ಕುಮಾರ ಕ್ಷತ್ರಿಯ ಸಂಘ: 53ನೇ ವಾರ್ಷಿಕ ದಿನಾಚರಣೆ

Team Udayavani, Mar 12, 2019, 1:07 PM IST

1103mum05a.jpg

ಮುಂಬಯಿ: ಕುಮಾರ ಕ್ಷತ್ರಿಯ ಸಂಘ ಮುಂಬಯಿ ಇದರ  53ನೇ ವಾರ್ಷಿಕ ದಿನಾಚರಣೆಯು ಮಾ. 3ರಂದು ಬೆಳಗ್ಗೆ 10ರಿಂದ ಸಾಂತಾಕ್ರೂಜ್‌ ಪೂರ್ವದ ಮಾಧವ ಭವನ  ಪೇಜಾವರ ಮಠದಲ್ಲಿ ಶ್ರೀ  ಸತ್ಯನಾರಾಯಣ ಮಹಾಪೂಜೆಯೊಂದಿಗೆ ವಿಜೃಂಭಣೆ ಯಿಂದ ನಡೆಯಿತು.

ಅರಸಿನ ಕುಂಕುಮ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶಾಲಿನಿ  ಎಂ. ರಾವ್‌  ಅವರ ನೇತೃತ್ವದಲ್ಲಿ  ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಕೊನೆಯಲ್ಲಿ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ನಂತರ ನಡೆದ ಪರಿಷತ್ತಿನ ಮಹಾ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಎಂ. ಡಿ. ರಾವ್‌ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ,  ಸಮಾಜ ಬಾಂಧವರಿಗಾಗಿ ಸ್ವಂತ  ಕಚೇರಿ ಪಡೆದುಕೊಳ್ಳುವ ವಿಷಯದಲ್ಲಿ ಸಭಿಕರೊಂದಿಗೆ ಚರ್ಚಿಸಿ, ಎಲ್ಲರೂ ತುಂಬು ಹೃದಯದಿಂದ ಸಹಕಾರ ನೀಡಬೇಕೆಂದು ವಿನಂತಿಸಿದರು.

ಆರಂಭಿಸುವ ಮೊದಲು ಪುಲ್ವಾಮಾದಲ್ಲಿ ಹುತಾತ್ಮರಾದ  ವೀರ ಯೋಧರಿಗೆ ಹಾಗೂ 2018-2019ರಲ್ಲಿ ನಿಧನರಾದ ನಮ್ಮ ಸಂಸ್ಥೆಯ ಸದಸ್ಯಭಾಂದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಕೋಶಾಧಿಕಾರಿ ಶ್ರೀ ಶಾಂತಾರಾಮ ಜೆ. ಮಾಂಗಾಡ್‌ ಲೆಕ್ಕ ಪತ್ರವನ್ನು ಮಂಡಿಸಿದರು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಎಸ್‌ಎಲ್‌ಸಿ ಪದವೀಧರ ಮತ್ತು ಸ್ನಾತಕೋತ್ತರ ಪದವೀಧರರಿಗೆ ಸಂಘದ  ಜೇಷ್ಠ ಸದಸ್ಯರಾದ ಪ್ರಭಾ ಎಂ. ರಾವ್‌  ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ  ಪುಸ್ತಕವನ್ನು, ಇನ್ನೋರ್ವ ಜೇಷ್ಠ ಸದಸ್ಯರಾದ ಉಮಾ ಶಿವ ರಾವ್‌ ಇವರಿಬ್ಬರ ಹಸ್ತದಿಂದ ನೀಡಲಾಯಿತು. ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ನಂತರ ನಮ್ಮ ದಿವಂಗತ ಮಾಜಿ ಅಧ್ಯಕ್ಷರಾದ ಪ್ರಮೋದ್‌ ರಾವ್‌ ಅವರು ಸಮುದಾಯಕ್ಕೆ  ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು  ದಿವಂಗತರ ಪತ್ನಿ ಪ್ರತಿಮಾ ರಾವ್‌ ಹಾಗೂ ಪುತ್ರ  ಸಾಗರ ರಾವ್‌ ಅವರಿಗೆ  ಸಮುದಾಯದ ವತಿಯಿಂದ ಜೇಷ್ಠ ಸದಸ್ಯರಾದ ನೀಲಾಕ್ಷಿ ಪ್ರಭಾಕರ್‌ ಬೇಕಲ್‌ ಅವರ ಹಸ್ತದಿಂದ ನೀಡಲಾಯಿತು. ಕಾರ್ಯಕ್ರಮವನ್ನು   ಸಮಿತಿಯ ಸದಸ್ಯರಾದ ಶಾಲಿನಿ ಎಂ. ರಾವ್‌ ಅವರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ನೂತನ ಮಹಿಳಾ ವಿಭಾಗವನ್ನು ರಚಿಸಲಾಯಿತು.

ಕಾರ್ಯಾಧ್ಯಕ್ಷೆಯಾಗಿ ಶಾಲಿನಿ ಮಿಲಿಂದ ರಾವ್‌ ಅವರು ಆಯ್ಕೆಯಾದರೆ, ಇತರ ಪದಾಧಿಕಾರಿಗಳಾಗಿ ಉಮಾ ಶಿವ ರಾವ್‌ ,  ಕಲ್ಪನಾ  ಶಶಿ ರಾವ್‌, ಬಿಂದು ಕುಂದರ್‌, ಕವಿತಾ ರೋಹನ್‌, ವಿಶಾಲಾಕ್ಷಿ ಅರುಣ ಚಂದ್ರಗಿರಿ, ದಿವ್ಯಾ ಕಲ್‌ನಾಡ್‌ ಅವರು ಆಯ್ಕೆಯಾದರು. ವೇದಿಕೆಯಲ್ಲಿ ಅಧ್ಯಕ್ಷ ಎಂ. ಡಿ. ರಾವ್‌, ಉಪಾಧ್ಯಕ್ಷ  ರವಿ ಚಂದ್ರಗಿರಿ, ಜತೆ ಕಾರ್ಯದರ್ಶಿ  ಉಮಾನಾಥ್‌ ರಾವ್‌, ಕೋಶಾಧಿಕಾರಿ  ಶಾಂತರಾಮ್‌ ಜೆ. ಮಾಂಗಾಡ್‌, ಸಲಹೆಗಾರ  ಬಿ. ಎಸ್‌. ರಾವ್‌, ಸದಸ್ಯರಾದ  ಶಾಲಿನಿ ಎಂ. ರಾವ್‌,  ರವಿ ಎಸ್‌. ಕಲ್‌ನಾಡ್‌, ಸಾಗರ್‌ ಪಿ. ರಾವ್‌,  ಕೆ. ಎಂ. ರಾವ್‌, ಸುರೇಂದ್ರ  ಎ. ರಾವ್‌ ಅವರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ  ಉಮಾನಾಥ ರಾವ್‌ ವಂದಿಸಿದರು. 

ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮಾಜ ಬಾಂಧವರು  ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.