ಕನ್ನಡ ಸಂಘ ಸಾಂತಾಕ್ರೂಜ್‌ ಇದರ 59ನೇ ವಾರ್ಷಿಕೋತ್ಸವ ಸಂಭ್ರಮ

Team Udayavani, Feb 14, 2017, 12:11 PM IST

13-Mum08a.jpg

ಮುಂಬಯಿ: ಕರ್ಮಭೂಮಿಯಲ್ಲಿ ಕನ್ನಡದ ಕ್ರಾಂತಿ ಪ್ರಶಂಸನೀಯವಾದದ್ದು. ಇಂತಹ ಕನ್ನಡದ ಸೇವೆಗೆ ಈ ಸಂಘ ಮಾದರಿಯಾಗಿದೆ. ಮುಂಬಯಿಯಲ್ಲಿ ಕನ್ನಡದ ಉಳಿವು ಬೆಳವಣಿಗೆಗಾಗಿ ಹಲವಾರು ಸಂಸ್ಥೆಗಳಿದ್ದರೂ ಕನ್ನಡ ಸಂಘ ಸಾಂತಾಕ್ರೂಜ್‌ ಇದರ ವೈಶಿಷ್ಟéತೆಯೇ ಬೇರೆ ರೀತಿಯದ್ದು. ಪ್ರಾದೇಶಿಕ ಭಾಷೆಯ ಉಳಿವು ನಮ್ಮ ಕರ್ತವ್ಯವಾಗಬೇಕು. ಇಂಗ್ಲಿಷ್‌ ಅಭ್ಯಾಸ ವ್ಯಾವಹಾರಿಕವಾಗಿರಿಸಿಕೊಂಡು, ತುಳು-ಕನ್ನಡ ಭಾಷೆ ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ವೃದ್ಧಿಸಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ  ಅವರು ಅಭಿಪ್ರಾಯಿಸಿದರು.

ಫೆ. 11ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಸಂಜೆ ಕನ್ನಡ ಸಂಘ ಸಾಂತಾಕ್ರೂಜ್‌ ಇದರ 59ನೇ ವಾರ್ಷಿಕೋತ್ಸವ  ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಲ್‌. ವಿ. ಅಮೀನ್‌ ಅವರು ವಹಿಸಿದ್ದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ರಾಘು ಪಿ. ಶೆಟ್ಟಿ ಅವರು ಮಾತನಾಡಿ,  ತುಳು ಕನ್ನಡಿಗರು ಅಪ್ಪಟ ಸಂಸ್ಕೃತಿವುಳ್ಳವರಾಗಿದ್ದಾರೆ. ಆದ್ದರಿಂದ ಭಾರತೀಯ ನೈಜ ಸಂಸ್ಕೃತಿ ನಮ್ಮ ಹಿರಿಮೆಯಾಗಬೇಕು. ಇಲ್ಲಿನ ಮಕ್ಕಳ ನೃತ್ಯಾವಳಿಗಳನ್ನು ಕಂಡಾಗ ನಮ್ಮ ವೈಭವೋಪೇತ ಸಂಸ್ಕೃತಿಯ ಸಂಪತ್ತು ಇಂದಿಗೂ ಜೀವಂತವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಮಕ್ಕಳೇ, ನೀವು ಪಾಶ್ಚಾತ್ಯ ಸಂಸ್ಕೃತಿ ಪ್ರಿಯರಾಗದೆ ಭಾರತೀಯತೆಯ ಹಿತದೃಷ್ಟಿಗಾಗಿ ನಮ್ಮ ಸಂಸ್ಕೃತಿಯನ್ನೇ ಮೈಗೂಡಿಸಿ ಸಂಸ್ಕಾರಯುತ ಭವಿಷ್ಯ ರೂಪಿಸಿಕೊಳ್ಳಿರಿ ಎಂದು ನುಡಿದು ಶುಭ ಹಾರೈಸಿದರು.

ಭಾರತ್‌ ಬ್ಯಾಂಕ್‌  ನಿರ್ದೇಶಕ ದಾಮೋದರ ಸಿ. ಕುಂದರ್‌ ಅವರು ಮಾತನಾಡಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಗೆ ಎಲ್‌. ವಿ.  ಅಮೀನ್‌ ಓರ್ವ ಸಂಘಟಕರಾಗಿದ್ದಾರೆ. ನಾನು ಬಿಲ್ಲವರ ಧುರೀಣ ಜಯ ಸುವರ್ಣರ ಅನುಜ್ಞೆಯಂತೆ ನನ್ನನ್ನು ಸಮಾಜ ಸೇವೆಗೆ ತೊಡಗಿಸಿ ಕೊಂಡಿದ್ದೇನೆ. ಸಮಾಜ ಸೇವೆಯಿಂದ ನೆಮ್ಮೆದಿಯಿದೆ ಎನ್ನುವುದನ್ನು ಅರಿತಿದ್ದು ನನ್ನ ಗಳಿಕೆಯ ಕನಿಷ್ಠ ಶೇ. 10 ರಷ್ಟನ್ನಾದರೂ ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದೇನೆ. ಇದನ್ನು 

ಪ್ರಸಕ್ತ ಯುವ ಜನತೆ ತಿಳಿಯುವ ಅವಶ್ಯಕತೆಯಿದೆ. ಅಂತೆಯೇ ವಿದ್ಯಾರ್ಥಿಗಳೂ ಈಗಿಂದಲೇ ಇಂತಹ ಪಾವಿತ್ರÂತೆಯ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಅತಿಥಿಗಳು ಮತ್ತು ದಾನಿಗಳಾದ ಸದಾನಂದ ಉಚ್ಚಿಲ್‌ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವರಾಮ ಕೋಟ್ಯಾನ್‌, ಪ್ರಸನ್ನ ಶೆಟ್ಟಿ, ಲಿಂಗಪ್ಪ ಅಮೀನ್‌, ಆರ್‌.ಪಿ. ಹೆಗ್ಡೆ, ಸಿಎ ಪ್ರಕಾಶ್‌ ಶೆಟ್ಟಿ, ದಿನೇಶ್‌ ಬಿ. ಅಮೀನ್‌, ಸುಮಾ ಎಂ. ಪೂಜಾರಿ, ಉಷಾ ವಿ. ಶೆಟ್ಟಿ ಮತ್ತಿತರರ‌ನ್ನೊಳಗೊಂಡು ಸಂಘವು ವಾರ್ಷಿಕವಾಗಿ ಕೊಡಮಾಡುವ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ವಿತರಿಸಿ ಶುಭ ಹಾರೈಸಿದರು.

ಸಂಘದ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಗೌರವ ಕೋಶಾಧಿಕಾರಿ ಸಿಎ ರಮೇಶ್‌ ಎ.ಶೆಟ್ಟಿ, ಜತೆ ಕೋಶಾಧಿಕಾರಿ ಆರ್‌. ಪಿ. ಹೆಗ್ಡೆ, ಜತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್‌, ಸಲಹಾ ಸಮಿತಿಯ ಸದಸ್ಯರಾದ ನಾರಾಯಣ ಶೆಟ್ಟಿ, ಬಿ. ಡಿ. ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಶಾರದಾ ಎಸ್‌. ಪೂಜಾರಿ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಮಹಿಳಾ ವಿಭಾಗದ ವನಿತಾ ವೈ. ನೊಂಡಾ, ಶಾಲಿನಿ ಜಿ. ಶೆಟ್ಟಿ, ಶಕೀಲಾ ಪಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಎಲ್‌. ವಿ. ಅಮೀನ್‌ ಅವರು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್‌. ಶೆಟ್ಟಿ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸುಧಾಕರ ಉಚ್ಚಿಲ್‌  ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು, ಮಕ್ಕಳಿಂದ ನೃತ್ಯಾವಳಿಗಳು ಪ್ರದರ್ಶನಗೊಂಡವು. ದಿನೇಶ್‌ ಕಂಕನಾಡಿ ರಚಿಸಿ ಭಾಸ್ಕರ್‌ ಸಸಿಹಿತ್ಲು ನಿರ್ದೇಶಿಸಿದ “ಯಮುನ ದಾನೆ ನಮೂನೆ’ ತುಳು ಹಾಸ್ಯಮಯ ನಾಟಕವನ್ನು ಸಪ್ತಸ್ವರ ಕಲ್ಚರಲ್‌ ಅಸೋಸಿಯೇಶನ್‌ ಮುಂಬಯಿ ಕಲಾವಿದರು ಪ್ರದರ್ಶಿಸಿದರು. ಮನೋಹರ್‌ ನಂದಳಿಕೆ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಲಕ್ಷ್ಮೀ ಎನ್‌. ಕೋಟ್ಯಾನ್‌  ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ನಮ್ಮ ಹಿರಿಯರು ಇಂತಹ ಸಂಘ-ಸಂಸ್ಥೆಗಳನ್ನು ಕಟ್ಟಿರುವುದು ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸಲು ಎಂಬುದನ್ನು ಮರೆಯು ವಂತಿಲ್ಲ. ನಮ್ಮ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ದಿನೇಶ್‌ ಬಿ. ಅಮೀನ್‌ ಅವರು ಬಿಎಂಸಿ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿಯಾಗಿ ಸಾಂತಾಕ್ರೂಜ್‌ ಪೂರ್ವದ ವಕೋಲಾ ವಾರ್ಡ್‌ ಸಂಖ್ಯೆ 91ರಿಂದ ಒಬಿಸಿ ನೆಲೆಯಲ್ಲಿ ಸ್ಪರ್ಧಿಸುತ್ತಿದ್ದು, ನಾವೆಲ್ಲರೂ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸ ಬೇಕಾಗಿದೆ. ಮುಂದಿನ ವರ್ಷ ನಮ್ಮ ಸಂಸ್ಥೆಯ ವಜ್ರ ಮಹೋತ್ಸವದ ಪರ್ವ ಕಾಲ. ಇದೊಂದು ಮಾದರಿ ವರ್ಷ ವನ್ನಾಗಿಸುವ ಅಭಿಲಾಷೆ ನಮ್ಮಲ್ಲಿದೆ. ನಾಡಿನ ಸರ್ವ ಸಹೃದಯಿಗಳ ಪ್ರೋತ್ಸಾಹದಿಂದ ಇದು ಫಲಪ್ರದ ಗೊಳಿಸುವ ಭರವಸೆ ನನಗಿದೆ    – ಎಲ್‌. ವಿ. ಅಮೀನ್‌ (ಅಧ್ಯಕ್ಷರು:    
   ಕನ್ನಡ ಸಂಘ ಸಾಂತಾಕ್ರೂಜ್‌). 

   ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.