ಝೊಮಾಟೊ ಡೆಲಿವರಿ ಹುಡುಗನ ಮೇಲೆ ಪೊಲೀಸರ ಅಮಾನುಷ ಹಲ್ಲೆ; ವಿಡಿಯೋ ವೈರಲ್
Team Udayavani, Jan 6, 2022, 12:23 PM IST
ಚೆನ್ನೈ: ಝೊಮಾಟೊ ಫುಡ್ ಡೆಲಿವರಿ ಮಾಡುವ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನಲ್ಲಿ ನಡೆದಿದೆ.
ಝೊಮಾಟೊ ಡೆಲಿವರಿ ಮಾಡುವ ವ್ಯಕ್ತಿ ವೆಂಕಟೇಶ್ ಎಂಬಾತನನ್ನು ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಧರ್ಮರಾಜ್ ಎಂಬಾತ ಅಮಾನುಷವಾಗಿ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆಯನ್ನು ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ವೆಂಕಟೇಶ್ ಸಬ್ ಇನ್ಸ್ಪೆಕ್ಟರ್ ಧರ್ಮರಾಜ್ ಅವರ ಭುಜವನ್ನು ಹಿಡಿದಿರುವುದು ಕಂಡುಬರುತ್ತದೆ. ಧರ್ಮರಾಜ್ ತಕ್ಷಣವೇ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಕ್ರೂರವಾಗಿ ಥಳಿಸಲು ಪ್ರಾರಂಭಿಸಿದ್ದಾನೆ.
ವೆಂಕಟೇಶ್ ಅವರು ಚಾಕು ಹೊರತೆಗೆದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಜೋಹಾನ್ಸ್ ಬರ್ಗ್ ಟೆಸ್ಟ್ ನಲ್ಲಿ ಜಸ್ಪ್ರೀತ್- ಜೆನ್ಸನ್ ಜಗಳ; ಓಡಿ ಬಂದ ಅಂಪೈರ್: ವಿಡಿಯೋ ನೋಡಿ
ಆದರೆ ವೆಂಕಟೇಶ್ ಮತ್ತು ಪೊಲೀಸ್ ನಡುವೆ 600 ರೂ. ದಂಡಕ್ಕಾಗಿ ಜಗಳ ನಡೆದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವೆಂಕಟೇಶ್ ಬಳಿ ಆತನ ವಾಹನದ ಅಗತ್ಯ ದಾಖಲೆಗಳು ಇಲ್ಲದಿರುವ ಕಾರಣ ದಂಡ ವಿಧಿಸಲಾಗಿದೆ.
ಶ್ರೀವಿಲ್ಲಿಪುತ್ತೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 294 (ಬಿ), 353, 307 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.