ಬಿಲ್ಲವರಅಸೋಸಿಯೇಶನ್‌ ಮುಂಬಯಿ:ಯಕ್ಷಗಾನ ಕಲಾ ಪ್ರಶಸ್ತಿಗೆ ಐರೋಡಿ ಆಯ್ಕೆ

Team Udayavani, Sep 4, 2018, 12:21 PM IST

6556.jpg

ಮುಂಬಯಿ: ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ ಇದರ ಅಧ್ಯಕ್ಷ ಹಾಗೂ ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ  ಜಯ ಸಿ. ಸುವರ್ಣರ ಮಾತೋಶ್ರೀ  ದಿ| ಅಚ್ಚು ಚಂದು ಸುವರ್ಣ ಅವರ ಸ್ಮರಣಾರ್ಥವಾಗಿ ಸ್ಥಾಪಿಸಿದ ಶಾಶ್ವತ ನಿಧಿಯಿಂದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಇವರು ಕೊಡಮಾಡುವ “ಯಕ್ಷಗಾನ ಕಲಾ ಪ್ರಶಸ್ತಿ-2018 ಗೆ ಖ್ಯಾತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು 25,000  ರೂ. ನಗದು, ಪ್ರಶಸ್ತಿ ಫಲಕ, ಸಮ್ಮಾನ ಪತ್ರಗಳನ್ನೊಳಗೊಂಡಿದೆ. ಇತ್ತೀಚೆಗೆ ಬಿಲ್ಲವ ಭವನದಲ್ಲಿ ಯಕ್ಷಗಾನದ ಹಿರಿಯ ಸಂಘಟಕ ಕಲಾವಿದ ಎಚ್‌.ಬಿ.ಎಲ್‌. ರಾವ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ  ನಿರ್ಣಾಯಕ ಸಮಿತಿಯು ಈ ನಿರ್ಧಾರ ಪ್ರಕಟಿಸಿದೆ. ಐರೋಡಿ ಗೋವಿಂದಪ್ಪ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿರುವ ಐದು ದಶಕಗಳ ಸೇವೆಯನ್ನು ಗಮನಿಸಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ಐರೋಡಿ ಗೋವಿಂದಪ್ಪ 
ತೆಂಕು ಮತ್ತು ಬಡಗು ಉಭಯ ತಿಟ್ಟುಗಳಲ್ಲೂ ಪ್ರಸಿದ್ಧವಾಗಿರುವ ಐರೋಡಿ ಗೋವಿಂದಪ್ಪನವರು ಹಾರಾಡಿ ಪರಂಪರೆಯ ಕಲಾವಿದ. ಗೋಳಿಗರಡಿ, ಪೆರ್ಡೂರು, ಸಾಲಿಗ್ರಾಮ, ಕಣಿಪುರ, ಕುತ್ಯಾಳ, ಇರಾ ಸೋಮೇಶ್ವರ, ಮುಲ್ಕಿ, ಕುಂಬಳೆ ಮುಂತಾದ ಮೇಳಗಳಲ್ಲಿ ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ.

ಪಾತ್ರಕ್ಕೆ ತಕ್ಕ ವೇಷಭೂಷಣ, ಗತ್ತಿನ ರಂಗಪ್ರವೇಶ ನಿರ್ಗಮನ, ಮಟಪಾಡಿ ಶೈಲಿಯ  ಹೆಜ್ಜೆಗಾರಿಕೆ, ಪದದ ಎತ್ತುಗಡೆ ಐರೋಡಿಯವರ ವೈಶಿಷ್ಟéಗಳು. ಕರ್ಣ, ಮಾರ್ಕೆಂಡೇಯ, ವೀರಮಣಿ, ವಿಭೀಷಣ, ಭೀಷ್ಮ, ಅರ್ಜುನ, ಜಾಂಬವ, ಭೀಮ, ಋತುಪರ್ಣ ಇವರ ಪ್ರಸಿದ್ಧ ಪಾತ್ರಗಳು. ತಂದೆ ಬೂದ ಭಾಗವತ ತಾಯಿ ಗೌರಿ ಪೂಜಾರಿ¤ ದಂಪತಿಯ ಪುತ್ರರಾಗಿರುವ ಐರೋಡಿ ಗೋವಿಂದಪ್ಪನವರು ತಂದೆಯವರಿಂದ ಭಾಗವತಿಕೆ ಹಾಗೂ ಹೆಜ್ಜೆಗಾರಿಕೆಯನ್ನು ಕಾಂತಪ್ಪ ಮಾಸ್ತರರಿಂದ ಕಲಿತು ಗೋಳಿಗರಡಿ ಮೇಳ ಪ್ರವೇಶಿಸಿದರು. ಅನಂತರ ಅವರು ಹಿಂತಿರುಗಿ ನೋಡಲಿಲ್ಲ. ಹಲವಾರು ಮೇಳಗಳಲ್ಲಿ ವೇಷ ಹಾಕಿ ಕೀರ್ತಿಯ ಶಿಖರವೇರಿದರು. 1985ರಲ್ಲಿ  ಕೆ. ಎಸ್‌. ಉಪಾಧ್ಯ ನೇತೃತ್ವದ ತಂಡದಲ್ಲಿ ವಿದೇಶಕ್ಕೆ (ಹಾಂಕಾಂಗ್‌) ಹೋಗಿ ವೇಷ ಮಾಡಿದ ಹೆಗ್ಗಳಿಕೆ ಇವರಿಗಿದೆ. 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ದೊರಕಿದೆ. ಅಲ್ಲದೆ ಜಾನಪದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಸದಸ್ಯರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದ್ದಾರೆ.

ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ ಸಮಾರಂಭವು ಬಿಲ್ಲವ ಭವನದಲ್ಲಿ ಸೆ. 9 ರಂದು ಅಪರಾಹ್ನ  3.30ಕ್ಕೆ ಜರಗಲಿದೆ. ಸಮಾರಂಭವನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಜಯ ಸಿ. ಸುವರ್ಣರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿಲ್ಲವರ ಅಸೋಸಿಯೇಶನ್‌, ಮುಂಬಯಿಯ ಅಧ್ಯಕ್ಷರಾದ ಚಂದ್ರಶೇಖರ್‌ ಪೂಜಾರಿ ವಹಿಸಲಿದ್ದಾರೆ. ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಕಲಾವಿದ ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ಪ್ರದಾನಿಸಲಿದ್ದಾರೆ. ಬಿಲ್ಲವರ ಅಸೋಸಿಯೇಶನ್‌ ಲೋನವಾಲ ಉಪಾಧ್ಯಕ್ಷ ಶ್ರೀಧರ ಪೂಜಾರಿ ಲೋನವಾಲಾ, ಭಾಸ್ಟ್‌ ಇಂಡಿಯಾ ಲಿಮಿಟೆಡ್‌ ಇದರ ನಿರ್ದೇಶಕ  ಪ್ರದೀಪ್‌ ಎಂ. ಚಂದನ್‌ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.ಎಚ್‌. ಬಿ. ಎಲ್‌. ರಾವ್‌ ಅಭಿನಂದನಾ ಭಾಷಣ ಗೈಯಲಿದ್ದಾರೆ. 

ಕಾರ್ಯಕ್ರಮದ ಅಂಗವಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಪಾಂಡವಾಶ್ವಮೇಧ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಬಿಲ್ಲವರ ಅಸೋಸಿಯೇಶನಿನ ಗೌರವ ಪ್ರಧಾನ  ಕಾರ್ಯದರ್ಶಿ ಧನಂಜಯ ಶಾಂತಿ ಮತ್ತು  ಸಾಂಸ್ಕೃತಿಕ  ಕಾರ್ಯಕ್ರಮದ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

suicide

IAS ಅಧಿಕಾರಿ ದಂಪತಿಯ ಪುತ್ರಿ 10 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Next Lok Sabha polls to be over by end of April : Chief Election Commissioner

Election: ಮುಂದಿನ ಲೋಕಸಭೆ ಚುನಾವಣೆ ಎಪ್ರಿಲ್ ಅಂತ್ಯದೊಳಗೆ ಮುಗಿಸುತ್ತೇವೆ: ಚುನಾವಣಾ ಆಯೋಗ

Deralakatte: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

Deralakatte: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

Kedar Jadhav

Kedar Jadhav; ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಆಲ್ ರೌಂಡರ್ ಕೇದಾರ್ ಜಾಧವ್

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ಅಮೆರಿಕದ ಮೇರಿಲ್ಯಾಂಡ್‌ನ‌ಲ್ಲಿ ಮೂರು ದಿನಗಳ ಕನ್ನಡದ ಹಬ್ಬ

Desi Swara: ಅಮೆರಿಕದ ಮೇರಿಲ್ಯಾಂಡ್‌ನ‌ಲ್ಲಿ ಮೂರು ದಿನಗಳ ಕನ್ನಡದ ಹಬ್ಬ

Desi Swara: ಡಲ್ಲಾಸ್‌ ನಗರದಲ್ಲಿ ಸುಧನ್ವಾರ್ಜುನ ಪ್ರಸಂಗ

Desi Swara: ಡಲ್ಲಾಸ್‌ ನಗರದಲ್ಲಿ ಸುಧನ್ವಾರ್ಜುನ ಪ್ರಸಂಗ

Desi Swara: ಕತಾರ್‌ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್‌’

Desi Swara: ಕತಾರ್‌ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್‌’

Desi Swara: ಇಪ್ಪತ್ತರ ಸಂಭ್ರಮದಲ್ಲಿ “ಮೊಗವೀರ್ಸ್‌ ಬಹ್ರೈನ್‌” ಸಂಘಟನೆ

Desi Swara: ಇಪ್ಪತ್ತರ ಸಂಭ್ರಮದಲ್ಲಿ “ಮೊಗವೀರ್ಸ್‌ ಬಹ್ರೈನ್‌” ಸಂಘಟನೆ

Desi Swara: ಕನ್ನಡ ಕಟ್ಟುವುದನ್ನು ಮುಂದುವರೆಸಿ- ನಾಗಾಭರಣ

Desi Swara: ಕನ್ನಡ ಕಟ್ಟುವುದನ್ನು ಮುಂದುವರೆಸಿ-ಟಿಎಸ್ ನಾಗಾಭರಣ

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

Sandalwood: Mandela ready for shooting

Sandalwood: ಮಂಡೇಲಾ ಶೂಟಿಂಗ್ ಗೆ ರೆಡಿ

suicide

IAS ಅಧಿಕಾರಿ ದಂಪತಿಯ ಪುತ್ರಿ 10 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Next Lok Sabha polls to be over by end of April : Chief Election Commissioner

Election: ಮುಂದಿನ ಲೋಕಸಭೆ ಚುನಾವಣೆ ಎಪ್ರಿಲ್ ಅಂತ್ಯದೊಳಗೆ ಮುಗಿಸುತ್ತೇವೆ: ಚುನಾವಣಾ ಆಯೋಗ

ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ ಸಂದೇಶ

ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ ಸಂದೇಶ

Deralakatte: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

Deralakatte: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.