ರಜಕ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ-ಭಜನ ಕಾರ್ಯಕ್ರಮ

Team Udayavani, Jan 12, 2020, 6:11 PM IST

ಮುಂಬಯಿ, ಜ. 11: ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ಮತ್ತು ಯುವ ವಿಭಾಗಹಾಗೂ ಸಾಂಸ್ಕೃತಿಕ ಸಮಿತಿಗಳ ಜಂಟಿ ಆಯೋಜನೆಯಲ್ಲಿ ವಾರ್ಷಿಕ ಸಾಮೂಹಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ ಮತ್ತು ರಜಕ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಜ. 11ರಂದು ಸಂಜೆ ಸಾಂತಾ ಕ್ರೂಜ್‌ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸಭಾ ಗೃಹದಲ್ಲಿ ಸಭಾಗೃಹದಲ್ಲಿ ನೆರವೇರಿತು.

ಶ್ರೀ ರಜಕ ಸಂಘ ಮುಂಬಯಿಯ ಅಧ್ಯಕ್ಷ ಡಿ. ಸಿ. ಸಾಲ್ಯಾನ್‌, ಉಪಾಧ್ಯಕ್ಷ ಸಿಎ ವಿಜಯ ಕುಂದರ್‌, ರಜಕ ಸಂಘದಪ್ರಾದೇಶಿಕ ವಲಯ ಸಮಿತಿಗಳ ಸಂಯೋಜಕ ಸತೀಶ್‌ ಎಸ್‌. ಸಾಲ್ಯಾನ್‌, ಕಾರ್ಯದರ್ಶಿ ಸುಮಿತ್ರಾ ಪಲಿಮಾರ್‌, ಜತೆ ಕಾರ್ಯದರ್ಶಿ ಕಿರಣ್‌ ಕುಂದರ್‌, ಕೋಶಾಧಿಕಾರಿಗಳಾದ ಸುಭಾಷ್‌ ಸಾಲ್ಯಾನ್‌, ಜಯ ಕುಂದರ್‌, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಭಾಸ್ಕರ್‌ ಕುಂದರ್‌, ಉಪಕಾರ್ಯಾಧಕ್ಷ ಶಶಿಧರ್‌ ಸಾಲ್ಯಾನ್‌, ಮಹಿಳಾ ವಿಭಾಗಧ್ಯಕ್ಷೆ ಪ್ರವೀಣಾ ಕುಂದರ್‌, ಯವ ವಿಭಾಗಧ್ಯಕ್ಷ ರೋನಕ್‌ ಕುಂದರ್‌ ಮತ್ತು ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಪೇಜಾವರ ಮಠದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿತು. ಬಳಿಕ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು. ಭಾಸ್ಕರ್‌ ಕುಂದರ್‌ ಮತ್ತು ಶಕುಂತಳಾ ಬಿ. ಕುಂದರ್‌, ಪ್ರದೀಪ್‌ ಕುಂದರ್‌ ಮತ್ತು ಪ್ರವೀಣಾ ಪಿ. ಕುಂದರ್‌ ಹಾಗೂರೋನಕ್‌ ಕುಂದರ್‌ ಮತ್ತು ಸ್ವಸ್ತಿಕಾ ಕುಂದರ್‌ ದಂಪತಿ ಪೂಜಾದಿಗಳ ಯಜಮಾನತ್ವ ವಹಿಸಿದ್ದರು.

ಇತ್ತೀಚಿಗೆ ಉಡುಪಿ ಮಠದ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಭಜನೆಗೈದ ಶ್ರೀ ರಜಕ ಭಜನಾ ಮಂಡಳಿ, ಪ್ರಾದೇಶಿಕ ಸಮಿತಿಗಳ ಮಂಡಳಿಗಳಿಂದ ಭಜನ ಕಾರ್ಯಕ್ರಮ ನಡೆಯಿತು. ರಜಕ ಸಂಘದ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿತು. ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರು, ಕೇಂದ್ರ ಮತ್ತು ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಅಪಾರಸಂಖ್ಯೆಯ ರಜಕ ಬಂಧುಗಳು ಪೂಜಾದಿಗಳಲ್ಲಿ ಪಾಲ್ಗೊಂಡು ಶ್ರೀ ಭಗವಂತನ ಕೃಪೆಗೆ ಪಾತ್ರರಾದರು.

 

ಚಿತ್ರ – ವರದಿ: ರೋನ್ಸ್‌ ಬಂಟ್ವಾಳ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ