
Assam NRC ಆಕ್ಷೇಪ, ಕ್ಲೇಮು ಸ್ವೀಕಾರ ದಿನ ಮುಂದಕ್ಕೆ ಹಾಕಿದ ಸುಪ್ರೀಂ
Team Udayavani, Sep 5, 2018, 3:34 PM IST

ಹೊಸದಿಲ್ಲಿ : ಅಸ್ಸಾಂ ಎನ್‌ಆರ್‌ಸಿ (ಪೌರರ ರಾಷ್ಟ್ರೀಯ ರಿಜಿಸ್ಟ್ರಿ) ಆಕ್ಷೇಪ, ಕ್ಲೇಮುಗಳನ್ನು ಸ್ವೀಕರಿಸುವ ದಿನಾಂಕವನ್ನು ಮುಂದಕ್ಕೆ ಹಾಕಿದೆ.
ಎನ್‌ಆರ್‌ಸಿ ಸಂಚಾಲಕ ಪ್ರತೀಕ್ ಹಜೇಲಾ ಅವರ ವರದಿಗೆ ಪ್ರತಿಯಾಗಿ ಉತ್ತರ ಸಲ್ಲಿಸುವಂತೆ ಕೇಂದ್ರ ಮತ್ತು ಇತರ ಹಿತಾಸಕ್ತಿದಾರರನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರನ್ನು ಸುಪ್ರೀಂ ಕೋರ್ಟ್ ಪೀಠವು ಕೇಳಿಕೊಂಡಿದ್ದು ಈ ಕುರಿತ ಮುಂದಿನ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ.
ಜಸ್ಟಿಸ್‌ಗಳಾದ ರಂಜನ್ ಗೊಗೋಯ್ ಮತ್ತು ಆರ್ ಎಫ್ ನಾರಿಮನ್ ಅವರನ್ನು ಒಳಗೊಂಡ ಪೀಠವು, ಹಜೇಲಾ ಅವರ ವರದಿಯನ್ನು ಅವಲೋಕಿಸಿತು. ಈ ವರದಿಯಲ್ಲಿ ಹಜೇಲಾ ಅವರು ರಾಜ್ಯದ ಪೌರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸುವ ಕ್ಲೇಮಿಗೆ “ಎ’ ಪಟ್ಟಿಯಲ್ಲಿ ಸೂಚಿಸಲಾಗಿರುವ 15 ದಾಖಲೆ ಪತ್ರಗಳ ಪೈಕಿ ಹತ್ತನ್ನು ಅವಲಂಬಿಸಿದರೆ ಸಾಕೆಂದು ಹೇಳಿದ್ದಾರೆ.
ಅಸ್ಸಾಂ ಕರಡು ಎನ್‌ಆರ್‌ಸಿ ಗೆ ಈಚೆಗೆ ಸೇರಿಸಲ್ಪಟ್ಟಿರುವವವ ಪೈಕಿ ಶೇ.10ರಷ್ಟು ಮಂದಿಯ ಸೇರ್ಪಡೆಯನ್ನು ಪುನರ್ ಪರಿಶೀಲಿಸಬಹುದಾಗಿದೆ ಎಂದು ಕಳೆದ ಆ.28ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ಕೆಲಸವನ್ನು ಸ್ವತಂತ್ರ ತಂಡವೊಂದು ಮಾಡಬಹುದಾಗಿದೆ ಎಂದೂ ಅದು ಹೇಳಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ಗೋ ಫಸ್ಟ್ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನನ್ನನ್ನು ಒತ್ತೆಯಲ್ಲಿ ಇರಿಸಲಾಗಿದೆ: ಫ್ರೆಂಚ್ ನಟಿ ಮೇರಿಯನ್ನೆ ಆರೋಪ

ಸಂಸ್ಕೃತವೇಕೆ ದೇಶದ ಅಧಿಕೃತ ಭಾಷೆಯಾಗಬಾರದು?: ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ

ಟಿಪ್ಪು ಸುಲ್ತಾನ್ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
