ಕ್ರಿಯಾಶೀಲ ಕೆಲಸಗಳಿಂದ ಸಮಾಜದ ಯಶಸ್ಸು: ಕುಶಲ್‌ ಹೆಗ್ಡೆ


Team Udayavani, Mar 14, 2022, 11:44 AM IST

ಕ್ರಿಯಾಶೀಲ ಕೆಲಸಗಳಿಂದ ಸಮಾಜದ ಯಶಸ್ಸು: ಕುಶಲ್‌ ಹೆಗ್ಡೆ

ಮುಂಬಯಿ: ಪ್ರಾಮಾಣಿಕ ಕೆಲಸಗಳು ನಮ್ಮ ಯಶಸ್ಸಿಗೆ ಕಾರಣ ವಾಗುತ್ತವೆ. ಬಂಟರ ಸಮಾಜವು ಎಲ್ಲ ಕ್ಷೇತ್ರಗಳಲ್ಲಿದ್ದು, ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವುದು ಸಮಾಜದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಪುಣೆಯ ಉದ್ಯಮಿ, ಸಮಾಜ ಸೇವಕ, ಪುಣೆ ಕನ್ನಡ ಸಂಘದ ಕಾವೇರಿ ಗ್ರೂಪ್‌ ಆಫ್‌ ಎಜುಕೇಶನಲ್‌ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ, ಕೆ. ಎಸ್‌. ಎಚ್‌. ಇಂಟರ್‌ನ್ಯಾಶನಲ್‌ ಪ್ರೈ. ಲಿ.ನ ಮುಖ್ಯ ಆಡಳಿತ ನಿರ್ದೇಶಕ ಕುಶಲ್‌ ಹೆಗ್ಡೆ ತಿಳಿಸಿದರು.

ಮುಲುಂಡ್‌ ಪಶ್ಚಿಮದ ಮಹಾಕವಿ ಕಾಳಿದಾಸ ನಾಟ್ಯ ಸಭಾಗೃಹದಲ್ಲಿ ಮಾ. 12ರಂದು ಜರಗಿದ ಮುಲುಂಡ್‌ ಬಂಟ್ಸ್‌ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ  ಅವರು ಮುಖ್ಯ ಅತಿಥಿಯಾಗಿ ಮಾತ ನಾಡಿ, ಮಹಾನಗರದಲ್ಲಿ ಸಮಾಜ ಬಾಂಧ ವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಲುಂಡ್‌ ಬಂಟ್ಸ್‌ ಸಕ್ರಿಯವಾಗಿದೆ. ಮಲುಂಡ್‌ ಬಂಟ್ಸ್‌ ಸದಸ್ಯರು ಮಾಡುತ್ತಿರುವ ಸಮಾಜಪರ ಕಾರ್ಯಗಳು ಅಭಿನಂದನೀಯ ಎಂದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ  ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ. ಬಂಟರ ಸಂಘದ ಸಮಾಜಪರ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಲುಂಡ್‌ ಬಂಟ್ಸ್‌ ಸದಸ್ಯರು ಸಹಕರಿಸುತ್ತಿದ್ದಾರೆ. ನಮ್ಮ ಸಮಾಜದ ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶ. ಬಂಟರ ಸಂಘದ ಶೈಕ್ಷಣಿಕ ಸಹಿತ ಅನೇಕ ವಿಶೇಷ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗೌರವ ಅತಿಥಿಯಾಗಿದ್ದ ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಪೊವಾಯಿ ಎಸ್‌. ಎಂ. ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್‌ ಶೆಟ್ಟಿ ಮಾತನಾಡಿ, ಶತಮಾನಗಳ ಹಿಂದೆ ನಮ್ಮ ಹಿರಿಯರು ಸಮಾಜಪರ ಸಂಘ-ಸಂಸ್ಥೆಗಳನ್ನು ನಿರ್ಮಿಸಿದರು. ಮಂಗಳೂರಿನಲ್ಲೂ ಮಕ್ಕಳ ಶಿಕ್ಷಣಕ್ಕಾಗಿ ವಸತಿಗೃಹವನ್ನು ನಿರ್ಮಿಸಿ ಶಿಕ್ಷಣಕ್ಕೆ ಪೋ›ತ್ಸಾಹ ನೀಡಿದರು. ಉಳು ವವನೇ ಒಡೆಯ ಎಂಬ ಭೂಮಸೂದೆ ಕಾಯ್ದೆ ಬಂದುದರಿಂದ ನಮ್ಮ ಸಮಾಜವು ವಿವಿಧ ಪ್ರದೇಶಗಳಿಗೆ ಹೋಗಿ ತಮ್ಮ ಪ್ರತಿಭೆಯಿಂದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಂಡರು. ನಮ್ಮ ಯಾವುದೇ ಕೆಲಸವು ಯಶಸ್ವಿಯಾಗಬೇಕಾದರೆ ಅದರ ಹಿಂದೆ ನಮ್ಮ ಪರಿಶ್ರಮವು ಇರಬೇಕಾಗುತ್ತದೆ. ನಿರ್ದಿಷ್ಟ ಗುರಿ ಇಟ್ಟು ಪರಿಶ್ರಮ ಪಟ್ಟರೆ ಆ ಕಾರ್ಯವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಗೌರವ ಅತಿಥಿಯಾಗಿದ್ದ ಚಿತ್ರನಟ, ನಿರ್ದೇಶಕ ರಕ್ಷಿತ್‌ ಎಸ್‌. ಶೆಟ್ಟಿ ಮಾತನಾಡಿ. ಹುಟ್ಟೂರು ಅಭಿವೃದ್ಧಿಯಲ್ಲಿ ಮುಂಬಯಿಗರ ಕೊಡುಗೆ ತುಂಬಾ ಇದೆ. ಊರಿನ ಯಾವುದೇ ಕಾರ್ಯಕ್ರಮಗಳು ಇದ್ದರೂ ಅದರ ಯಶಸ್ಸಿನ ಹಿಂದೆ ಮುಂಬಯಿ ತುಳು-ಕನ್ನಡಿಗರ ಶ್ರಮ ಖಂಡಿತವಾಗಿ ಇರುತ್ತದೆ. ಬಂಟ ಸಮಾಜವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ಸಂಘಟನೆಗಳನ್ನು ನಿರ್ಮಿಸಿ ಆ ಮೂಲಕ ಸಮಾಜಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ  ಮುಂಬಯಿಯಲ್ಲಿ ಬಂಟ ಸಮಾಜ ಮಾಡುತ್ತಿರುವ ಕಾರ್ಯಗಳು ಅಭಿನಂದನೀಯ ಎಂದರು.

ಅತಿಥಿಗಳು ದೀಪಪ್ರಜ್ವಲಿಸಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ  ಮುಲುಂಡ್‌ ಬಂಟ್ಸ್‌ ಅಧ್ಯಕ್ಷ ವಸಂತ್‌ ಎನ್‌. ಶೆಟ್ಟಿ  ಪಲಿಮಾರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ  ಪ್ರಸಿದ್ಧ ಮಕ್ಕಳ ತಜ್ಞ ಮತ್ತು ಮುಲುಂಡ್‌ ಬಂಟ್ಸ್‌ ಮಾಜಿ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ ಹಾಗೂ ಡಾ| ಸಂಗೀತಾ ಸತ್ಯಪ್ರಕಾಶ್‌ ಶೆಟ್ಟಿಯವರನ್ನು ಸಮಾಜ ಸೇವೆ ಮತ್ತು ಕೊರೊನಾ ವಾರಿಯರ್ಸ್‌ ಆಗಿ ಮಾಡಿದ ಸೇವೆಯನ್ನು ಗುರುತಿಸಿ ಸಮ್ಮಾನಿಸಲಾಯಿತು. ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಪ್ರಸಿದ್ಧ ಉದ್ಯೋಗಪತಿ ಸ್ಟೀಲ್‌ ಸ್ಟ್ರಾಂಗ್‌ ಸಂಸ್ಥೆಯ ರಮೇಶ್‌ ಶೆಟ್ಟಿ, ಹೊಟೇಲ್‌ ಉದ್ಯಮದ ಸಾಧಕ ಸಂದೀಪ್‌ ಹೊಟೇಲ್‌ನ ಮಾಲಕ ಶಾಂತರಾಜ್‌ ಶೆಟ್ಟಿ, ಹೊಟೇಲ್‌ ವೈಭವ ಮಾಲಕ ಕರಿಯಣ್ಣ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಸಂಸ್ಥೆಯ ಉತ್ತಮ ಸಾಧಕ ಕಾರ್ಯಕರ್ತರನ್ನು ಇದೇ ಸಂದರ್ಭ  ಗೌರ ವಿಸಲಾಯಿತು. ಮುಲುಂಡ್‌ ಬಂಟ್ಸ್‌ನ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಶಶಿಕಾಂತಿ ಶೆಟ್ಟಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷೆ ಶೃತಿಕಾ ಎಸ್‌. ಶೆಟ್ಟಿ ಅವರನ್ನು ಅತಿಥಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಮುಲುಂಡ್‌ ಬಂಟ್ಸ್‌ನ ಅಧ್ಯಕ್ಷ ಪಲಿಮಾರು ವಸಂತ್‌ ಎನ್‌. ಶೆಟ್ಟಿ ದಂಪತಿಯನ್ನು ಗಣ್ಯರು ಸಮ್ಮಾನಿಸಿದರು.

ಮಾಜಿ ಅಧ್ಯಕ್ಷರಾದ ನಗ್ರಿಗುತ್ತು ವಿವೇಕ್‌ ಶೆಟ್ಟಿ, ಡಾ| ಸತ್ಯಪ್ರಕಾಶ್‌ ಶೆಟ್ಟಿ, ಎಸ್‌. ಬಿ. ಶೆಟ್ಟಿ, ಪ್ರಕಾಶ್‌ಚಂದ್ರ ಶೆಟ್ಟಿ, ಟ್ರಸ್ಟಿಗಳಾದ ಸ್ಪೀಲ್‌ ಸ್ಟಂಗ್‌ ರಮೇಶ್‌ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು. ಮುಲುಂಡ್‌ ಬಂಟ್ಸ್‌ ಉಪಾಧ್ಯಕ್ಷ ಶಾಂತಾರಾಮ್‌ ಬಿ. ಶೆಟ್ಟಿ, ಕಾರ್ಯದರ್ಶಿ ಬಿ. ಶ್ರೀನಿವಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಕೃಷ್ಣ ಪ್ರಸಾದ್‌ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಾಂತಿ ಆರ್‌. ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು, ಅಧ್ಯಕ್ಷ ವಸಂತ ಶೆಟ್ಟಿ  ಹಾಗೂ ಪದಾಧಿಕಾರಿಗಳು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.

ಕಾರ್ಯದರ್ಶಿ ಬಿ. ಶ್ರೀನಿವಾಸ್‌ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಮಹಿಳಾ ವಿಭಾಗದ ವರದಿಯನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಆರ್‌. ಚೌಟ ಓದಿದರು, ಶೃತಿಕಾ ಎಸ್‌. ಶೆಟ್ಟಿ ಯುವ ವಿಭಾಗದ ವರದಿ ಓದಿದರು. ಕೋಶಾ ಧಿಕಾರಿ ರತ್ನಾಕರ ವೈ. ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಜತೆ ಕಾರ್ಯದರ್ಶಿ ವೇಣುಗೋಪಾಲ್‌ ಶೆಟ್ಟಿ  ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮುಲುಂಡ್‌ ಬಂಟ್ಸ್‌ ಸದಸ್ಯರಿಂದ ಹಾಗೂ ಮಕ್ಕಳಿಂದ ನೃತ್ಯ ವೈವಿಧ್ಯ, ವಿವಿಧ ಮನೋರಂಜನ ಕಾರ್ಯಕ್ರಮಗಳು ಹಾಗೂ ಕೃಷ್ಣರಾಜ ಶೆಟ್ಟಿ ನಿರ್ದೇಶನದಲ್ಲಿ ಪರಮಾನಂದ ಸಾಲ್ಯಾನ್‌ ಅವರು ರಚಿಸಿರುವ ಭೂಮಿ ಬೆಚ್ಚಾಂಡ್‌ ತುಳು ನಾಟಕ ಪ್ರದರ್ಶನಗೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಶೃತಿಕಾ ಎಸ್‌. ಶೆಟ್ಟಿ ಹಾಗೂ ಕೃಷ್ಣರಾಜ ಶೆಟ್ಟಿ ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಅಶೋಕ್‌ ಪಕ್ಕಳ ಹಾಗೂ ಚಿತ್ರನಟ ಹರೀಶ್‌ ವಾಸು ಶೆಟ್ಟಿ ನಿರೂಪಿಸಿದರು.

ಮುಲುಂಡ್‌ ಬಂಟ್ಸ್‌  ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಪರಿಸರದ ಸಮಾಜ ಬಾಂಧವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಸ್ಪಂದಿಸುತ್ತಿದ್ದೇವೆ. ಕಳೆದ ಕೋವಿಡ್‌ ಸಮಯದಲ್ಲಿ  ಸಂಕಷ್ಟದಲ್ಲಿದ್ದ ಎಲ್ಲ ಸಮಾಜಗಳ ಕುಟುಂಬಗಳಿಗೆ ಸಹಾಯಹಸ್ತ ನೀಡಿರುವ ಸಂತೃಪ್ತಿ ನಮಗಿದೆ. ಅಸಹಾಯಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಮುಟ್ಟಿಸುವ ಕಾರ್ಯ ಮಾಡಿವೆ. ವ್ಯಾಕ್ಸಿನೇಶನ್‌ ಕಾರ್ಯದಲ್ಲಿ ಮುಲುಂಡ್‌ ಬಂಟ್ಸ್‌ ಸದಸ್ಯರು ಸಕ್ರಿಯವಾಗಿ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ¨ªಾರೆ. ನಮ್ಮ ಯುವ ವಿಭಾಗ, ಮಹಿಳಾ ವಿಭಾಗ ಹಾಗೂ ಕೋರ್‌ ಕಮಿಟಿಗಳು ಈ ಸಂದರ್ಭ  ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಅಭಿಮಾನದ ಸಂಗತಿ. ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಮಾಡಲಾಗಿದೆ.-ವಸಂತ್‌ ಎನ್‌. ಶೆಟ್ಟಿ  ಪಲಿಮಾರು ಮುಲುಂಡ್‌ ಬಂಟ್ಸ್‌  ಅಧ್ಯಕ್ಷ

ಇಂದು ನನಗೆ ಸಮಾಜಸೇವೆಯ ಮೂಲಕ ಸಮಾಜದ ಋಣ ತೀರಿಸುವ ಸದಾವಕಾಶ ದೊರೆತಿರುವುದು ನನ್ನ ಭಾಗ್ಯ. ಕೊರೊನಾ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ನಾನು ಮತ್ತು ನನ್ನ ಪತ್ನಿ  ನಮ್ಮಿಂದಾದ ಸಹಾಯ ಮಾಡಿದೆವು. ಎಲ್ಲರಿಗೂ ಸರಿಯಾದ ಮಾಹಿತಿಯೊಂದಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದೆವು. ನಮ್ಮ ಪ್ರಾಮಾಣಿಕ ಸೇವೆಯನ್ನು ಸಮಾಜ ಗುರುತಿಸಿದೆ ಎಂಬ ಹೆಮ್ಮೆ ನಮಗಿದೆ. ಸಮ್ಮಾನವನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ. ಇನ್ನು ಮುಂದೆಯೂ ಸಮಾಜಪರ ಕಾರ್ಯ ಮಾಡುವ ಶಕ್ತಿ ನಮಗೆ ದೊರೆಯಲಿ.-ಡಾ| ಸತ್ಯಪ್ರಕಾಶ್‌ ಶೆಟ್ಟಿ, ಮಕ್ಕಳ ತಜ್ಞ ಮತ್ತು ಮುಲುಂಡ್‌ ಬಂಟ್ಸ್‌ ಮಾಜಿ ಅಧ್ಯಕ್ಷ

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.