West Bengal ; ಕಾರು ಅಪಘಾತದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ
Team Udayavani, Jan 24, 2024, 4:20 PM IST
ಕೋಲ್ಕತಾ : ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಬುರ್ದ್ವಾನ್ನಿಂದ ಕೋಲ್ಕತಾಗೆ ರಸ್ತೆ ಮಾರ್ಗವಾಗಿ ಹಿಂದಿರುಗುತ್ತಿದ್ದಾಗ ಮಮತಾ ಅವರಿದ್ದ ಕಾರಿನ ಮುಂದಿದ್ದ ಬೆಂಗಾವಲು ಪಡೆಯ ಕಾರು ಏಕಾಏಕಿ ಬ್ರೇಕ್ ಹಾಕಿದ್ದರಿಂದ ಘಟನೆ ಸಂಭವಿಸಿದೆ.
ಹವಾಮಾನ ವೈಪರೀತ್ಯದಿಂದಾಗಿ ಮಮತಾ ಬ್ಯಾನರ್ಜಿ ಅವರ ಹಣೆಗೆ ಗಾಯವಾಗಿದ್ದು ಅವರು ಹೆಲಿಕಾಪ್ಟರ್ನಲ್ಲಿ ಹಿಂತಿರುಗಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.