ವರದಕ್ಷಿಣೆಗಾಗಿ ಪತ್ನಿ ನೇತುಹಾಕಿದ!
Team Udayavani, Apr 17, 2018, 10:20 AM IST
ಶಹಜಹಾನ್ಪುರ: ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಬೆಲ್ಟಿನಿಂದ ಮನಬಂದಂತೆ ಥಳಿಸಿ, ಸೀಲಿಂಗ್ ಫ್ಯಾನ್ಗೆ ನೇತುಹಾಕಿದ ಮನಕಲಕುವ ಘಟನೆ ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ. ಈ ಹಿಂಸಾಚಾರದ ಸಂಪೂರ್ಣ ದೃಶ್ಯಾವಳಿಯನ್ನು ಆತ ಪತ್ನಿಯ ಕುಟುಂಬದವರಿಗೆ ಕಳುಹಿಸಿ, ವರದಕ್ಷಿಣೆ ನೀಡದಿದ್ದರೆ ಮತ್ತಷ್ಟು ಹಿಂಸೆ ನೀಡುವ ಬೆದರಿಕೆ ಒಡ್ಡಿದ್ದಾನೆ.
ಆತ ಮಹಿಳೆಗೆ ತವರಿನಿಂದ 50,000 ರೂ. ವರದಕ್ಷಿಣೆ ತರಲು ಹೇಳಿದ್ದ. ಮಹಿಳೆ ನಿರಾಕರಿಸಿದಾಗ ಈ ಹಿಂಸಾಚಾರ ನಡೆಸಿದ್ದಾನೆ. ‘ನನ್ನ ಗಂಡ ನನ್ನನ್ನು ಸತತವಾಗಿ ನಾಲ್ಕು ಗಂಟೆಗಳ ಕಾಲ ಥಳಿಸಿದ. ನಾನು ಪ್ರಜ್ಞಾಹೀನಳಾದೆ. ನನಗೆ ಪ್ರಜ್ಞೆ ಬರುತ್ತಲೇ ಆತ ನನ್ನ ಕೈಗಳನ್ನು ಫ್ಯಾನಿಗೆ ಕಟ್ಟಿ ನೇತುಹಾಕಿದ್ದ ಎಂದು ಮಹಿಳೆ ಹೇಳಿದ್ದಾರೆ. ವರದಕ್ಷಿಣೆ ನಿಗ್ರಹ ಕಾಯ್ದೆ ಅಡಿ ವ್ಯಕ್ತಿ ಮತ್ತು ಆತನ ಕುಟುಂಬದ ಇತರ ನಾಲ್ವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ