ವಾಹನದಲ್ಲಿ ತಂದೆ ಎದುರೇ ಪುತ್ರಿಯರ ಮೇಲೆ ಗ್ಯಾಂಗ್ ರೇಪ್
Team Udayavani, Mar 17, 2017, 5:04 PM IST
ದಹೂಡ್ (ಗುಜರಾತ್): ತಂದೆಯೆದುರೇ ಹದಿ ಹರೆಯದ ಇಬ್ಬರು ಬಾಲಕಿಯರನ್ನು ಚಲಿಸುತ್ತಿರುವ ವಾಹನದಲ್ಲಿಯೇ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಒಟ್ಟು ಆರು ಮಂದಿ ಈ ಕುಕೃತ್ಯವೆಸಗಿದ್ದಾರೆಂದು ಆರೋಪಿಸಿದ್ದು, ಐದು ಮಂದಿಯನ್ನು ಬಂಧಿಸಲಾಗಿದೆ.
ದಹೋದ್ ಜಿಲ್ಲೆಯ ದೇವಗಡ ಬಾರಿಯಾ ತಾಲೂಕಿನಲ್ಲಿ ಈ ಕುಕತ್ಯ ನಡೆದಿದೆ. ಕುಮಾತ್ ಬಾರಿಯಾ, ಗೋಪ್ಸಿನ್ ಬಾರಿಯಾ ಮತ್ತು ಇತರರು ಹದಿ ಹರೆಯದ ಇಬ್ಬರು ಬಾಲಕಿಯರನ್ನು ಹಾಗೂ ತಂದೆಯನ್ನು ಅಪಹರಿಸಿದ್ದರು.
ಅತ್ಯಾಚಾರ ಎಸಗಿದವರ ಪೈಕಿ ನಾಲ್ವರು ಬೈಕ್ಗಳಲ್ಲಿ ವಾಹನವನ್ನು ಹಿಂಬಾಲಿಸಿದ್ದರು. ಪಾನನಿಷೇಧ
ಪ್ರಕರಣವೊಂದರಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿಯ ಪುತ್ರ ಬಂಧಿತನಾಗಿದ್ದ ಅದಕ್ಕೆ ಪ್ರತೀಕಾರವಾಗಿ ಈ
ಕೃತ್ಯವೆಸಗುತ್ತಿರುವುದಾಗಿ ಹೇಳಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಿದರೆ ಪರಿಸ್ಥಿತಿ ನೆಟ್ಟಗಿರದು ಎಂದೂ ಕಿಡಿಗೇಡಿಗಳು ಬೆದರಿಸಿದ್ದಾರೆಂದು ದೂರಿನಲ್ಲಿ ಆಪಾದಿಸಲಾಗಿದೆ. ಬಳಿಕ ಬಾಲಕಿಯರನ್ನು ಗ್ರಾಮವೊಂದರ ಬಳಿ ಬಿಟ್ಟು ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ