ಮೂರು ವರ್ಷದ ಬಾಲಕಿಯ ಬಾಯಲ್ಲಿ ಪಟಾಕಿ ಸುಟ್ಟ ಪುಂಡ ತರುಣ; ಬಾಲಕಿ ಗಂಭೀರ
Team Udayavani, Nov 8, 2018, 4:24 PM IST
ಲಕ್ನೋ : ದೀಪಾವಳಿಯ ಮುನ್ನಾ ದಿನ ನಿನ್ನೆ ಬುಧವಾರ ಕೀಟಲೆಕೋರ, ಅವಿವೇಕಿ ಪುಂಡ ತರುಣನೋರ್ವ ಮೂರು ವರ್ಷದ ಬಾಲಕಿಯ ಬಾಯಲ್ಲಿ ಪಟಾಕಿ ಇರಿಸಿ ಸ್ಫೋಟಿಸಿದ ಅಮಾನುಷ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಬಾಯಲ್ಲಿ ಪಟಾಕಿ ಸಿಡಿದು ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೀರತ್ನ ದೌರಾಲಾ ರಸ್ತೆಯಲ್ಲಿರುವ ಮಿಲಾಕ್ ಗ್ರಾಮದಲ್ಲಿ ಈ ಅತ್ಯಮಾನುಷ ಘಟನೆ ನಡೆದಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಪುಂಡ ತರುಣನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿರುವ ಬಾಲಕಿಯ ತಂದೆ ಶಶಿ ಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹಸುಳೆಯ ಮೇಲೆ ಈ ಅತ್ಯಮಾನುಷ ಕ್ರೌರ್ಯ ನಡೆಸಿರುವ ತರುಣನನ್ನು ಹರ್ಪಾಲ್ ಎಂದು ಹೆಸರಿಸಿದ್ದಾರೆ.
ಆರೋಪಿ ಪುಂಡ ತರುಣ ಹರ್ಪಾಲ್, ಮನೆಯ ಮುಂದೆ ಆಡಿಕೊಂಡಿದ್ದ ಬಾಲಕಿಯ ಬಳಿ ಹೋಗಿ ಆಕೆಯ ಬಾಯಿಯಲ್ಲಿ ಸುತ್ತಳಿ ಬಾಂಬ್ ಇರಿಸಿ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಸದ್ದಿನೊಂದಿಗೆ ವಸ್ತುತಃ ನ್ಪೋಟಗೊಂಡಿತು. ಪರಿಣಾಮವಾಗಿ ಬಾಲಕಿಯು ಗಂಭೀರವಾಗಿ ಗಾಯಗೊಂಡಳು.
ವೈದ್ಯರು ಬಾಲಕಿಯ ಜೀವ ಉಳಿಸಲು ಶತಪ್ರಯತ್ನ ಮಾಡುತ್ತಿದ್ದು ಈ ವರೆಗೆ ಅವರು ಚಿಂದಿಯಾಗಿರುವ ಆಕೆಯ ಬಾಯಿಗೆ 50 ಹೊಲಿಗೆಗಳನ್ನು ಹಾಕಿದ್ದಾರೆ. ಸ್ಫೋಟದಿಂದ ಬಾಲಕಿಯ ಗಂಟಲು ಕೂಡ ಸುಟ್ಟು ಹೋಗಿದೆ. ಇದರಿಂದಾಗಿ ಆಕೆಯ ಸ್ಥಿತಿ ತೀವ್ರವಾಗಿ ವಿಷಮಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್