ಶಾ ಭದ್ರತೆ ವಿವರ ಅಸಾಧ್ಯ:ಸಿಐಸಿ
Team Udayavani, Aug 27, 2018, 12:07 PM IST
ಹೊಸದಿಲ್ಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ನೀಡಲಾಗುತ್ತಿರುವ “ಝಡ್ ಪ್ಲಸ್’ ಭದ್ರತೆಗಾಗಿ ಕೇಂದ್ರ ಭರಿಸುತ್ತಿರುವ ವೆಚ್ಚದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಅಡಿಯಲ್ಲಿಯೂ ಹಂಚಿಕೊಳ್ಳಲು ಸಾಧ್ಯ ವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಪುನರುಚ್ಚರಿಸಿದೆ. ದೀಪಕ್ ಜುನೇಜಾ ಎಂಬವರು 2014ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಶಾ ಭದ್ರತಾ ವೆಚ್ಚಗಳ ಮಾಹಿತಿ ಕೇಳಿದ್ದರು. ಆಗಲೇ ಉತ್ತರಿಸಲು ನಿರಾಕರಿಸಿದ್ದ ಸಿಐ ಸಿ, ಗಣ್ಯ ವ್ಯಕ್ತಿಗಳಿಗೆ ಅಪಾಯ ಎದುರಾಗುವ ಭೀತಿಯಿದ್ದಲ್ಲಿ ಅವರ ಭದ್ರತೆ ವಿವರ ನೀಡದಿರಲು ಮಾಹಿತಿ ಹಕ್ಕು ಕಾಯ್ದೆಯಲ್ಲಿಅವಕಾಶವಿದೆ ಎಂದಿತ್ತು. ಆದರೆ, ಇದರ ವಿರುದ್ಧ ಜನೇಜಾ ದಿಲ್ಲಿ ನ್ಯಾಯಾಲಯದ ಮೊರೆ ಹೋಗಿ ದ್ದರಿಂದ ಈ ವಿಚಾರ ಪುನಃ ಸಿಐಸಿ ಅಂಗಳಕ್ಕೆ ಬಂದಿತ್ತು.