ಮುಂಬಯಿ ವಿವಿಯಲ್ಲಿ “ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆ

Team Udayavani, Oct 30, 2018, 3:19 PM IST

2810mum03.jpg

ಮುಂಬಯಿ: ಗುಜರಾತ್‌ನಲ್ಲಿ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.  ಯಾವುದೇ ತುಳು- ಕನ್ನಡ ಕಾರ್ಯಕ್ರಮಕ್ಕೆ ಅವರ ಸಂಚಲನೆಯೇ ಪ್ರಧಾನ ವಾದುದು. ಎಲ್ಲರಿಗೂ ಪ್ರೇರಕರಾದ ಅವರು ಓರ್ವ ಜಾತ್ಯತೀತ ಹಿರಿಯ ಚೇತನರಾ ಗಿದ್ದಾರೆ. ಆದ್ದರಿಂದ ಗುಜರಾತ್‌ನಲ್ಲಿ ಎಸ್ಕೆ ತುಳು-ಕನ್ನಡಿಗರ ರಾಯಭಾರಿ ಎಂದೇ ಜನಜನಿತರಾಗಿದ್ದಾರೆ. ಅವರ ಸಾಹಿತ್ಯಕ  ಕೆಲಸಗಳು ಇನ್ನೂ ಸ್ಫೂರ್ತಿದಾಯಕವಾಗಿ ಮುನ್ನಡೆಯಲಿ ಎಂದು ಬರೋಡದ ಹಿರಿಯ ಉದ್ಯಮಿ, ಗುಜರಾತ್‌ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ನುಡಿದರು.

ಅ.27 ರಂದು ಪೂರ್ವಾಹ್ನ ಸಾಂತಾಕ್ರೂಜ್‌ ಪೂರ್ವದ ಮುಂಬಯಿ ವಿಶ್ವವಿದ್ಯಾಮಯ ಕಲೀನ ಕ್ಯಾಂಪಸ್‌ ಜೆ.ಪಿ ನಾಯಕ್‌ ಭವನದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗವು ನಾಡೋಜ ಪ್ರೊ| ಬರಗೂ ರು ರಾಮಚಂದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ್ದ ಅಭಿಜಿತ್‌ ಪ್ರಕಾಶನ ಪ್ರಕಾಶಿತ, ಬರೋಡಾದ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅವರ “ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆಗೊಳಿಸಿ ಮಾತ ನಾಡಿದ ಶುಭಹಾರೈಸಿದರು.
ಪ್ರಸಿದ್ಧ ಸಿನಿಮಾ ನಿರ್ದೇಶಕ, ಸಾಹಿತಿ ನಾಡೋಜ ಪ್ರೊ| ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕಕ್ಕೆ ಎಂದಿಗೂ ಸಾವು ಎನ್ನುವುದೇ ಇಲ್ಲ. ಡಿಜಿಟಲ್‌ ಯುಗದಲ್ಲಿ ಎಷ್ಟೋ ಆಧುನಿಕತೆಯುಳ್ಳ ಮಾಧ್ಯಮಗಳು ರಾರಾಜಿಸಿದರೂ ಅವು ಬರೇ ಆರಂಭಿಕ ಮುನ್ನಡೆಯಷ್ಟೇ. ಇಂತಹ ತಂತ್ರಜ್ಞಾನಗಳು ಬರೇ ಬಳಕೆಗಷ್ಟೇ ಮೀಸಲು.  ಆದರೇ ಕೃತಿ, ಪುಸ್ತಕಗಳು ಮೂಲಧಾರಿತ ಶಕ್ತಿಯುಳ್ಳವು. ಅದರಲ್ಲೂ ಕನ್ನಡದ ಒಟ್ಟು ಸಂಸ್ಕೃತಿಗೆ ದೀರ್ಘ‌ಕಾಲದ ಇತಿಹಾಸವಿದೆ. ಆದರೆ ತಂತ್ರಜ್ಞಾನ ಮಾಧ್ಯಮಗಳ ಬಳಕೆಯ ವಿವೇಕಯುಕ್ತವಾಗಿದೆ. ಕನ್ನಡ ಎನ್ನುವುದು ಭಾಷೆ ಯೂ ಹೌದು ಬಹುಭಾಷಿಕವೂ ಮತ್ತು ಜೀವನವೂ ಹೌದು. ನಮ್ಮ ರಾಷ್ಟ್ರದಲ್ಲಿ ಸಾವಿರಾರು ಭಾಷೆಗಳಿದ್ದು ಅನೇಕವು ನಾಶವಾಗಿವೆ. ಆದರೆ ಕನ್ನಡ ಭಾಷೆಗೆ  ಅಪಾಯವಿಲ್ಲ ಎಂದರು.

ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಬೆಂಗಳೂರಿನ ಪ್ರಾಧ್ಯಾಪಕಿ ಡಾ| ಮನೋನ್ಮನಿ ಉದಯ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‌ಕುಮಾರ್‌ ಪೊಲಿಪು, ತುಮಕೂರು ಸಿದ್ದಗಂಗಾ ವಿದ್ಯಾಲಯದ ಪ್ರಾಚಾರ್ಯ ನಿರಂಜನ್‌ ಸಿ.ಎಸ್‌, ಕವಿ, ಲೇಖಕ ಗೋಪಾಲ ತ್ರಾಸಿ ಉಪಸ್ಥಿತರಿದ್ದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಗೀತಾ ವಸಂತ ಅವರು “ಕನ್ನಡ ಪ್ರಜ್ಞೆ ನಿನ್ನೆ ಇಂದು ನಾಳೆ’ ವಿಚಾರವಾಗಿ ಉಪನ್ಯಾಸ ನೀಡಿ,  ಪ್ರಜ್ಞೆ ಎನ್ನುವುದು ನದಿಯಂತೆ  ನಿರಂತರವಾ ದುದು. ಕನ್ನಡ ಪ್ರಜ್ಞೆ ಎಂದರೆ ಸಾಂಘಿಕವಾದ ಬುದ್ಧಿಪೂರ್ವತೆವುಳ್ಳದ್ದು. ಎಲ್ಲವನ್ನೂ ಸ್ವೀಕರಿ ಸುವ ಗುಣ ಕನ್ನಡಕ್ಕಿದೆ. ಧರ್ಮ ಮತ್ತು ಪ್ರಭುತ್ವದ ನೆಲೆಯಲ್ಲೂ ಕನ್ನಡ ಪ್ರಜ್ಞೆಯನ್ನು ನಾವು ಕಾಣಬಹುದು. ರೂಪದ ದೃಷ್ಟಿಯಿಂದ ಮಾತ್ರವಲ್ಲ ಗುಣದ ದೃಷ್ಟಿಯಿಂದಲೂ ಕನ್ನಡ  ಎತ್ತರದ ಸ್ಥಾನ  ಅಲಂಕರಿಸಿದೆ ಎಂದು ಅಭಿಪ್ರಾಯಿಸಿದರು.

ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್‌ ಅಲೆವೂರು ಕೃತಿ ಪರಿಚಯಿಸಿ,  ಮನಸ್ಸಿನ ಕುರಿತು ಇಡೀ ಕೃತಿ ಮಾತನಾಡುತ್ತ ಧ್ವನಿ ಆಗಿ ಮೂಡುತ್ತದೆ. ನಾನು ಎನ್ನುವ ಅಹಂ ಕೆಟ್ಟದ್ದು, ಮನಸ್ಸು ಅನ್ನುವುದೇ ಮಹತ್ವದು ಎಂದು ಕೃತಿಯು ಸಾರಿ ಹೇಳುತ್ತದೆ. ಆತ್ಮವಿಶ್ವಾಸವಾಗಿ ಮನಸ್ಸನ್ನು ಬೆಳೆಸಬೇಕು ಎಂಬುದು ಈ ಕೃತಿಯ ಒಟ್ಟು ಸಾರಂಶವಾಗಿದೆ ಎಂದರು.

ಮುಂಬಯಿ ವಿವಿ  ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್‌ ಉಪಾಧ್ಯ ಪ್ರಸ್ತಾವನೆಗೈದು, ಇದೊಂದು ಬಣ್ಣಬಣ್ಣದ ವರ್ಣಮಯ ಕಾರ್ಯಕ್ರಮ. ಇದು ಹಚ್ಚಿಕೊಂಡ ಬಣ್ಣವಲ್ಲ ಹಾಕಿಕೊಂಡ ಬಣ್ಣವಾಗಿದೆ ಎಂದರು.  ಪ್ರೊ| ರಾಮಚಂದ್ರಪ್ಪ ಅವರು ದಯಾನಂದ ಬೋಂಟ್ರಾ ಮತ್ತು ಎಸ್ಕೆ ಹಳೆಯಂಗಡಿ ಅವರನ್ನು ಶಾಲು ಹೊದೆಸಿ,  ಗ್ರಂಥಗೌರವ ನೀಡಿ ಅಭಿನಂದಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ದಿನಕರ್‌ ಚಂದನ್‌ ವಂದಿಸಿದರು. 

ತಾಯ್ನಾಡಿನಿಂದ ಬಹಳ ದೂರದ ಗುಜರಾತ್‌ನಲ್ಲಿದ್ದರೂ ಮಾತೃಭಾಷೆ, ಸಾಹಿತ್ಯವನ್ನು ಒಪ್ಪಿ ಅಪ್ಪಿಕೊಂಡು ಮುನ್ನಡೆದಿದ್ದೇವೆ. ನಾವು ಗುಜರಾತ್‌ನಲ್ಲಿದ್ದರೂ ಮುಂಬಯಿ ಕನ್ನಡಿಗರೇ ನಮ್ಮ ಬಂಧುಗಳು ಮತ್ತು ಪ್ರೋತ್ಸಾಹಕರು. ಇವರನ್ನೇ ನಾವು ಹೊಂದಿದ್ದೇವೆ. ಡಾ| ಜಿ. ಎನ್‌. ಉಪಾಧ್ಯ ಅವರ ಪ್ರೇರಣೆ ಮತ್ತು ಡಾ| ಅಲೆವೂರು ಅವರ ಸಹಯೋಗದಿಂದ ನನ್ನ ಕೃತಿಗಳು ಪ್ರಕಟಗೊಳ್ಳಲು ಸಾಧ್ಯವಾಯಿತು.
– ಎಸ್‌. ಕೆ. ಹಳೆಯಂಗಡಿ, ಕೃತಿಕಾರರು

ಚಿತ್ರ-ವರದಿ : ರೋನ್ಸ್‌   ಬಂಟ್ವಾಳ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.