ಒಂದೇ ಸ್ಕೂಟರ್ ನಲ್ಲಿ 6 ಮಂದಿ ಪಯಣ: ಪಿಕಪ್ ಢಿಕ್ಕಿಯಾಗಿ ನಾಲ್ವರು ದುರ್ಮರಣ
Team Udayavani, Mar 5, 2023, 12:59 PM IST
ಮಹಾರಾಷ್ಟ್ರ: ಪಿಕಪ್ – ಸ್ಕೂಟರ್ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಲಾತೂರ್ ನಲ್ಲಿ ಶುಕ್ರವಾರ ರಾತ್ರಿ (ಮಾ. 4 ರಂದು) ನಡೆದಿದೆ.
ಒಂದೇ ಕುಟುಂಬದ 6 ಮಂದಿ ಒಂದೇ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಲಾತೂರ್ ನ ತಹಸಿಲ್ನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪಿಕಪ್ ಸ್ಕೂಟರ್ಗೆ ಢಿಕ್ಕಿ ಹೊಡೆದಿದೆ .ಪರಿಣಾಮ ಸ್ಕೂಟರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ಮಕ್ಕಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಕೂಟರ್ನಲ್ಲಿ ಬಲಿಯಾದವರು ಲಾತೂರ್ನಿಂದ ಉಸ್ಮಾನಾಬಾದ್ಗೆ ಹೋಗುತ್ತಿದ್ದರು. ಬಲಿಯಾದವರು ಕಬ್ಬಿನ ಕಾರ್ಮಿಕರು ಎನ್ನಲಾಗಿದೆ. ಪಿಕಪ್ ನಲ್ಲಿದ್ದ ಒಂಬತ್ತು ಕುರಿಗಳು ಅಪಘಾತದ ತೀವ್ರತೆಗೆ ಮೃತಪಟ್ಟಿದೆ ಎಂದು ವರದಿ ತಿಳಿಸಿದೆ.