರಾಗಿದ್ದ ಸುಶೀಶ್ ಕುಮಾರ್ ಶಿಂಧೆ ಅವರ ಪುತ್ರಿಯಾಗಿರುವ ಪ್ರಣೀತಿ ಸೋಲಾಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಈಗ ಇನ್ನೊಂದು ಡೆಂಗ್ಯೂ ಸೊಳ್ಳೆ ಇದೆ. ಅದರ ಹೆಸರು ಮೋದಿ ಬಾಬಾ. ಅದು ಎಲ್ಲರ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದಿದ್ದಾರೆ.