ಡಾ| ಮೇಧಾ ಕುಲಕರ್ಣಿ ಅವರಿಗೆ ಆನಂದ ಕಂದ ಪ್ರಶಸ್ತಿ

Team Udayavani, May 7, 2019, 3:49 PM IST

ಮುಂಬಯಿ: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಡಾ| ಪಂಡಿತ್‌ ಅವಳೀಕರರ ದತ್ತಿ ಅಂಗವಾಗಿ ಕೊಡಮಾಡುವ 2019ರ “ಆನಂದ ಕಂದ’ಪ್ರಶಸ್ತಿಯು ಈ ವರ್ಷ ಡಾ| ಮೇಧಾ ಕುಲಕರ್ಣಿ ಅವರಿಗೆ ಲಭಿಸಿದೆ.

ಕನ್ನಡ ಮರಾಠಿ ಭಾಷಾ ಬಾಂಧವ್ಯವನ್ನು ಬಲಪಡಿಸುವ ಅವರ ಒಟ್ಟು ಸಾಹಿತ್ಯ ಕೃಷಿಗೆ ಇದೀಗ ಧಾರವಾಡದ ವಿದ್ಯಾವರ್ಧಕ ಸಂಘದಿಂದ “ಆನಂದ ಕಂದ’ ಪ್ರಶಸ್ತಿ ದೊರಕಿರುವುವುದು ಹೆಮ್ಮೆಯ ವಿಷಯವಾಗಿದೆ. ಎ. 16ರಂದು ಡಾ| ಬೆಟಗೇರಿ ಕೃಷ್ಣ ಶರ್ಮ ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಂಬಯಿ ಸಾಹಿತಿ ಡಾ| ಮೇಧಾ ಕುಲಕರ್ಣಿ ಅವರಿಗೆ “ಆನಂದ ಕಂದ’ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಡಾ| ಮೇಧಾ ಕುಲಕರ್ಣಿ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಎಂಎ 7 ಪದವಿ ಪಡೆದಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ| ಜಿ. ಎನ್‌. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂಫಿಲ್‌ ಮತ್ತು ಪಿಎಚ್‌ಡಿ ಪದವಿ ಪಡೆದಿದ್ದಾರೆ. “ಕರ್ನಾಟಕ ಮತ್ತು ಮಹಾರಾಷ್ಟ್ರದ ದೇವಾನು

ದೇವತೆಗಳು’ ಇದು ಅವರ ಪಿಎಚ್‌ಡಿ ಮಹಾಪ್ರಬಂಧವಾಗಿದೆ. ಅವರ “ಕನಕದಾಸ ಹಾಗೂ ಏಕನಾಥ ಒಂದು ತೌಲನಿಕ ಅಧ್ಯಯನ’ಕ್ಕೆ ಉತ್ತಮ ಸಂಪ್ರಬಂಧ ಎಂದು “ಕೋಡುಗುಂಟಿ’ ಪ್ರಶಸ್ತಿ ಮತ್ತು ಉತ್ತಮ
ಕೃತಿ ಎಂಬ ಕಾರಣಕ್ಕೆ “ಪಂಡಿತ್‌ ಪುಟ್ಟರಾಜ ಪ್ರಶಸ್ತಿ’ ಲಭಿಸಿದೆ. ಈ ಕೃತಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಮರುಮುದ್ರಣಗೊಂಡಿದೆ. ಲೇಖನ, ಪ್ರಬಂಧ, ಕವನಗಳನ್ನು ಬರೆಯುವುದು ಅವರ ಹವ್ಯಾಸವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ