ಪಾರ್ವತಿ ಪೂಜಾರಿ, ಕಲಾ ಭಾಗ್ವತ್‌ರಿಗೆ ಎಂ. ಬಿ. ಕುಕ್ಯಾನ್‌ ಚಿನ್ನದ ಪದಕ ಪ್ರದಾನ

Team Udayavani, Dec 29, 2021, 3:40 PM IST

ಪಾರ್ವತಿ ಪೂಜಾರಿ, ಕಲಾ ಭಾಗ್ವತ್‌ರಿಗೆ ಎಂ. ಬಿ. ಕುಕ್ಯಾನ್‌ ಚಿನ್ನದ ಪದಕ ಪ್ರದಾನ

ಮುಂಬಯಿ: ಮುಂಬಯಿ ವಿಶ್ವವಿದ್ಯಾನಿಲಯದ 2021 ಘಟಿಕೋ ತ್ಸವ ಸಮಾರಂಭವು ಡಿ. 27ರಂದು ಫೋರ್ಟ್‌ ಕ್ಯಾಂಪಸ್‌ನ ಜಹಾಂಗೀರ್‌ ಹಾಲ್‌ನಲ್ಲಿ  ಅದ್ದೂರಿಯಾಗಿ ನೆರ ವೇರಿತು. ಕನ್ನಡ ವಿಭಾಗದ 2019- 2020ನೇ ಸಾಲಿನ ಎಂಎ ರ್‍ಯಾಂಕ್‌ ವಿಜೇತ ವಿದ್ಯಾರ್ಥಿನಿ ಪಾರ್ವತಿ ಪೂಜಾರಿ ಮತ್ತು 2020-2021ನೇ ಸಾಲಿನ ಎಂಎ ರ್‍ಯಾಂಕ್‌ ವಿಜೇತ ವಿದ್ಯಾರ್ಥಿನಿ ಕಲಾ ಭಾಗ್ವತ್‌ ಅವರಿಗೆ ಗಣ್ಯರ ಸಮ್ಮುಖದಲ್ಲಿ  ಪ್ರತಿಷ್ಠಿತ ಎಂ. ಬಿ. ಕುಕ್ಯಾನ್‌ ಸುವರ್ಣ ಪದಕವನ್ನು  ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಕುಲಪತಿ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಪದಕ ಹಾಗೂ ಪ್ರಮಾಣ ಪತ್ರ ನೀಡಿದರು. ಅತಿಥಿಯಾಗಿದ್ದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಶಿಯಾನೋಗ್ರಫಿ ಗೋವಾ ಇದರ ನಿರ್ದೇಶಕ ಪ್ರೊ| ಸುನೀಲ್‌ ಕುಮಾರ್‌ ಸಿಂಗ್‌ ಮಾತನಾಡಿ, ಕಲಿಕೆ ಎಂದಿಗೂ ನಿಲ್ಲಬಾರದು. ಗಳಿಸಿದ ಜ್ಞಾನವು ಅಂತಿಮವಾಗಿ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಅನೇಕ ಸವಾಲುಗಳನ್ನು ಎದುರಿಸುವ ಹಾಗೂ ಜಯಿಸುವ ಕೌಶಲ ಮತ್ತು ಜ್ಞಾನವನ್ನು ಮುಂಬಯಿ ವಿವಿ ನೀಡಿದೆ. ಇದನ್ನು ಪಡೆದ ಎಲ್ಲರೂ ಮಹತ್ವಾಕಾಂಕ್ಷೆ ಯಿಂದ ಆದರ್ಶವಾಗಿ ಮುನ್ನಡೆಯ ಬೇಕು ಎಂದು ಕರೆ ನೀಡಿದರು.

ಐತಿಹಾಸಿಕ ಮಹತ್ವವಿರುವ ಮುಂಬಯಿ ವಿವಿಯಲ್ಲಿ  ಅನೇಕ ಮಹಾಪುರುಷರು ವಿದ್ಯಾರ್ಜನೆ ಮಾಡಿ ತ್ಯಾಗ-ಬಲಿದಾನ, ವಿಜ್ಞಾನ, ಕಲೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿರುತ್ತಾರೆ. ಈ ವಿವಿಯಲ್ಲಿ  ಕಲಿತು ಸಾಧನೆ ಮಾಡಿ ರುವುದು ಅಭಿಮಾನದ ಸಂಗತಿ ಎಂದು ರಾಜ್ಯಪಾಲರು ಶುಭ ಹಾರೈಸಿದರು.

ವಿವಿ ಉಪ ಕುಲಪತಿ ಪ್ರೊ| ಸುಹಾಸ್‌ ಪೆಡ್ನೇಕರ್‌ ಅವರು ಕೊರೊನಾ ದುರಿತ ಕಾಲದಲ್ಲಿಯೂ ವಿವಿಯ ಚಟುವಟಿಕೆಗಳನ್ನು ಸಶಕ್ತವಾಗಿ ನಿಭಾ ಯಿಸಿದ ಎಲ್ಲ ವಿಭಾಗಗಳನ್ನೂ ಶ್ಲಾಘಿಸಿ ಅಭಿನಂದಿಸಿದರು. ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ, ಸಹ ಕುಲಪತಿ ಪ್ರೊ| ರವೀಂದ್ರ ಕುಲಕರ್ಣಿ, ಉಪ ಕುಲಸಚಿವ ರಾಜೇಂದ್ರ ಪಗಾರೆ, ಪರೀಕ್ಷಾ ಮಂಡಳಿಯ ಸಂಚಾ ಲಕ ವಿನೋದ್‌ ಪಾಟೀಲ್‌, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ| ಜಿ. ಎನ್‌. ಉಪಾಧ್ಯ, ವಿವಿ ಆಡಳಿತ

ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಚಿದಾನಂದ ಭಾಗ್ವತ್‌, ದೀಪಾ ಪೂಜಾರಿ ಮತ್ತಿತರರಿದ್ದರು.

ಅಪಾರ ಪರಿಶ್ರಮ, ಮನೆಯಲ್ಲಿ  ಪೂರಕ ವಾತಾವರಣ ಇವೆಲ್ಲದರ ಜತೆಗೆ ಕನ್ನಡ ವಿಭಾಗ ನೀಡಿದ ವಿಷಯ ಜ್ಞಾನ, ನಿರಂತರ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಅದು ವಹಿಸಿದ ಶ್ರಮ ಹಾಗೂ ತರಬೇತಿಯು ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಅದರಿಂದಲೇ ಈ ಹಂತ ತಲುಪಲು ಸಾಧ್ಯವಾಯಿತು ಎಂಬುದಾಗಿ ಪಾರ್ವತಿ ಪೂಜಾರಿ, ಕಲಾ ಭಾಗ್ವತ್‌ ತಮ್ಮ ಅನಿಸಿಕೆ ಹಂಚಿಕೊಂಡರು. ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥರಾದ ಪ್ರೊ| ಜಿ. ಎನ್‌. ಉಪಾಧ್ಯ ಅವರು ಇಬ್ಬರೂ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.