ದೆಹಲಿ:ಮಹಿಳೆಯ ಅಪಹರಣ,ಗನ್ಪಾಯಿಂಟ್ನಲ್ಲಿ ಗ್ಯಾಂಗ್ರೇಪ್
Team Udayavani, Nov 17, 2017, 11:22 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರು ಸುರಕ್ಷತೆಗೆ ಸವಾಲೆನಿಸುವಂತಹ ಇನ್ನೊಂದು ಹೇಯ ಕೃತ್ಯ ನಡೆದಿದ್ದು, ಮಹಿಳೆಯೊ ಬ್ಬಳನ್ನು ಟ್ಯಾಕ್ಸಿಯಲ್ಲಿ ಅಪಹರಿಸಿ ಗನ್ ಪಾಯಿಂಟ್ನಲ್ಲಿ ಇಬ್ಬರು ಗ್ಯಾಂಗ್ ರೇಪ್ ನಡೆಸಿದ್ದಾರೆ.
ಗ್ರೇಟರ್ ನೋಯ್ಡಾ ಪ್ರದೇಶದಅನ್ಸಲ್ ಪ್ಲಾಜಾ ಬಳಿ ಮಹಿಳೆಯನ್ನು ಇಬ್ಬರು ಅಪಹರಿಸಿ ಗನ್ ಪಾಯಿಂಟ್ನಲ್ಲಿ ಗ್ಯಾಂಗ್ರೇಪ್ ಎಸಗಿ ವಿಡಿಯೋ ಚಿತ್ರೀಕರಿಸಿದ್ದಾರೆ. ಯಾರಿಗಾದರೂ ವಿಚಾರ ತಿಳಿಸಿದರೆ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ನವೆಂಬರ್ 14 ರಂದು ತಡ ರಾತ್ರಿ ಘಟನೆ ನಡೆದಿದ್ದು, ‘ರೋಹಿಣಿ ಪ್ರದೇಶಕ್ಕೆ ತೆರಳಲು ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಿದ್ದಾಗ , ಮಾರ್ಗಮಧ್ಯೆ ಇನ್ನೋರ್ವ ಹತ್ತಿಕೊಂಡಿದ್ದು ಇಬ್ಬರು ಸೇರಿ ಕೃತ್ಯ ಎಸಗಿ, ಬಳಿಕ ನನ್ನ 12 ಸಾವಿರ ರೂ ಮೌಲ್ಯದ ಮೊಬೈಲ್, ಚಿನ್ನಾಭರಣಗಳು ಮತ್ತು ನನ್ನಲ್ಲಿದ್ದ ಹಣವನ್ನು ಕಸಿದುಕೊಂಡು ಗ್ರೇಟರ್ ನೋಯ್ಡಾ ದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ’. ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಹೌಜ್ ಕಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್ ಆದೇಶದಲ್ಲೇನಿದೆ?
Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು
LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್
LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ
ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ