ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ: ಸಾಧಕರಿಗೆ ಸಮ್ಮಾನ

Team Udayavani, Jan 10, 2020, 6:13 PM IST

ಮುಂಬಯಿ, ಜ. 9: ಸಯಾನ್‌ ಜಿಎಸ್‌ಬಿ ಸೇವಾ ಮಂಡಲದ ಶ್ರೀ ಸುಧೀಂದ್ರ ಸಭಾಗೃಹದಲ್ಲಿ ಇತ್ತೀಚೆಗೆ ನಡೆದ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ 76ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದಲ್ಲಿಸಮಾಜದ ಹಿರಿಯ ಸದಸ್ಯರಾದ ರತ್ನಾಕರ್‌ ರಾವ್‌ ಮತ್ತು ಲೀಲಾವತಿ ರತ್ನಾಕರ್‌ ದಂಪತಿ, ಲಕ್ಷ್ಮೀಶ ಕಾಪು,ಕಾವೇರಿ ರಾವ್‌ ಹಾಗೂ ಸಾಧಕ ಪ್ರತಿಭೆ ಶ್ರೇಯಸ್‌ ಎಸ್‌. ರಾವ್‌ ಇವರನ್ನು ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್‌ಕಾರ್ನಾಡ್‌ ಅವರು ಅಭಿನಂದಿಸಿ ಶುಭಹಾರೈಸಿದರು.

ಈ ಸಂದರ್ಭ ಸಮಾಜ ಬಾಂಧವರ ಮಕ್ಕಳನ್ನು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎನ್‌. ರವೀಂದ್ರನಾಥ್‌ ರಾವ್‌, ಗೌರವ ಪ್ರಧಾನ ಕಾರ್ಯದರ್ಶಿ ಕೇದರ್‌ನಾಥ ಆರ್‌. ಬೋಳಾರ್‌, ಗೌರವ ಕೋಶಾಧಿಕಾರಿ ನವೀನ್‌ ಎಸ್‌. ರಾವ್‌ ಜತೆ ಕಾರ್ಯದರ್ಶಿಗಳಾದ ರಿತೇಶ್‌ ಆರ್‌. ರಾವ್‌ ಮತ್ತು ನಿತ್ಯಾನಂದ ಸಿ. ರಾವ್‌, ಜೊತೆ ಕೋಶಾಧಿಕಾರಿ ರೂಪೇಶ್‌ ಆರ್‌. ರಾವ್‌, ಮಹಿಳಾಧ್ಯಕ್ಷೆ ಶ್ರೇಯಾ ಎಸ್‌.ರಾವ್‌, ಮಹಿಳಾ ಕಾರ್ಯದರ್ಶಿ ಆರತಿ ಎನ್‌. ರಾವ್‌, ಕೋಶಾಧಿಕಾರಿ ಕವಿತಾ ಆರ್‌.ರಾವ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿಯ ರಾಜೇಂದ್ರ ಆರ್‌. ರಾವ್‌, ಸಂತೋಷ್‌ ಕುಮಾರ್‌ಆರ್‌. ರಾವ್‌, ಧನಂಜಯ ಎನ್‌. ಶೇರ್ವೆಗಾರ್‌, ಸುಹಾಸ್‌ ಎಸ್‌. ರಾವ್‌, ಆಶ್ವಿ‌ನ್‌ ಕೆ. ರಾವ್‌, ಕೆ. ಎಂ. ಅಶಿತ್‌ ರಾಜ್‌, ಹರಿಚಂದ್ರ ಆರ್‌. ರಾವ್‌, ಮನೋಜ್‌ ಸಿ. ರಾವ್‌, ದಿವೀತ್‌ ಡಿ. ರಾವ್‌, ಜಯಕರ ಎಸ್‌. ರಾವ್‌, ಡಾ| ಸತ್ಯಕೃಷ್ಣ ಭಟ್‌, ರವಿ ರಾವ್‌, ಕೆ. ವಿ. ರಾವ್‌, ಕೆ. ರಾಮಚಂದ್ರ ಉಪಾದ್ಯಾಯ ಸೇರಿದಂತೆ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.

 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ