ಹಳಿ ತಪ್ಪಿದ ಟಾಯ್ಟ್ರೈನ್: 5 ಮಂದಿಗೆ ಗಾಯ
Team Udayavani, Jan 12, 2017, 3:45 AM IST
ಡಾರ್ಜಿಲಿಂಗ್ (ಪ.ಬಂ): ಡಾರ್ಜಿ ಲಿಂಗ್ನಿಂದ ಸಿಲಿಂಗುರಿಗೆ ತೆರಳುತ್ತಿದ್ದ ಪ್ರಸಿದ್ಧ ಟಾಯ್ ಟ್ರೈನ್ ಹಳಿ ತಪ್ಪಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿ ರುವ ಘಟನೆ ಮಂಗಳವಾರ ಮುಜಾನೆ ನಡೆದಿದೆ.
ಕುರ್ಸೆಯೋಂಗ್ ಮತ್ತು ಮಹಾನದಿ ನಡುವೆ ರೈಲು ಸಂಚರಿಸುವಾಗ ಎಂಜಿನ್ ಮತ್ತು ಎರಡು ಬೋಗಿಗಳು ಹಳಿ ತಪ್ಪಿ ಅವಘಡ ಸಂಭವಿಸಿದೆ. ಘಟನೆಯಿಂದ ಚಾಲಕ ಸೇರಿ ಸುಮಾರು 5 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣಿವೆ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರು ವುದು ಘಟನೆಗೆ ಕಾರಣವಾಗಿರಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.