
ಸರಸ್ವತಿ ಪೂಜೆ ಕಾರಣ ಬಜೆಟ್ ದಿನ ನಾವು ಸಂಸತ್ತಿಗೆ ಬರಲ್ಲ : TMC
Team Udayavani, Jan 30, 2017, 12:11 PM IST

ಹೊಸದಿಲ್ಲಿ : ಫೆ.1ರ ಬಜೆಟ್ ಮಂಡನೆಯ ದಿನದಂದು ತೃಣಮೂಲ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ಹಾಜರಿರುವುದಿಲ್ಲ. ಬಹುಕೋಟಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರನ್ನು ಬಂಧಿಸಿರುವುದೇ ಇದಕ್ಕೆ ಕಾರಣಎಂದು ತಿಳಿಯಲಾಗಿದೆ.
ಆದರೆ ತೃಣಮೂಲ ಪಕ್ಷ ಮಾತ್ರ ಕೊಟ್ಟಿರುವ ಕಾರಣವೇ ಬೇರೆ ಇದೆ: ಅದೆಂದರೆ ಅಂದು, ಫೆ.1ರಂದು ಸರಸ್ವತಿ ಪೂಜೆ ಇರುವುದರಿಂದ ತಾನು ಸಂಸತ್ತಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅದು ಹೇಳಿದೆ !
ಇದೇ ವೇಳೆ, ಇಂದು ಸಂಜೆ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಬಜೆಟ್ ಅಧಿವೇಶನದ ಕುರಿತಾಗಿ ಕರೆದಿರುವ ಸರ್ವ ಪಕ್ಷ ಸಭೆಯಲ್ಲೂ ತಾನು ಭಾಗವಹಿಸುವುದಿಲ್ಲ ಎಂದು ತೃಣಮೂಲ ಪಕ್ಷ ಹೇಳಿದೆ. ಬಜೆಟ್ ಅಧಿವೇಶನ ನಾಳೆ ಮಂಗಳವಾರದಿಂದ ಆರಂಭಗೊಳ್ಳಲಿದೆ.
“ಸರಸ್ವತಿ ಪೂಜೆ ನಮಗೆ ಬಂಗಾಲದಲ್ಲಿ ಬಹುದೊಡ್ಡ ದಿನವಾಗಿದೆ. ಅಂದು ನಾವು ಯಾರೂ ಕೆಲಸ ಮಾಡುವುದಿಲ್ಲ ಮಾತ್ರವಲ್ಲ ಕೆಲಸ ಕಾರ್ಯಗಳ ಸಲಕರಣೆಗಳನ್ನು ಕೂಡ ಮುಟ್ಟುವುದಿಲ್ಲ. ಏಕೆಂದರೆ ಸರಸ್ವತಿ ಪೂಜೆ ಎನ್ನುವುದು ನಮಗೆ ಧಾರ್ಮಿಕ ಉತ್ಸವಗಳಿಗಿಂತಲೂ ಮಿಗಿಲಾದುದು; ಇದು ಬಂಗಾಲದ ಸಾಮಾಜಿಕ-ಸಾಂಸ್ಕೃತಿಕ ಉತ್ಸವವಾಗಿದೆ’ ಎಂದು ಟಿಎಂಸಿ ನಾಯಕ ಹಾಗೂ ಸಂಸದರಾಗಿರುವ Derek O’Brien ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಶಾಂತಿ ಭೂಷಣ್ ಇನ್ನಿಲ್ಲ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ದಾಖಲೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ

ಪಿಎಂ ಕೇರ್ಸ್ ಸರ್ಕಾರದ್ದಲ್ಲ, ಸ್ವತಂತ್ರ ದತ್ತಿ ಸಂಸ್ಥೆ!

ಅಪಪ್ರಚಾರಕ್ಕಾಗಿ ಬಿಬಿಸಿಗೆ ಚೀನಾದಿಂದ ಹಣಕಾಸು ನೆರವು? ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
