Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಪರವಾನಿಗೆ ರದ್ದು?
Team Udayavani, Mar 5, 2024, 1:05 AM IST
ಹೊಸದಿಲ್ಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ವಹಿವಾಟನ್ನು ಅಂತ್ಯಗೊಳಿಸಲು ಆರ್ಬಿಐ ನೀಡಿರುವ ಗಡುವು ಇನ್ನೆರಡು ವಾರದಲ್ಲಿ ಮುಕ್ತಾಯಗೊಳ್ಳಲಿದ್ದು, ಇದರ ಬಳಿಕ ಪರವಾನಿಗೆಯನ್ನು ಆರ್ಬಿಐ ರದ್ದುಗೊಳಿಸುವ ಸಾಧ್ಯತೆ ಇದೆ. ಒಂದು ವೇಳೆ ಹೀಗೆ ನಡೆದರೆ 20 ವರ್ಷಗಳಲ್ಲೇ ಮೊದಲ ಬಾರಿಗೆ ಆರ್ಬಿಐ ಇಂತಹದ್ದೊಂದು ನಿರ್ಧಾರ ಕೈಗೊಂಡಂತಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನಿಯಮ ಉಲ್ಲಂ ಸಿದಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಠೇವಣಿ ಸಂಗ್ರಹ ಮತ್ತು ಸಾಲ ನೀಡುವಿಕೆಯನ್ನು ಆರ್ಬಿಐ ನಿಷೇಧಿಸಿತ್ತು.