ನೀರು ಕುಡಿಯಲು ಈ ಕಾಗೆ ಏನು ಮಾಡಿತು ನೋಡಿ!
Team Udayavani, Mar 26, 2021, 4:34 PM IST
ಬೇಸಿಗೆಯ ಧಗೆ ಮೈ ಬೆವರನ್ನು ಇಳಿಸುತ್ತಿದೆ. ಎಲ್ಲಿ ನೋಡಿದರೂ ನೆತ್ತಿ ಸುಡುವ ಬಿಸಿಲು. ಕಣ್ಣಾಯಿಸಿದಷ್ಟೂ ನಿಗಿ ನಿಗಿ ಉರಿಯುವ ಹಬೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿವೆ. ಮನೆ ಮೇಲೆ, ಹೊಂಡಗಳಲ್ಲಿ, ಕೆರೆ ಬಾವಿಗಳಲ್ಲಿ ನೀರು ಸಿಗುತ್ತದೆಯಾ ಎಂದು ಹುಡುಕುತ್ತಿವೆ. ಇದೇ ಹಿನ್ನೆಲೆಯಲ್ಲಿ ಕಾಗೆಯೊಂದು ನೀರು ಕುಡಿಯಲು ಒಂದೊಳ್ಳೆ ಪ್ಲಾನ್ ಮಾಡಿದೆ.
ನಾವು ಈ ಹಿಂದೆ ಕಾಗೆ ನೀರು ಕುಡಿಯಲು ಮಡಕೆಯೊಳಗೆ ಕಲ್ಲುಗಳನ್ನು ಹಾಕಿ ನೀರು ಕುಡಿದಿದ್ದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಮಾರ್ಡನ್ ಕಾಗೆ ಕೊಳಾಯಿಯನ್ನೇ ತಿರುಗಿಸಿ ನೀರು ಕುಡಿದಿದೆ.
ಹೌದು ಈ ಅಪರೂಪದ ವಿಡಿಯೋವನ್ನು ಅರಣ್ಯ ಸೇವೆ ಮಾಡುತ್ತಿರುವ ಸುಸಂತ ನಂದ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ನಲ್ಲಿಯನ್ನು ಕಂಡ ಕಾಗೆಯೊಂದು ಅಲ್ಲಿ ಹಾರಿ ಬಂದು ಅದರ ಮೇಲೆ ಕುಳಿತು ತನ್ನ ಕೊಕ್ಕಿನಿಂದ ನೀರನ್ನು ಚಾಲನೆ ಮಾಡಿ ಕುಡಿದಿದೆ. ಈ ವಿಡಿಯೋಕ್ಕೆ ‘ಕಾಗೆಯ ಕಲೆ’ ಎಂದು ಸುಸಂತ ಅವರು ಕ್ಯಾಪ್ಶನ್ ಕೊಟ್ಟಿದ್ದಾರೆ.
Skilled crow pic.twitter.com/Fc6OUC1jeo
— Susanta Nanda IFS (@susantananda3) March 26, 2021