ರೊಹಿಂಗ್ಯಾ: ಭಾವನಾತ್ಮಕ ವಾದ ಬೇಡ ಎಂದ ಸುಪ್ರೀಂ
Team Udayavani, Oct 4, 2017, 9:27 AM IST
ಹೊಸದಿಲ್ಲಿ /ಲಂಡನ್: ದೇಶದಲ್ಲಿರುವ ಅಕ್ರಮ ರೊಹಿಂಗ್ಯಾ ವಲಸಿಗರನ್ನು ಹೊರ ಹಾಕುವ ಬಗ್ಗೆ ಯಾವುದೇ ರೀತಿಯ ಭಾವನಾತ್ಮಕ ಮಾತುಗಳನ್ನಾಡಬಾರದು. ಜತೆಗೆ ವಲಸಿಗರಿಗೆ ಸಂಬಂಧಿಸಿದಂತೆ ಇರುವ ಎಲ್ಲ ಅಂತಾರಾಷ್ಟ್ರೀಯ ಒಪ್ಪಂದ, ಶಿಷ್ಟಾಚಾರಗಳ ಬಗೆಗಿನ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರಕಾರ ಹಾಗೂ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 13ಕ್ಕೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಮಂಗಳವಾರ ತಿಳಿಸಿದೆ.
ಡಾಕ್ಟರೇಟ್ ಹಿಂಪಡೆದ ವಿವಿ: ಮತ್ತೂಂದೆಡೆ ಮ್ಯಾನ್ಮಾರ್ ನಾಯಕಿ ಆ್ಯಂಗ್ ಸಾನ್ ಸೂ ಕಿಗೆ ನೀಡಲಾಗಿರುವ ಡಾಕ್ಟರೇಟ್ ಪದವಿಯನ್ನು ಆಕ್ಸ್ಫರ್ಡ್ ವಿವಿ ವಾಪಸ್ ಪಡೆದಿದೆ. ಪ್ರಜಾಪ್ರಭುತ್ವ ಪರ ಹೋರಾಟ ನಡೆಸಿದ್ದಕ್ಕಾಗಿ 1997ರಲ್ಲಿ ಅದನ್ನು ನೀಡಲಾಗಿತ್ತು.