Victim ಬಾಲಕಿಯ ಫೋಟೋ ಪೋಸ್ಟ್: ಡಿಲೀಟ್ ಮಾಡಲು ರಾಹುಲ್ ಗೆ ಕೋರ್ಟ್ ಸೂಚನೆ
ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿದ್ದ ಅಪ್ರಾಪ್ತ ವಯಸ್ಕ ದಲಿತ ಬಾಲಕಿ
Team Udayavani, Dec 21, 2023, 6:12 PM IST
ಹೊಸದಿಲ್ಲಿ: 2021 ರಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿದ್ದ ಅಪ್ರಾಪ್ತ ವಯಸ್ಕ ದಲಿತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸೂಚಿಸಿದೆ.
ಎಕ್ಸ್ನಿಂದ ಬ್ಲಾಕ್ ಆಗಿರುವ ಪೋಸ್ಟ್ನಲ್ಲಿ, ರಾಹುಲ್ ಗಾಂಧಿ ಅವರು , 2021 ರ ಆಗಸ್ಟ್ 1 ರಂದು ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದ ಒಂಬತ್ತು ವರ್ಷದ ದಲಿತ ಬಾಲಕಿಯ ಪೋಷಕರೊಂದಿಗಿದ್ದ ಫೋಟೋ ಪ್ರಕಟಿಸಿದ್ದರು. ನೈಋತ್ಯ ದೆಹಲಿಯ ಓಲ್ಡ್ ನಂಗಲ್ ಗ್ರಾಮದಲ್ಲಿ ಶ್ಮಶಾನದ ಅರ್ಚಕರಿಂದ ಅತ್ಯಾಚಾರ, ಕೊಲೆ ನಡೆಸಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದರು.
ಪೋಸ್ಟ್ ಮಾಡಿದ ನಂತರ, ಸಾಮಾಜಿಕ ಮಾಧ್ಯಮ ವೇದಿಕೆಯಿಂದ ರಾಹುಲ್ ಗಾಂಧಿಯವರ ಖಾತೆಯನ್ನು ಸ್ವಲ್ಪ ಸಮಯದವರೆಗೆ ಅಮಾನತುಗೊಳಿಸಲಾಗಿತ್ತಾದರೂ ನಂತರ ಅದನ್ನು ಮತ್ತೆ ಸಕ್ರಿಯ ಮಾಡಲಾಗಿತ್ತು.