ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ
Team Udayavani, Aug 14, 2018, 6:00 AM IST
ಮುಂಬಯಿ: ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸೋಮವಾರ ಭಾರೀ ಕುಸಿತ ಕಂಡಿದ್ದು, 69.94ಕ್ಕೆ ತಲುಪಿದೆ. ಟರ್ಕಿ ಕರೆನ್ಸಿ ಲಿರಾ ಕುಸಿತದಿಂದಾಗಿ ಒಂದೇ ದಿನ ಡಾಲರ್ ವಿರುದ್ಧ ರೂಪಾಯಿ 110 ಪೈಸೆ ಮೌಲ್ಯ ಕಳೆದುಕೊಂಡು, 69.94ಕ್ಕೆ ತಲುಪಿದೆ. ಕಳೆದ 5 ವರ್ಷಗಳಲ್ಲೇ ಒಂದೇ ದಿನ ಇಷ್ಟು ಪ್ರಮಾಣದ ಇಳಿಕೆ ಕಂಡಿದ್ದು ಇದೇ ಮೊದಲು. ಡಾಲರ್ ವಿರುದ್ಧ ಲಿರಾ ಶೇ. 12 ಇಳಿಕೆ ಕಂಡಿದ್ದು, ಟರ್ಕಿಯಲ್ಲಿನ ಆರ್ಥಿಕ ಸಂಕಷ್ಟ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವೇ ಇದಕ್ಕೆ ಕಾರಣ ಎನ್ನಲಾಗಿದೆ. ಯೂರೋ, ಪೌಂಡ್, ದಿರಹಂ ಹಾಗೂ ಯೆನ್ ಎದುರೂ ಗಮನಾರ್ಹವಾಗಿ ರೂಪಾಯಿ ಕುಸಿತ ಕಂಡಿದೆ.