ರಾಷ್ಟ್ರದ ಬಲಾಡ್ಯತೆಗೆ ಕಾನೂಬದ್ಧ ವಯಸ್ಸು ಬಹುದೊಡ್ಡ ವರದಾನ: ಸಂಸದ ಗೋಪಾಲ್‌ ಶೆಟ್ಟಿ


Team Udayavani, Dec 19, 2021, 11:35 AM IST

ರಾಷ್ಟ್ರದ ಬಲಾಡ್ಯತೆಗೆ ಕಾನೂಬದ್ಧ ವಯಸ್ಸು ಬಹುದೊಡ್ಡ ವರದಾನ: ಸಂಸದ ಗೋಪಾಲ್‌ ಶೆಟ್ಟಿ

ಮುಂಬಯಿ: ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು 21ಕ್ಕೆ ಪರಿಷ್ಕರಿಸಿ ಮಸೂದೆ ಮಂಡಿಸಿ ಅನುಮೋದನೆ ಪಡೆದ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ಹೆಣ್ಣು ಮಕ್ಕಳ ವಿವಾಹದ ಕಾನೂಬದ್ಧ ವಯಸ್ಸಿನ ಪರಿಷ್ಕರಣೆ ಬಹುದೊಡ್ಡ ವರದಾನವಾಗಿದೆ. ಈ ಹಿನ್ನಲೆಯಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರದ ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಉತ್ತರ ಮುಂಬಯಿ ಸಂಸದ ಗೋಪಾಲ ಸಿ. ಶೆಟ್ಟಿ ತಿಳಿಸಿದರು.

ಸಂಸದ ಗೋಪಾಲ್‌ ಶೆಟ್ಟಿ ಅವರ ಪ್ರಸ್ತಾವನೆಯಂತೆ ವಿವಾಹ ಕಾನೂಬದ್ಧ ವಯಸ್ಸು ಅಂಗೀಕಾರಕ್ಕೆ ಮನ್ನಣೆ ದೊರೆತೆ ಪ್ರಯುಕ್ತ ಶನಿವಾರ ಬೆಳಗ್ಗೆ ಕಾಂದಿವಲಿ ಪಶ್ಚಿಮದ ಪೊಯಿಸರ್‌ ಜಿಮ್ಖಾನದಲ್ಲಿ ಸಂಸದ ಗೋಪಾಲ್‌ ಸಿ. ಶೆಟ್ಟಿ ತುಳು-ಕನ್ನಡಿಗ ಅಭಿಮಾನಿ ಬಳಗ ಮುಂಬಯಿ ವತಿಯಿಂದ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಸಿದ್ದು ಸೂಕ್ತ ನಿರ್ಧಾರವಾಗಿದೆ. ಈ ಕಾಯ್ದೆಯಿಂದ ಭವಿಷ್ಯದಲ್ಲಿ ರಾಷ್ಟ್ರದಲ್ಲಿ ಮಹತ್ತರವಾದ ಬದಲಾವಣೆ ಕಾಣಲಿದೆ. ಶಾಲಾ ಕಾಲೇಜು ಹೋಗುವ ಮಕ್ಕಳು ಪ್ರೇಮಕ್ಕೆ ಒಳಗಾಗಿ ಹೆತ್ತವರ ಅನಿಮತಿಯಿಲ್ಲದೇ 18ನೇ ವಯಸ್ಸಿನಲ್ಲೇ ರಿಜಿಸ್ಟರ್‌ ಮದುವೆ ಆಗುತ್ತಿರುವುದು ಸಾಮಾನ್ಯವಾಗುತ್ತಿದೆ. ನಮ್ಮಲ್ಲಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ವ್ಯಕ್ತಿ ಸ್ವತಂತ್ರ್ಯ ಎಲ್ಲವೂ ಇದ್ದೂ ಇದು ಕಾನೂಬದ್ಧ ವಯಸ್ಸಿನ ಮುಂದೆ ನಿಷ್ಕ್ರಿಯವಾಗುತ್ತಿವೆ. ದಾಂಪತ್ಯ ಬಾಳಿನುದ್ದಕ್ಕೂ ಅದೆಷ್ಟೋ ಕಷ್ಟನಷ್ಟಗಳನ್ನು ಅನುಭವಿಸಿ ತ್ಯಾಗಮಯ ಬದುಕಿನೊಂದಿಗೆ ಮಕ್ಕಳನ್ನು ಓದಿಸಿ ದೊಡ್ಡವರನ್ನಾಗಿ ಮಾಡಿ ಮಕ್ಕಳ ಬಗ್ಗೆ ಭವ್ಯ ಕನಸುಗಳನ್ನು ಕಾಣುವ ಮಾತಾಪಿತಾರಿಗೂ ವ್ಯಕ್ತಿ ಸ್ವತಂತ್ರ್ಯ ಕಂಡುಕೊಳ್ಳಲು ಇಂತಹ ಕಾಯ್ದೆ ಫಲಕಾರಿಯಾಗಲಿದೆ ಎಂದು ನುಡಿದರು.

ಇಂತಹ ವಿಚಾರವಾಗಿ ದಿನಂಪ್ರತಿ ನನ್ನಲ್ಲಿಗೆ ಬಹಳಷ್ಟು ಮಕ್ಕಳ ಪೋಷಕರು ಬಂದು ತಮ್ಮ ಮಕ್ಕಳ ಬಗ್ಗೆ ಬೇಸರ ತೋಡಿಕೊಳ್ಳುತ್ತಾರೆ. 18ರ ವಯಸ್ಸಿನ ಮತ್ತು 21ರ ಮಧ್ಯೆ ಮಕ್ಕಳ ಪ್ರಬುದ್ಧತೆಯ ಮಟ್ಟದಲ್ಲೂ ಬಹಳಷ್ಟು ವ್ಯತ್ಯಾಸ ವಾಗುತ್ತೆ. ಮಾತ್ರವಲ್ಲದೆ ಇದೊಂದು ಬದಲಾ ವಣೆಯ ಆವರ್ತಿಯೂ ಹೌದು. 21ರಲ್ಲಿ ಮಕ್ಕಳು ಪರಿಪಕ್ವರಾಗಿ ಸ್ವಂತ ಕಾಲಲ್ಲಿ ನಿಂತು ನೌಕರಿಗೂ ಸೇರಿ ಸ್ವತಃ ಗಳಿಕೆಯಲ್ಲಿ ತೊಡಗಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಸ್ವತಂತ್ರರಾಗುತ್ತಾರೆ. ಇದರಿಂದ ಮಕ್ಕಳ ಜೀವನದಲ್ಲಿ ಬಹುದೊಡ್ಡ ಪರಿವರ್ತನೆ ಸಾಧ್ಯವಾಗುವುದು ಎಂದು ನುಡಿದು, ಮೋದಿ ಸರಕಾರದ ಧ್ಯೇಯದಂತೆ ಬೇಟಿ ಬಚಾವೋ, ಬೇಟಿ ಪಡಾವೋ ಸಂದೇಶ ನೀಡಿದ್ದರು. ಇದರಿಂದ ದೇಶದಲ್ಲಿ ಬಹಳವಾದ ಪರಿವರ್ತನೆಯಾಗಿದೆ. ಮುಂದಿನ ದಿನಗಳಲ್ಲೂ ರಾಷ್ಟ್ರದಲ್ಲಿ ಬಹಳಷ್ಟು ಬದಲಾವಣೆ ಕಾಣಲಿದೆ. ಕಳೆದ ವರ್ಷ ಪ್ರಧಾನಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರಾಷ್ಟ್ರದ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮದುವೆ ವಯಸ್ಸು ಪರಿಷ್ಕರಿಸುವ ಬಗ್ಗೆ ಉಲ್ಲೇಖೀಸಿರುವುದನ್ನು ಸಂಸದ ಗೋಪಾಲ್‌ ಶೆಟ್ಟಿ ಪ್ರಸ್ತಾವಿಸಿದರು.

ಉಷಾ ಗೋಪಾಲ್‌ ಶೆಟ್ಟಿ, ನಿಟ್ಟೆ ಎಂ. ಜಿ. ಶೆಟ್ಟಿ, ಜ್ಯೋತಿ ಶೆಟ್ಟಿ, ಪೊಯಿಸಾರ್‌ ಜಿಮ್ಖಾನದ ಕರುಣಾಕರ್‌ ಶೆಟ್ಟಿ, ರವೀಂದ್ರ ಎಸ್‌. ಶೆಟ್ಟಿ, ಶೈಲಜಾ ಅಮರನಾಥ್‌ ಶೆಟ್ಟಿ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಪ್ರಕಾಶ್‌ ಎ. ಶೆಟ್ಟಿ ಕಳತ್ತೂರು ಎಲ್‌ಐಸಿ, ವಿಜಯ ಆರ್‌. ಭಂಡಾರಿ, ಮನೋಹರ್‌ ಎನ್‌. ಶೆಟ್ಟಿ, ಶಾಂತಾ ಎನ್‌. ಭಟ್‌ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಮತ್ತು ಸದಸ್ಯರು, ಬಿಜೆಪಿ ಧುರೀಣರು, ಕಾರ್ಯಕರ್ತರು ಉಪಸ್ಥಿತರಿದ್ದು ಸಂಸದರನ್ನು ಅಭಿನಂದಿಸಿ ಶುಭಹಾರೈಸಿದರು. ಬಿಜೆಪಿ ನಾಯಕ, ಸಂಘಟಕ ಎರ್ಮಾಳ್‌ ಹರೀಶ್‌ ಶೆಟ್ಟಿ ಸ್ವಾಗತಿಸಿದರು. ರಘುನಾಥ್‌ ಎನ್‌. ಶೆಟ್ಟಿ ಕಾಂದಿವಿಲಿ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ್‌ ಎಸ್‌. ಶೆಟ್ಟಿ ವಂದಿಸಿದರು.

ಬಿಜೆಪಿ ಉತ್ತರ ಮುಂಬಯಿ ಸಂಸದ ಗೋಪಾಲ್‌ ಶೆಟ್ಟಿ ಅವರ ಮಾನವೀಯ ಸೇವೆಗಳು ಇತರರಿಗೆ ಮಾದರಿಯಾಗಿದೆ. ಅವರು ಕೇವಲ ರಾಜಕೀಯದಲ್ಲಿ ತೊಡಗಿಸಿಕೊಳ್ಳದೆ ತಮ್ಮ ಜೀವನವನ್ನೇ ತಮ್ಮ ಕ್ಷೇತ್ರದ ಜನರಿಗಾಗಿ ಮುಡಿಪಾಗಿಸಿಕೊಂಡವರು. ಈ ಕಾರಣದಿಂದಲೇ ದ್ವಿತೀಯ ಬಾರಿಗೆ ಕಣಕ್ಕಿಳಿದು ಅಭೂತಪೂರ್ವ ಜಯ ಗಳಿಸಿದ್ದಾರೆ. ಸದಾ ಜನಪರ ಸೇವಾ ಕಾಳಜಿ ಹೊಂದಿ ಸಾರ್ವಜನಿಕ ಹಿತದೃಷ್ಟಿಯಿಂದ ಸಾಮಾಜಿಕ ಪಿಡುಗು ಹಾಗೂ ತೊಂದರೆಗಳನ್ನು ನಿವಾರಿಸಲು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಓರ್ವ ನಿಷ್ಠಾವಂತ ಜನಪ್ರತಿನಿಧಿಯಾಗಿದ್ದಾರೆ. ಹೆಣ್ಣು ಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಸುವಲ್ಲಿ ನಮ್ಮ ಸಂಸದರ ಪ್ರಯತ್ನಕ್ಕೆ ದೊರೆತ ಬಲು ದೊಡ್ಡ ಯಶಸ್ಸು. ಅವರಲ್ಲಿನ ರಾಷ್ಟ್ರಾಭಿಮಾನ ನಮ್ಮೆಲ್ಲರಿಗೂ ಮಾದರಿಯಾಗಿದೆ. ಎರ್ಮಾಳ್‌ ಹರೀಶ್‌ ಶೆಟ್ಟಿ, ಸಂಚಾಲಕ, ಸಂಸದ ಗೋಪಾಲ್‌ ಸಿ. ಶೆಟ್ಟಿ ತುಳು-ಕನ್ನಡಿಗ ಅಭಿಮಾನಿ ಬಳಗ

-ಚಿತ್ರ –ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್‌

70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್‌

rajinikanth

Rajinikanth ಬಯೋಪಿಕ್‌ಗೆ ಭರ್ಜರಿ ತಯಾರಿ; ಬಾಲಿವುಡ್‌ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ

Udupi: ಪರಿಸರ ಸ್ನೇಹಿ ಸಿಎನ್‌ಜಿ ಬಸ್‌ ಸಂಚಾರ-ಸಿಎನ್‌ಜಿ ಲಭ್ಯತೆ ಸಮಸ್ಯೆ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.