ಬಿಎಸ್ಎನ್ಎಲ್ನಿಂದ 444 ರೂ.ಗೆ ನಿತ್ಯ 4ಜಿಬಿ ಡಾಟಾ
Team Udayavani, Jun 16, 2017, 9:49 PM IST
ಹೊಸದಿಲ್ಲಿ: ಟೆಲಿಕಾಂ ರಂಗದಲ್ಲಿ ರಿಲಯನ್ಸ್ ಜಿಯೋದೊಂದಿಗೆ ಗುದ್ದಾಟಕ್ಕೆ ಇಳಿದಿರುವ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇದೀಗ ಮತ್ತೂಂದು ಭರ್ಜರಿ ಆಫರ್ ಘೋಷಿಸಿದೆ. ‘ಚೌಕ್ಕ 444’ ಹೆಸರಿನ ಈ ಪ್ಲಾನ್ ಹೊರತಂದಿದ್ದು, 90 ದಿನಗಳ ಪ್ಲಾನ್ ಹೊಂದಿದೆ. ಈ ಪ್ಲಾನ್ ಅಡಿ 444 ರೂ. ಪಾವತಿಸಿದರೆ, ನಿತ್ಯ 4 ಜಿಬಿ ಡಾಟಾ ಲಭ್ಯವಿರಲಿದೆ. ದೇಶಾದ್ಯಂತ ಎಲ್ಲಾ ಟೆಲಿಕಾಂ ವಲಯ ದಲ್ಲೂ ಈ ಪ್ಲಾನ್ ಲಭ್ಯವಿರಲಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. ‘ಮೊಬೈಲ್ ಗ್ರಾಹಕರಿಗಾಗಿ ಕಡಿಮೆ ದರದ ಪ್ಲಾನ್ಗಳನ್ನು ಪರಿಚಯಿಸಲು ಸಿದ್ಧರಾಗಿದ್ದೇವೆ. ಇತ್ತೀಚಿನ ಮಾರುಕಟ್ಟೆ ಪರಿಸ್ಥಿತಿಗನುಗುಣವಾಗಿ ನಾವು ಹೊಸ ಪ್ಲಾನ್ಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಬಿಎಸ್ಎನ್ಎಲ್ನ ನಿರ್ದೇಶಕ ಆರ್.ಕೆ.ಮಿತ್ತಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ