ತಮಿಳುನಾಡು: 74 ಸ್ಥಳಗಳಲ್ಲಿ 70ಕ್ಕೂ ಹೆಚ್ಚು ಅಧಿಕಾರಿಗಳಿಂದ IT ದಾಳಿ
Team Udayavani, Jan 29, 2019, 5:57 AM IST
ಹೊಸದಿಲ್ಲಿ : ಆದಾಯ ತೆರಿಗೆ ಇಲಾಖಾಧಿಕಾರಿಗಳು ಇಂದು ಮಂಗಳವಾರ ತಮಿಳು ನಾಡಿನ ಸುಮಾರು 74 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿರುವುದಾಗಿ ವರದಿಯಾಗಿದೆ.
ತೆರಿಗೆ ಪಾವತಿಸದೆ ತಪ್ಪಿಸಿಕೊಂಡ ಪ್ರಕರಣಗಳ ತನಿಖೆಯ ಭಾಗವಾಗಿ ಐಟಿ ಅಧಿಕಾರಿಗಳು ತಮಿಳು ನಾಡಿನ ಅನೇಕ ರಿಯಲ್ ಎಸ್ಟೇಟ್ ಗ್ರೂಪ್ ಮತ್ತು ರಿಟೇಲ್ ಚೈನ್ ಗಳ ಮೇಲೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಐಟಿ ಇಲಾಖಾಧಿಕಾರಿಗಳ ಈ ದಾಳಿಯಲ್ಲಿ ಶರವಣ ಸಮೂಹದ ಮಾಲಕರಾಗಿರುವ ಯೋಗಿರತಿನಂ ಪೊಂದುರೈ ಅವರು ಕೂಡ ಒಳಗೊಂಡಿದ್ದಾರೆ.
74 ಸ್ಥಳಗಳ ಮೇಲಿನ ಐಟಿ ದಾಳಿಯಲ್ಲಿ 70ಕ್ಕೂ ಅಧಿಕ ಇಲಾಖಾಧಿಕಾರಿಗಳು ಭಾಗಿಯಾಗಿದ್ದಾರೆ. ಇವರಿಗೆ ರಾಜ್ಯ ಪೊಲೀಸರು ಕೂಡ ನೆರವಾಗಿದ್ದಾರೆ. ಕಳೆದ ತಿಂಗಳಲ್ಲಿ ಐಟಿ ಇಲಾಖಾಧಿಕಾರಿಗಳು ಶರವಣ ಭವನದ ವಿವಿಧ ಹೊಟೇಲುಗಳು ಮಾತ್ರವಲ್ಲದೆ ಅನೇಕ ಜನಪ್ರಿಯ ಹೊಟೇಲುಗಳ ಮೇಲೂ ದಾಳಿ ನಡೆಸಿದ್ದರು.