ಪುರಿ ಕೊನಾರ್ಕದಲ್ಲಿ ವಾರ್ಷಿಕ ಮಾಘ ಮೇಳ: ಪವಿತ್ರ ಸಮುದ್ರ ಸ್ನಾನ
Team Udayavani, Feb 12, 2019, 10:45 AM IST
ಭುವನೇಶ್ವರ : ಮಾಘ ಸಪ್ತಮಿಯಂದು ನಡೆಯುವ ವಾರ್ಷಿಕ ಮಾಘ ಮೇಳದ ಪವಿತ್ರ ಸಂದರ್ಭದಲ್ಲಿ ಇಂದು ಮಂಗಳವಾರ ಸಹಸ್ರಾರು ಶ್ರದ್ಧಾಳುಗಳು ಒಡಿಶಾದ ಪುರಿ ಜಿಲ್ಲೆಯ ಕೊನಾರ್ಕ್ ಸಮೀಪದ ಚಂದ್ರಭಾಗಾ ಸಮುದ್ರ ತೀರದಲ್ಲಿ ನಸುಕಿನ ವೇಳೆ ಪವಿತ್ರ ಸ್ನಾನ ಗೈದು ಸೂರ್ಯ ದೇವರಿಗೆ ಪೂಜೆ ಸಲ್ಲಿಸಿದರು.
ಮಾಘ ಮಾಸ ಶುಕ್ಲ ಪಕ್ಷದ ಏಳನೇ ದಿನವು ಸೂರ್ಯ ದೇವರ ಪವಿತ್ರ ಜನ್ಮ ದಿನವೆಂದು ತಿಳಿಯಲಾಗಿದ್ದು ಆ ಪ್ರಕಾರ ಇಂದು ಸಹಸ್ರಾರು ಶ್ರದ್ಧಾಳುಗಳು ತಮ್ಮ ಪಾಪ ಪರಿಮಾರ್ಜನೆ ಮತ್ತು ಚರ್ಮ ರೋಗದಿಂದ ಮುಕ್ತಿ ಪಡೆಯಲು ಸಮುದ್ರ ಸ್ನಾನ ಕೈಗೊಂಡರು.
ಪೌರಾಣಿಕ ನಂಬಿಕೆ ಪ್ರಕಾರ ಭಗವಾನ್ ಶ್ರೀ ಕೃಷ್ಣನ ಪುತ್ರ ಸಾಂಬಾ, ಚಂದ್ರಭಾಗಾ ಸಮುದ್ರ ತೀರದಲ್ಲಿ ಇದೇ ದಿನ ಪವಿತ್ರ ಸ್ನಾನಗೈದು ಸೂರ್ಯ ದೇವರನ್ನು ಪೂಜಿಸುವ ಮೂಲಕ ತನಗಂಟಿದ ಕುಷ್ಠ ರೋಗದಿಂದ ಮುಕ್ತನಾಗಿದ್ದ ಎಂಬ ಐತಿಹ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!