
ಒಂದೇ ಬಾರಿ 13,147 ಪ್ರಕರಣ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್
Team Udayavani, Sep 16, 2022, 10:45 PM IST

ನವದೆಹಲಿ: ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳ ಪೈಕಿ 13,147 ಪ್ರಕರಣಗಳನ್ನು ಒಂದೇ ಬಾರಿಗೆ ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ.
8 ವರ್ಷಕ್ಕೂ ಮೊದಲು ಈ ಪ್ರಕರಣಗಳ ಅರ್ಜಿಗಳನ್ನು ಗುಜರಾಯಿಸಲಾಗಿತ್ತು. ಈ ಪೈಕಿ ಒಂದು ಪ್ರಕರಣ 30 ವರ್ಷಗಳ ಹಿಂದೆ ಸಲ್ಲಿಕೆಯಾಗಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಆಯಾ ವಕೀಲರಿಗೆ ಅಥವಾ ಅರ್ಜಿದಾರರಿಗೆ ದೋಷಗಳನ್ನು ಸರಿಪಡಿಸುವಂತೆ ಸೂಚಿಸಿತ್ತು.
ಆದರೆ ಅವುಗಳನ್ನು ಸರಿಪಡಿಸಿರಲಿಲ್ಲ. ಹಾಗಾಗಿ ಇಷ್ಟು ವರ್ಷ ಈ ಪ್ರಕರಣಗಳು ಕೇವಲ ಪಟ್ಟಿಯಲ್ಲಿತ್ತು. ಇದರಿಂದ ಬಾಕಿ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಲು ಕಾರಣವಾಯಿತು. ಹಾಗಾಗಿ ಈ ರೀತಿಯ 13,147 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ಗೋ ಫಸ್ಟ್ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನನ್ನನ್ನು ಒತ್ತೆಯಲ್ಲಿ ಇರಿಸಲಾಗಿದೆ: ಫ್ರೆಂಚ್ ನಟಿ ಮೇರಿಯನ್ನೆ ಆರೋಪ

ಸಂಸ್ಕೃತವೇಕೆ ದೇಶದ ಅಧಿಕೃತ ಭಾಷೆಯಾಗಬಾರದು?: ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ

ಟಿಪ್ಪು ಸುಲ್ತಾನ್ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
