ಇದು ಬಾಂಧವ್ಯ ಬೆಸೆಯುವ ಕೂಟ; ಸ್ಪರ್ಧೆಯಲ್ಲ : ಪಯ್ಯಡೆ

Team Udayavani, Jan 11, 2020, 6:12 PM IST

ಮುಂಬಯಿ, ಜ. 10: ಬಂಟರ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಫೆ. 2 ರಂದು ಕಾಂದಿವಲಿ ಪಶ್ಚಿಮದ ರಘುವೀರ್‌ ಮಾಲ್‌ ಸಮೀಪದ ಪೋಯಿಸರ್‌ ಜಿಮ್ಖಾನ, ನೇತಾಜಿ ಸುಭಾಶ್ಚಂದ್ರ ಭೋಸ್‌ ಕ್ರೀಡಾಂಗಣದಲ್ಲಿ ಜರಗಲಿರುವ ಸಂಘದ 33ನೇ ವಾರ್ಷಿಕ ಕ್ರೀಡಾಕೂಟ-2020 ಆಯೋಜನೆಯ ಬಗ್ಗೆ ವಿಶೇಷ ಸಭೆ ಜ. 8 ರಂದು ಬಂಟರ ಭವನದ ಕಾಶಿ ಸಿದ್ದು ಶೆಟ್ಟಿ ಸಭಾಗೃಹದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ  ವಿಟಲ ಎಸ್‌. ಆಳ್ವ ಇವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ ಐಕಳ, ಕ್ರೀಡಾ ಮೇಲ್ವಿಚಾರಕರಾದ ಜಯ ಎ. ಶೆಟ್ಟಿ ಉಪಸ್ಥಿತರಿದ್ದರು.

ಅಧ್ಯಕ್ಷ ಪಯ್ಯಡೆ ಅವರು ಮಾತನಾಡಿ, ಬಂಟರ ಸಂಘವು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಹೀಗೆ ಹಲವಾರು ಕ್ಷೇತ್ರಗಳ ಜೊತೆ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಬೆಂಬಲ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಂಘದ ಕ್ರೀಡಾಕೂಟವು ಸಂಘದ ಮಹತ್ವದ ಕಾರ್ಯಚಟುವಟಿಕೆಗಳಲ್ಲಿ ಒಂದಾಗಿದ್ದು, ಅದನ್ನು ಪ್ರತೀ ವರ್ಷ ಊರಿನ ಉತ್ಸವದಂತೆ ಆಯೋಜಿಸ ಲಾಗುತ್ತಿದೆ. ಬಂಟ ಬಾಂಧವರಿಗೆಲ್ಲ ಸ್ಫೂರ್ತಿ ತುಂಬುವ ಈ ಕ್ರೀಡಾಕೂಟವು ಬಂಟರ ಬಾಂಧವ್ಯವನ್ನು ಬೆಸೆ ಯುವ ಕೂಟವೇ ಹೊರತು ಸ್ಪರ್ಧೆಯಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ವೈಯಕ್ತಿಕ ವೈಮನಸ್ಸು ಮರೆತು ಅನ್ಯೋನ್ಯತೆ, ಸಂಸತದ ಕ್ಷಣದೊಂದಿಗೆ ಕ್ರೀಡಾಕೂಟದಲ್ಲಿ ಭಾಗಿಯಾಗೋಣ ಎಂದರು. ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಟಲ ಎಸ್‌. ಆಳ್ವ ಅವರು ಮಾತನಾಡಿ, 33ನೇ ವರ್ಷದ ಕ್ರೀಡಾಕೂಟವನ್ನು ಅತ್ಯಂತ ಶಾಂತ ರೀತಿ ನಡೆಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬೆಳಗ್ಗೆ ಸ್ಪರ್ಧೆ ಆರಂಭವಾಗುವುದಕ್ಕಿಂತ ಮುನ್ನ ವೈಯಕ್ತಿಕ ಸ್ಪರ್ಧಿ ಹಾಗೂ ತಂಡದ ಸ್ಪರ್ಧಾರ್ಥಿಗಳು ತಮ್ಮ ಆಧಾರ್‌ ಕಾರ್ಡ್‌ಗಳನ್ನು ಪರೀಕ್ಷಕರಿಗೆ ತೋರಿಸಿ, ಆಯ್ಕೆಗೊಂಡರೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹು ದಾಗಿದೆ. ಆಧಾರ್‌ ಕಾರ್ಡ್‌ ದಾಖಲೆ ಪತ್ರವಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಪರೀಕ್ಷಕರ ನಿರ್ಣಯವೇ ಅಂತಿಮ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಕ್ರೀಡಾಕೂಟದ ಮೇಲ್ವಿಚಾರಕ ಜಯ ಎ. ಶೆಟ್ಟಿ ಅವರು ಮಾತನಾಡಿ, ಹಗ್ಗಜಗ್ಗಾಟ ಸ್ಪರ್ಧೆಯು ಬೆಳಗ್ಗೆ 10.30ಕ್ಕೆ ಪ್ರಾರಂಭಗೊಳ್ಳಲಿದೆ. ಒಟ್ಟು ಕ್ರೀಡಾಕೂಟವು ಸಂಜೆ 5ರೊಳಗೆ ಸಮಾಪ್ತಿಗೊಳ್ಳಲಿದ್ದು, ಬಂಟ ಬಾಂಧವರು ಎಂದಿನಂತೆ ಸಹಕರಿಸಬೇಕು. ವೈಯಕ್ತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿಗೆ ಕ್ರೀಡಾ ಮೈದಾನದಲ್ಲೇ ಬಹುಮಾನ ನೀಡಿ ಗೌರವಿಸಲಾಗುವುದು. ಕೇವಲ ತಂಡಗಳಿಗೆ ಮಾತ್ರ ಕಾರ್ಯಕ್ರಮದ ವೇದಿಕೆಯಲ್ಲಿ ಬಹುಮಾನ ವಿತರಿಸ ಲಾಗುವುದು. ಶಿಸ್ತು, ಸಂಯಮದಿಂದಿದ್ದು, ಸಂಘಕ್ಕೆ ಹಾಗೂಕ್ರೀಡಾಕೂಟಕ್ಕೆ ಹೆಚ್ಚಿನ ಗೌರವ ನೀಡೋಣ ಎಂದರು.

ಸ್ವಾಗತ ಸಮಿತಿಯಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಒಂದು ಗಂಟೆಗಳ ಕಾಲಾವಧಿಗಾಗಿ ಕ್ರಮವಾಗಿ ಜೋಗೇಶ್ವರಿ -ದಹಿಸರ್‌ ಪ್ರಾದೇಶಿಕ ಸಮಿತಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ, ಡೊಂಬಿವಲಿ ಪ್ರಾದೇಶಿಕ ಸಮಿತಿ, ಮೀರಾ- ಭಾಯಂದರ್‌ ಪ್ರಾದೇಶಿಕ ಸಮಿತಿ, ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿ, ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ, ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿ, ಸಿಟಿ ಪ್ರಾದೇಶಿಕ ಹಾಗೂ ನವಿಮುಂಬಯಿ ಪ್ರಾದೇಶಿಕ ಸಮಿತಿಗಳು ಕಾರ್ಯ ನಿರ್ವಹಿಸಲಿದ್ದಾರೆ. ತ್ರೋಬಾಲ್‌ನಲ್ಲಿ ಮೀರಾ- ಭಾಯಂದರ್‌, ನವಿಮುಂಬಯಿ, ಜವಾಬ್‌, ಥಾಣೆ ಬಂಟ್ಸ್‌, ಭಿವಂಡಿ-ಬದ್ಲಾಪುರ, ಮುಲುಂಡ್‌ ಬಂಟ್ಸ್‌, ಕುರ್ಲಾ-ಭಾಂಡೂಪ್‌, ವಸಾಯಿ-ಡಹಾಣೂ, ಸಿಟಿ ರೀಜನ್‌, ಜೋಗೇಶ್ವರಿ-ದಹಿಸರ್‌, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌,ಡೊಂಬಿವಲಿ ಪ್ರಾದೇಶಿಕ ಸಮಿತಿಗಳು ಭಾಗವಹಿಸಲಿವೆ. ಮಹಿಳೆಯರಮತ್ತು ಪುರುಷರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳೊಂದಿಗೆ ಥಾಣೆ ಬಂಟ್ಸ್‌, ಜವಾಬ್‌, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌, ಮುಲುಂಡ್‌ ಬಂಟ್ಸ್‌ ತಂಡಗಳು ಭಾಗವಹಿಸಲಿವೆ.

 

ಚಿತ್ರ-ವರದಿ:  ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ