ಅನಂತ ಪದ್ಮನಾಭನ ಸನ್ನಿಧಿಯಲ್ಲೇ ನಾಪತ್ತೆಯಾದ ವಜ್ರದ ಹರಳು ಪತ್ತೆ


Team Udayavani, Sep 17, 2017, 6:55 AM IST

temple.jpg

ತಿರುವನಂತಪುರ: ಒಂದು ವರ್ಷದ ಹಿಂದೆ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಿಂದ ಕಳವಾಗಿತ್ತು ಎಂದು ಹೇಳಲಾಗಿದ್ದ  ಕೋಟ್ಯಂತರ ರೂ. ಮೌಲ್ಯದ 12ಕ್ಕೂ ಹೆಚ್ಚು ವಜ್ರದ ಹರಳುಗಳು ಅಚ್ಚರಿ ಎನ್ನುವಂತೆ ದೇವಾಲಯದ ಆವರಣದಲ್ಲಿಯೇ ಪತ್ತೆಯಾಗಿವೆ. ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸುವ ಸಮಯದಲ್ಲಿಯೇ ಪತ್ತೆಯಾಗಿವೆ.

ಭಾರೀ ಬೆಲೆಬಾಳುವ ವಜ್ರ, ಚಿನ್ನಾಭರಣಗಳನ್ನು ಹೊಂದಿರುವ ಅನಂತ ಪದ್ಮನಾಭನಿಗೆ ಸೇರಿದ ಆಭರಣಗಳಲ್ಲಿದ್ದ ಈ ವಜ್ರದ ಹರಳುಗಳು ನಾಪತ್ತೆಯಾಗಿದ್ದವು. ಅಲಂಕಾರದ ವೇಳೆ ಬಳಸ ಲಾಗುತ್ತಿದ್ದ ವಜ್ರದ ಹರಳುಗಳು ವರ್ಷದ ಹಿಂದೆ ಕಾಣದೇ ಇದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ಪ್ರಾಥಮಿಕ ತನಿಖೆ ಪ್ರಕಾರ ಈ ಹರಳುಗಳು ಕಳುವಾಗಿರಲಿಲ್ಲ. ಅವು ಕಣ್ಣಿಗೆ ಕಾಣದ ಸ್ಥಳದಲ್ಲಿ ಬಿದ್ದಿದ್ದವು. ತನಿಖೆ ವೇಳೆ ಇವು ಪತ್ತೆಯಾಗಿವೆ. ದೇಗುಲದಲ್ಲಿದ್ದ ಅಮೂಲ್ಯ 26 ಹರಳುಗಳಲ್ಲಿ ಈ 12 ಹರಳುಗಳು ಕೂಡ ಸೇರಿವೆ ಎಂದು ಅಪರಾಧ ಪತ್ತೆ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಜ್ರಗಳು ಅನಂತ ಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿನ “ಬಿ’ ಮತ್ತು “ಎಫ್’ ಕೋಣೆ ಗಳಲ್ಲಿ ಪತ್ತೆಯಾಗಿದ್ದವು. ಪೊಲೀಸರಿಗೆ ದೂರು ಕೊಟ್ಟಾಗ ದೇಗುಲ ನಿರ್ವಾಹಕರು 22 ವಜ್ರಗಳು ಕಾಣೆಯಾಗಿವೆ ಎಂದು ಹೇಳಿದ್ದರು. ಆದರೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಒಟ್ಟು ಇದ್ದ 26 ವಜ್ರಗಳಲ್ಲಿ 12 ಮಾತ್ರ ಕಾಣೆಯಾಗಿದ್ದವು. ಅವುಗಳನ್ನು ಯಾರೂ ಕದ್ದಿರಲಿಲ್ಲ. ಬದಲಾಗಿ ಎಲ್ಲೋ ಇಟ್ಟು ಮರೆತುಬಿಡಲಾಗಿತ್ತು. ಇದೀಗ ಸಿಕ್ಕಿವೆ ಎಂದು ತನಿಖೆ ನಡೆಸುತ್ತಿದ್ದ ಅಧಿಕಾರಿ ಐಜಿ ಎಸ್‌. ಶ್ರೀಜಿತ್‌ ಹೇಳಿದ್ದಾರೆ.

ಜುಲೈಯಲ್ಲಿ  ಸುಪ್ರೀಂ ಕೋರ್ಟ್‌ಗೆ ಮಾಹಿತಿ
ದೇಗುಲದಿಂದ ವಜ್ರಗಳು ಕಾಣೆಯಾಗಿದ್ದ ಬಗ್ಗೆ ಕಳೆದ ಜುಲೈಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಪರ ವಾದ ನಡೆಸುತ್ತಿರುವ ಹಿರಿಯ ವಕೀಲ ಗೋಪಾಲ್‌ ಸುಬ್ರಹ್ಮಣ್ಯಂ ಅವರು, ವಜ್ರಗಳು ಕಾಣೆಯಾದ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಇದಕ್ಕೆ ದೇಗುಲದ ನಿರ್ಲಕ್ಷ éದ ನಿರ್ವಹಣೆಯೇ ಕಾರಣ ಎಂದು ಹೇಳಿದ್ದರು. ಅಲ್ಲದೆ ಕಳೆದ ವರ್ಷ 189 ಕೋಟಿ ರೂ. ಮೌಲ್ಯದ ಚಿನ್ನವೂ ಕಣ್ಮರೆಯಾಗಿತ್ತು ಎಂದು ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.