ಅಲಹಾಬಾದ್:ನಿವೃತ್ತ ಪೊಲೀಸ್ ಅಧಿಕಾರಿಯನ್ನು ಹಾಡಹಗಲೇ ಬಡಿದು ಕೊಂದರು
Team Udayavani, Sep 4, 2018, 11:18 AM IST
ಅಲಹಾಬಾದ್ (ಉ.ಪ್ರ.): ಇಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ದುಷ್ಕರ್ಮಿಗಳಿಬ್ಬರು ಹಾಡಹಗಲೇ ನಡುರಸ್ತೆಯಲ್ಲೇ ಬಡಿಗೆಗಳಿಂದ ಬಡಿದು ಕೊಂದು ಹಾಕಿರುವ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹತ್ಯೆಯ ಭಯಾನಕ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದ ವೈರಲ್ ಆಗಿವೆ.
ಹತ್ಯೆಗೀಡಾದ ನಿವೃತ್ತ ಅಧಿಕಾರಿ 70 ವರ್ಷದ ಅಬ್ದುಲ್ ಸಮೂದ್ ಖಾನ್ ಎಂದು ತಿಳಿದು ಬಂದಿದೆ. ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಖಾನ್ರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಶೋಧ ಆರಂಭಿಸಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿ ಹತ್ತಿರದ ಸಂಬಂಧಿಗಳೇ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.