ಸೋದರಿಯ ಆಸ್ತಿ ಮೇಲೆ ಸೋದರನಿಗೆ ಹಕ್ಕಿಲ್ಲ: ಸುಪ್ರೀಂ
Team Udayavani, Feb 13, 2017, 3:45 AM IST
ನವದೆಹಲಿ: ಪತಿಯಿಂದ ಬಂದ ಪತ್ನಿಗೆ ಬಂದ ಆಸ್ತಿಯ ಮೇಲೆ ಆಕೆಯ ಸಹೋದರನಿಗೆ ಯಾವ ಅಧಿಕಾರವೂ ಇಲ್ಲ ಎಂಬ ಮಹತ್ವದ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ.
ಅಕ್ಕ ಅಥವಾ ತಂಗಿಗೆ ಆಕೆಯ ಗಂಡನಿಂದ ಬಂದ ಆಸ್ತಿಯ ಮೇಲೆ ಆಕೆಯ ಸಹೋದರನಿಗೆ ಯಾವುದೇ ಹಕ್ಕು ಇರುವುದಿಲ್ಲ. ಏಕೆಂದರೆ, ಆತ ಆಕೆಯ ಉತ್ತರಾಧಿಕಾರಿಯೂ ಅಲ್ಲ, ಆಕೆಯ ಕುಟುಂಬದ ಉತ್ತರಾಧಿಕಾರಿಯೂ ಅಲ್ಲ ಎಂದು ಕೋರ್ಟ್ ಹೇಳಿದೆ.
ಡೆಹ್ರಾಡೂನ್ನ ವ್ಯಕ್ತಿಯೊಬ್ಬನ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಈ ತೀರ್ಪು ನೀಡಿದೆ. 1940ರಲ್ಲಿ ಈತನ ಅಕ್ಕನ ಮಾವ(ಪತಿಯ ತಂದೆ) ಡೆಹ್ರಾಡೂನ್ನ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಅವರ ನಿಧನದ ನಂತರ, ಅಕ್ಕ-ಭಾವ ಅಲ್ಲಿ ವಾಸವಾಗಿದ್ದರು. ಪತಿಯ ಮರಣಾನಂತರ ಅದೇ ಮನೆಯಲ್ಲಿ ಅಕ್ಕ ನೆಲೆಸಿದ್ದಳು. ಬಳಿಕ ಆಕೆಯೂ ಮೃತಪಟ್ಟು, ಆ ಮನೆಯಲ್ಲಿ ವಾಸವಾಗಿದ್ದ ಈತ, ಅದನ್ನು ಖಾಲಿ ಮಾಡಲು ಒಪ್ಪಿರಲಿಲ್ಲ. ಅಕ್ಕನ ಆಸ್ತಿಯು ನನಗೇ ಸೇರುತ್ತದೆ ಎಂದು ಪಟ್ಟು ಹಿಡಿದಿದ್ದ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ ಬಳಿಕ, ಅಕ್ಕನ ಆಸ್ತಿಯ ಮೇಲೆ ತಮ್ಮನಿಗೆ ಹಕ್ಕಿಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಮೆಟ್ಟಿಲೇರಿದ್ದು, ಇದೀಗ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ. ಬಾನುಮತಿ ಅವರನ್ನೊಳಗೊಂಡ ನ್ಯಾಯಪೀಠವೂ ಉತ್ತರಾಖಂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ. ಜತೆಗೆ, ಕೂಡಲೇ ಮನೆಯನ್ನು ಮಾಲೀಕರಿಗೆ ಬಿಟ್ಟುಕೊಡುವಂತೆ ಅರ್ಜಿದಾರನಿಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ