ಡಿಜಿಟಲ್ ಆಧಾರ್, ಡ್ರೈವಿಂಗ್ ಲೈಸನ್ಸ್ ಅಧಿಕೃತ ಗುರುತು: ರೈಲ್ವೆ
Team Udayavani, Jul 5, 2018, 11:57 AM IST
ಹೊಸದಿಲ್ಲಿ : ರೈಲು ಪ್ರಯಾಣದ ವೇಳೆ ನಿಮ್ಮ ಗುರುತು ಪತ್ರ ಕಳೆದು ಹೋದರೆ ನೀವಿನ್ನು ಚಿಂತಿಸಬೇಕಾಗಿಲ್ಲ. ಸರಕಾರದ ಡಿಜಿ ಲಾಕರ್ ನಲ್ಲಿ ಭದ್ರಪಡಿಸಿಡಲಾಗಿರುವ ಆಧಾರ್ ಮತ್ತು ಡ್ರೈವಿಂಗ್ ಲೈಸನ್ಸ್ ನ ಸಾಫ್ಟ್ ಕಾಪಿ ಯನ್ನು ತಾನು ಸ್ವೀಕರಿಸುವುದಾಗಿ ರೈಲ್ವೆ ಇಲಾಖೆ ಹೇಳಿದೆ.
ಆದರೆ ನಿಮ್ಮ ಗುರುತು ಪತ್ರದ ಸಾಫ್ಟ್ ಕಾಪಿ ದಾಖಲೆಗಳು, ಭಾರತ ಸರಕಾರ ಪ್ರಜೆಗಳಿಗಾಗಿ ಕಲ್ಪಿಸಿರುವ ಡಿಜಿ ಲಾಕರ್ CLOUD ನಲ್ಲಿ ದಾಖಲಾಗಿರುವುದು ಅಗತ್ಯ. ಭಾರತ ಸರಕಾರ ತನ್ನ ಪ್ರಜೆಗಳ ಆಧಾರ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್ ಮುಂತಾದ ಅಧಿಕೃತ ದಾಖಲೆಗಳನ್ನು ಡಿಜಿ ಲಾಕರ್ನಲ್ಲಿ CLOUD ಮೂಲಕ ಶೇಖರಿಸಿಡುವ ವ್ಯವಸ್ಥೆಯನ್ನು ರೂಪಿಸಿ ನಿರ್ವಹಿಸುತ್ತಿದೆ.
ರೈಲು ಪ್ರಯಾಣಿಕರ ಅಧಾರ್ ಮತ್ತು ಡ್ರೈವಿಂಗ್ ಲೈಸನ್ಸ್ ಸಾಫ್ಟ್ ಕಾಪಿಯನ್ನು ಅಧಿಕೃತ ದಾಖಲೆಯಾಗಿ ಪರಿಗಣಿಸುವಂತೆ ರೈಲ್ವೆ ಇಲಾಖೆ ತನ್ನ ಎಲ್ಲ ವಲಯಗಳ ಮುಖ್ಯ ವಾಣಿಜ್ಯ ಮ್ಯಾನೇಜರ್ಗಳಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಹಾಗಿದ್ದರೂ ಪ್ರಯಾಣಿಕನು ತಾನೇ ಅಪ್ಲೋಡ್ ಮಾಡಿರುವ ಮತ್ತು “ಅಪ್ಲೋಡೆಡ್ ಡಾಕ್ಯುಮೆಂಟ್ಸ್’ ಸೆಕ್ಷನಲ್ಲಿರುವ ಈ ದಾಖಲೆ ಪತ್ರಗಳನ್ನು ಅಧಿಕೃತ ಗುರುತು ಸಾಕ್ಷ್ಯವಾಗಿ ಪರಗಣಿಸಲಾಗದು ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ