ಬ್ಯಾಂಕ್ ಖಾತೆ ಅಮಾನತಿಗೆ ಆದೇಶಿಸಿಲ್ಲ: ಆರ್ಬಿಐ
Team Udayavani, Oct 21, 2017, 6:00 AM IST
ಹೊಸದಿಲ್ಲಿ: ನಿಗದಿತ ಅವಧಿಯೊಳಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸದವರ ಖಾತೆ ಗಳನ್ನು ಅಮಾನತಿನಲ್ಲಿಡುವಂತೆ ಬ್ಯಾಂಕುಗಳಿಗೆ ತಾನು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಆಧಾರ್ ಸಂಖ್ಯೆ ಜೋಡಿಸದವರ ಖಾತೆಗಳನ್ನು ಅಮಾನತಿನಲ್ಲಿ ಡುವುದಾಗಿ ಕೆಲ ಬ್ಯಾಂಕುಗಳು ಸಾರ್ವಜನಿಕರಿಗೆ ಬೆದರಿಕೆ ಹಾಕು ತ್ತಿವೆ ಎಂದು ಯೋಗೇಶ್ ಸಪಾRಳೆ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರಿಸಿರುವ ಆರ್ಬಿಐ, ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಿಸುವ ನಿರ್ಧಾರ ಕೇಂದ್ರ ಸರಕಾರದ್ದೇ ಹೊರತು ಆರ್ಬಿಐನದ್ದಲ್ಲ ಎಂದಿದೆ. ಆಧಾರ್ ನೀಡದವರ ಖಾತೆಗಳನ್ನು ಅಮಾನತಿನಲ್ಲಿಡಲು ತಾನು ಬ್ಯಾಂಕುಗಳಿಗೆ ನಿರ್ದೇಶನ ನೀಡಿಲ್ಲ ಎಂದು ಹೇಳಿದೆ.
ವಿವಾದಕ್ಕೀಡಾದ ಆದೇಶ: ಆಧಾರ್ ಸಂಖ್ಯೆ ಜೋಡಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗಳು ಸರಕಾರವನ್ನೇ ಇಕ್ಕಟ್ಟಿಗೆ ತಂದು ನಿಲ್ಲಿಸಿವೆ ಎನ್ನಲಾಗುತ್ತಿದೆ. ಕೇಂದ್ರದ ವಿವಿಧ ಯೋಜನೆಗಳಿಗೆ ಆಧಾರ್ ಸಂಖ್ಯೆ ಜೋಡಣೆಯ ಗೊಂದಲಕ್ಕೆ ತೆರೆ ಎಳೆದಿರುವ ಸು. ಕೋರ್ಟ್, ಕೇವಲ 6 ಯೋಜನೆಗಳಿಗೆ ಮಾತ್ರ ಆಧಾರ್ ಜೋಡಣೆ ಸಾಕೆಂದು ಸ್ಪಷ್ಟವಾಗಿ ಹೇಳಿದೆ.