ಸಂಸದ ಗೋಪಾಲ್‌ ಶೆಟ್ಟಿ ಅಭಿನಂದನಾ ಸಮಾರಂಭಕ್ಕೆ ಚಾಲನೆ


Team Udayavani, Mar 3, 2019, 3:19 PM IST

0203mum20.jpg

ಮುಂಬಯಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ  “ಸರ್ವೋತ್ಕೃಷ್ಟ  ಸಂಸದ’ ಎಂದು ಗೌರವಿಸಲ್ಪಟ್ಟ ಮುಂಬಯಿ ನಗರ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರಿಗೆ ಶನಿವಾರ ಸಂಜೆ ಬೊರಿವಲಿ ಪಶ್ಚಿಮದ ಪುಷ್ಪಾಂಜಲಿ ಗಾರ್ಡನ್‌ನಲ್ಲಿ ಸಂಘಟಕ ಎರ್ಮಾಳ್‌ ಹರೀಶ್‌ ಶೆಟ್ಟಿ ಸಾರಥ್ಯದಲ್ಲಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ, ರಾಜ್ಯ ಸಚಿವ ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌ ಇವರ ಉಪಸ್ಥಿತಿಯಲ್ಲಿ ಸಂಸದ  ಗೋಪಾಲ್‌ ಸಿ. ಶೆಟ್ಟಿ ತುಳು-ಕನ್ನಡಿಗರ ಅಭಿಮಾನಿ ಬಳಗವು ಸಾರ್ವಜನಿಕ ಸಮಾರಂಭ ಆಯೋಜಿಸಿ ಅಭಿನಂದನೆ ಸಲ್ಲಿಸಿತು.

ಸ್ಥಳೀಯ ಡೊನ್‌ಬೊಸ್ಕೊ ಸರ್ಕಲ್‌ನಿಂದ ಭವ್ಯ ಮೆರವಣಿಯಲ್ಲಿ ಚೆಂಡೆ, ವಾದ್ಯ, ಬ್ಯಾಂಡುಗಳ ನೀನಾದದಲ್ಲಿ  ಕಲಾ ಪ್ರತಿಭೆ, ಸಾಂಸ್ಕೃತಿಕ ವೈಭವದೊಂದಿಗೆ, ಶ್ವೇತ ಅಶ್ವ‌ ರಥದ ಚ್ಯಾರಿಯಟ್‌ನಲ್ಲಿ  ಮಾತೆ ಭಾರತಾಂಬೆಯ ಭಾವಚಿತ್ರದೊಂದಿಗೆ ಸಂಸದ ಗೋಪಾಲ್‌ ಶೆಟ್ಟಿ ಅವರನ್ನು ಸಾಂಪ್ರದಾಯಿಕವಾಗಿ ಮೈದಾನಕ್ಕೆ  ಬರಮಾಡಿಕೊಳ್ಳಲಾಯಿತು. 

ಗೋಪಾಲ ಶೆಟ್ಟಿ ಮತ್ತು  ಪತ್ನಿ ಉಷಾ ಜಿ. ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳ ಮುಖ್ಯಸ್ಥರಾದ  ಜಯ ಸಿ. ಸುವರ್ಣ, ಕೆ. ಎಲ್‌. ಬಂಗೇರ, ಕರ್ನಿರೆ ವಿಶ್ವನಾಥ ಶೆಟ್ಟಿ, ಚಂದ್ರಹಾಸ ಕೆ. ಶೆಟ್ಟಿ, ಚಂದ್ರಶೇಖರ ಎಸ್‌. ಪೂಜಾರಿ, ರವಿ ಎಸ್‌. ದೇವಾಡಿಗ, ದೇವದಾಸ್‌ ಎಲ್‌. ಕುಲಾಲ್‌, ಸದಾನಂದ ಆಚಾರ್ಯ, ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ನ್ಯಾಯವಾದಿ ಆರ್‌. ಎಂ. ಭಂಡಾರಿ, ಜಿತೇಂದ್ರ ಎಲ್‌. ಗೌಡ, ಶ್ರೀನಿವಾಸ ಪಿ. ಸಾಫಲ್ಯ, ಸತೀಶ್‌ ಎಸ್‌. ಸಾಲ್ಯಾನ್‌, ರಾಜ್‌ಕುಮಾರ್‌ ಕಾರ್ನಾಡ್‌, ಸಂಜಯ್‌ ಭಟ್‌, ಡಾ| ಪಿ. ವಿ. ಶೆಟ್ಟಿ ಜಯಂತ್‌ ಎನ್‌. ಶೆಟ್ಟಿ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಚಂದ್ರಶೇಖರ್‌ ಪಾಲೆತ್ತಾಡಿ, ಡಾ| ಶಂಕರ್‌ ಬಿ. ಶೆಟ್ಟಿ ವಿರಾರ್‌, ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಉಪಾಧ್ಯಕ್ಷರುಗಳಾದ ಹರೀಶ್‌ ಎನ್‌. ಶೆಟ್ಟಿ, ಪ್ರೇಮನಾಥ ಪಿ. ಕೋಟ್ಯಾನ್‌,   ಪ್ರಧಾನ ಕಾರ್ಯದರ್ಶಿಗಳಾದ ಶೀಲಾ ಶೆಟ್ಟಿ, ರಜಿತ್‌ ಎಂ. ಸುವರ್ಣ, ಸಂಘಟಕರಾದ ಮಂಜುನಾಥ್‌ ಬನ್ನೂರು, ಪ್ರವೀಣ್‌ ಎ. ಶೆಟ್ಟಿ ಶಿಮಂತೂರು, ಪ್ರಕಾಶ್‌ ಎ. ಶೆಟ್ಟಿ, ರವೀಂದ್ರ ಎಸ್‌. ಶೆಟ್ಟಿ, ಭಾಸ್ಕರ ಎಂ. ಸಾಲ್ಯಾನ್‌, ಗಂಗಾಧರ ಜೆ. ಪೂಜಾರಿ, ಕೆ. ರಘುರಾಮ ಶೆಟ್ಟಿ,  ವಿಜಯಕುಮಾರ್‌ ಶೆಟ್ಟಿ ತೋನ್ಸೆ, ದಿವಾಕರ ಶೆಟ್ಟಿ ಅಡ್ಯಾರ್‌, ವೇಣುಗೋಪಾಲ್‌ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಕರುಣಾಕರ ಶೆಟ್ಟಿ, ಸಂತೋಷ್‌ ಶೆಟ್ಟಿ ಆಹಾರ್‌, ರಮೇಶ್‌ ಬಂಗೇರ, ಮುದ್ದು  ಕೃಷ್ಣ ಶೆಟ್ಟಿ ಚಾರ್‌ಕೋಪ್‌, ಶಾಸಕಿ ಮನೀಷಾ ಚೌಧರಿ, ಮಗಠಾಣೆ ವಿಧಾನಸಭಾ ಕ್ಷೇತ್ರದ ಶಿವಸೇನೆ  ಸೇರಿದಂತೆ ಸಾವಿರಾರು ತುಳು ಕನ್ನಡಿಗರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಸಂಗಮ ಉಪಾಧ್ಯಾಯ ನಿರ್ದೇಶನದಲ್ಲಿ ಸಂಗಮ್‌ ಸ್ವರ ಮುಂಬಯಿ ತಂಡದ ಅಂಧ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ಗುಂಜನ ಕಾರ್ಯಕ್ರಮ ನಡೆಯಿತು. ಮೆರವಣಿಯಲ್ಲಿ ಬಹುತೇಕ ತುಳು ಕನ್ನಡಿಗರ ಪುರುಷರು ಬಿಳಿ ಪಂಚೆ, ಶರ್ಟ್‌, ಕುರ್ತ ಮತ್ತು ಮಹಿಳೆಯರು ಬಣ್ಣಬಣ್ಣದ ರೇಷ್ಮೆ, ಜರಿಸೀರೆಗಳನ್ನು ತೊಟ್ಟು ಮೆರವಣಿಗೆಗೆ ಮೆರುಗು ನೀಡಿದರು.        

ಸ್ವತ್ಛ ಸುಂದರವಾಗಿ ಕಂಗೊಳಿಸುತ್ತಿದ್ದ ಮೈದಾನದಲ್ಲಿ ತುಂಗಾ ಹಾಸ್ಪಿಟಲ್‌ನಿಂದ ಡಾ| ಸತೀಶ್‌ ಬಿ. ಶೆಟ್ಟಿ  ಅವರಿಂದ ಆ್ಯಂಬ್ಯುಲನ್ಸ್‌ ಸೇವೆ. ಬಿಲ್ಲವರ ಸೇವಾ ದಳ ಶಿಪಾಯಿಗಳು ಶಿಸ್ತು ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದರು.  ಕಟೀಲು ಶ್ರೀದುರ್ಗಾಪರಮೇಶ್ವರೀ ಅಮ್ಮನ,  ಛತ್ರಪತಿ ಶಿವಾಜಿ ಮಹಾರಾಜ್‌, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌, ರಾಷ್ಟ್ರದ ಪಾರ್ಲಿಮೆಂಟ್‌,  ಮಹಾರಾಷ್ಟ್ರ ರಾಜ್ಯದ ವಿಧಾನ ಭವನ, ಬ್ರಹನ್ಮುಂಬಯಿ ಮಹಾನಗರ ಪಾಲಿಕಾ ಮುಖ್ಯಾಲಯ ಇವುಗಳ ಬೃಹತ್‌ ಕಟೌಟ್‌ಗಳು ಸೇರಿದಂತೆ ತುಳು ನಾಡ ವೈಭವ, ವಿವಿಧ ಸಮುದಾಯ, ಸಂಸ್ಕೃತಿ ಸಾರುವ ಬ್ಯಾನರ್‌ಗಳ ಮಧ್ಯೆ ವೇದಿಕೆ ವಿಜೃಂಭಿಸುತ್ತಿತ್ತು.    

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.