ಪಲ್ಸರ್‌ ಸುನಿಲ್‌ಗೆ ದುಬೈ ಸೆಕ್ಸ್‌ ಜಾಲದ ನಂಟು ? ಪೊಲೀಸ್‌ ತನಿಖೆ


Team Udayavani, Mar 2, 2017, 4:23 PM IST

Pulsar Sunil-700.jpg

ತಿರುವನಂತಪುರ : ಕೇರಳದ ಬಹುಭಾಷಾ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಮಾಸ್ಟರ್‌ ಮೈಂಡ್‌ ಪಲ್ಸರ್‌ ಸುನಿಲ್‌, ಕಾರಿನಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡುವಾಗಿನ ವಿಡಿಯೋ ಹಾಗೂ ಹಲವಾರು ಚಿತ್ರಗಳನ್ನು ತನ್ನ ಸ್ಮಾರ್ಟ್‌ ಫೋನ್‌ನಲ್ಲಿ ಸೆರೆ ಹಿಡಿದಿದ್ದು ಅವುಗಳನ್ನು ಆತ ತನ್ನ ಸ್ನೇಹಿತರಿಗೆ ತೋರಿಸಿದ್ದಾನೆ ಎಂದು ಕೇರಳ ಪೊಲೀಸರನ್ನು ಉಲ್ಲೇಖೀಸಿ ಸ್ಥಳೀಯ ಮೂಲಗಳು ಹೇಳಿರುವುದಾಗಿ  ಟಿವಿ ವರದಿಗಳು ಹೇಳಿವೆ. 

ಮಲಯಾಳಂ ಚಿತ್ರ ನಟಿಯ ಅಪಹರಣ, ಲೈಂಗಿಕ ಕಿರುಕುಳ ಘಟನೆಯ ಬಳಿಕ ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪಲ್ಸರ್‌ ಸುನಿ, ಆ ದಿನಗಳಲ್ಲಿ ತನ್ನ ಸ್ನೇಹಿತ ಮನು ಎಂಬಾತನನ್ನು ಹಾಗೂ ಅಮಬಲಪ್ಪುಳದಲ್ಲಿನ ಮತ್ತೋರ್ವ ಸ್ನೇಹಿತನನ್ನು ಭೇಟಿಯಾಗಿ ಅವರಿಗೆ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿರುವಾಗಿನ ವಿಡಿಯೋ ಹಾಗೂ ಚಿತ್ರಗಳನ್ನು ತೋರಿಸಿದ್ದಾನೆ ಎನ್ನಲಾಗಿದೆ. 

ಆದರೆ ದುರದೃಷ್ಟವಶಾತ್‌ ಕೇರಳ ಪೊಲೀಸರಿಗೆ ಪಲ್ಸರ್‌ ಸುನಿಲ್‌ನ ಈ ಸ್ಮಾರ್ಟ್‌ ಫೋನ್‌ ಇನ್ನೂ ಸಿಕ್ಕಿಲ್ಲ. ನ್ಯಾಯಾಲಯಕ್ಕೆ ಶರಣಾಗುವ ಮುನ್ನ ತಾನು ಆ ಸ್ಮಾರ್ಟ್‌ ಫೋನನ್ನು ಗೋಶ್ರೀ ಸೇತುವೆಯ ಕೆಳಕ್ಕೆ ಎಸೆದಿದ್ದೆ ಎಂದು ಪಲ್ಸರ್‌ ಸುನಿಲ್‌ ಪೊಲೀಸರಲ್ಲಿ ಹೇಳಿದ್ದ. ಆ ಪ್ರಕಾರ ಅವರು ನೌಕಾಪಡೆಯ ಮುಳುಗು ತಜ್ಞರ ಸಹಾಯ ಪಡೆದು ನದಿಯಲ್ಲಿ ಸ್ಮಾರ್ಟ್‌ ಫೋನಿಗಾಗಿ ಹುಡುಕಾಡಿಸಿದ್ದರು. 

ಆ ಬಳಿಕ ಪಲ್ಸರ್‌ ಸುನಿಲ್‌ ತಾನು ಆ ಸ್ಮಾರ್ಟ್‌ ಫೋನನ್ನು ಬೇರೆಲ್ಲೋ ಒಂದು ಕಡೆ ಎಸದಿದ್ದೇನೆ ಎಂದಿದ್ದ. ಆ ಸ್ಥಳದಲ್ಲೂ  ಹುಡುಕಾಟ ನಡೆಸಿದ ಪೊಲೀಸರಿಗೆ ಏನೂ ಸಿಗಲಿಲ್ಲ. ಆ ಸ್ಮಾರ್ಟ್‌ ಫೋನ್‌ ಪೊಲೀಸರಿಗೆ, ಪಲ್ಸರ್‌ ಸುನಿಲ್‌ ವಿರುದ್ಧದ ಸಾಕ್ಷ್ಯಕ್ಕೆ ಅತೀ ಅಗತ್ಯವಾಗಿದೆ. 

ಪಲ್ಸರ್‌ ಸುನಿಲ್‌ಗೆ ಮಹಿಳೆಯರನ್ನು ದುಬೈಗೆ ಕಳ್ಳಸಾಗಾಟ ಮಾಡುವ ಜಾಲವೂ ಇದೆ; ಆ ನಿಟ್ಟಿನಲ್ಲಿಯೂ ತನಿಖೆ ನಡೆಸಬೇಕು ಎಂದು ಈ ನಡುವೆ ಶಾಸಕ ಪಿ ಟಿ ಥಾಮಸ್‌ ಪೊಲೀಸರನ್ನು ಆಗ್ರಹಿಸಿದ್ದಾರೆ. ಪಲ್ಸರ್‌ ಸುನಿಲ್‌ ಬಳಿ ಮೂರು ನಕಲಿ ಪಾಸ್‌ ಪೋರ್ಟ್‌ಗಳಿದ್ದು ಆತ ಅವುಗಳನ್ನು ಬಳಸಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿರುವುದು ಪತ್ತೆಯಾಗಿದೆ. ಸಿನೆಮಾದಲ್ಲಿ ಅವಕಾಶಕ್ಕಾಗಿ ತೀವ್ರವಾಗಿ ಹಂಬಲಿಸುವ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡು, ಬ್ಲಾಕ್‌ ಮೇಲ್‌ ಮಾಡಿ, ಬಳಿಕ ಅವರನ್ನು ಉಪಾಯದಿಂದ ದುಬೈಗೆ ಕಳ್ಳಸಾಗಣೆ ಮಾಡುವಲ್ಲಿಯೂ ಪಲ್ಸರ್‌ ಸುನಿಲ್‌ ಅಗ್ರಗಣ್ಯನಾಗಿದ್ದ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. 

ದುಬೈಯಲ್ಲಿ ಸೆಕ್ಸ್‌ ರಾಕೆಟ್‌ ನಡೆಸುತ್ತಿದ್ದ ಸುನೀಲ್‌ ಸುರೇಂದ್ರನ್‌ ಎಂಬ ವ್ಯಕ್ತಿ ಇದೇ ಪಲ್ಸರ್‌ ಸುನಿಲ್‌ ಇರಬಹುದೇ ಎಂಬ ಗುಮಾನಿ ಈಗ ಪೊಲೀಸರಿಗೆ ಇದೆ. ಸುನೀಲ್‌ ಸುರೇಂದ್ರನ್‌ ನ ದುಬೈ ಸೆಕ್ಸ್‌ ರಾಕೆಟ್‌ ಬಗ್ಗೆ ಸಿಬಿಐ ತನಿಖೆ ಈಗಲೂ ಜಾರಿಯಲ್ಲಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.