Video post: ‘ವಾಟ್ಸ್ ರಾಂಗ್ ವಿಥ್ ಇಂಡಿಯಾ’ಕ್ಕೆ ತಿರುಗೇಟು
Team Udayavani, Mar 14, 2024, 1:21 AM IST
ಹೊಸದಿಲ್ಲಿ: ಭಾರತವನ್ನು ಮತ್ತು ಭಾರತೀಯರನ್ನು ಕೆಟ್ಟದಾಗಿ ಬಿಂಬಿಸಲು ಎಕ್ಸ್ನಲ್ಲಿ ಕೆಲವರು ಶುರು ಮಾಡಿದ್ದ “ವಾಟ್ಸ್ ರಾಂಗ್ ವಿದ್ ಇಂಡಿಯಾ’ ಟ್ರೆಂಡ್ಗೆ ಭಾರತ ತಿರುಗೇಟು ನೀಡಿದೆ. ದೇಶದ ಸಾಧನೆಗಳನ್ನು ಇದೇ ಟ್ರೆಂಡ್ನ ಮೂಲಕ ಜಾಲತಾಣ ಗಳಲ್ಲಿ ಪಸರಿಸಲಾಗುತ್ತಿದ್ದು, ಬುಧವಾರ “ವಾಟ್ಸ್ ರಾಂಗ್ ವಿಥ್ ಇಂಡಿಯಾ’ ಟಾಪ್ ಟ್ರೆಂಡ್ ಆಗಿ ಮಾರ್ಪಾಡಾಗಿದೆ.
ಹೌದು, ಕೆಲವು ಎಕ್ಸ್ ಬಳಕೆದಾ ರರು “ವಾಟ್ಸ್ ರಾಂಗ್ ವಿಥ್ ಇಂಡಿಯಾ’ ಎಂಬ ಹ್ಯಾಷ್ಟ್ಯಾಗ್ ಬಳಸಿ ದೇಶದಲ್ಲಿ ನಡೆದ ಕೆಲವು ಅಹಿಕತರ ಘಟನೆಗಳ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರಕಾರದ ಖಾತೆಯಲ್ಲಿ ಭಾರತದ ಸಾಧನೆಗಳನ್ನು ಪಟ್ಟಿ ಮಾಡುತ್ತಾ “ವಾಟ್ಸ್ ರಾಂಗ್ ವಿಥ್ ಇಂಡಿಯಾ’ ಎಂದು ತಿರುಗೇಟು ನೀಡಲಾಗಿದೆ.
ಭಾರತ ಕಡುಬಡತನ ತೊಡೆದುಹಾಕಿದೆ ಎಂದು ಐಎಂಎಫ್ ಹೇಳಿದೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಯೊಂದಿಗೆ ಈ ಹಿಂದಿನ ಜಿಡಿಪಿ ಬೆಳವ ಣಿಗೆಯ ಅಂದಾಜನ್ನೂ ಭಾರತ ಮೀರಿ ಸುತ್ತಿದೆ ಎಂದು ಐಎಂಎಫ್ ತಿಳಿಸಿದೆ ಎಂಬುದನ್ನು ಪೋಸ್ಟ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ