ಕು| ತನಿಷ್ಕಾ ಎಸ್. ಶೆಟ್ಟಿಗೆ 3 ಚಿನ್ನ
Team Udayavani, Nov 9, 2017, 3:45 PM IST
ನವಿಮುಂಬಯಿ: ನಾಗಪುರದಲ್ಲಿ ಅ. 24 ರಿಂದ 29ರವರೆಗೆ ನಡೆದ ಎಸ್ಜಿಎಫ್ಐ ಸ್ಟೇಟ್ ಚಾಂಪಿಯನ್ಶಿಪ್ನಲ್ಲಿ ಕು| ತನಿಷ್ಕಾ ಎಸ್. ಶೆಟ್ಟಿ ಅವರು ಮೂರು ಚಿನ್ನದ ಪದಕವನ್ನು ಗೆದ್ದಿದ್ದಾರೆ.
ವಾಶಿಯ ಫಾದರ್ ಆ್ಯಗ್ನೆಲ್ ಮಲ್ಟಿಪರ್ಪಸ್ ಸ್ಕೂಲ್ ಆ್ಯಂಡ್ ಜೂನಿಯರ್ ಕಾಲೇಜಿನ 12ನೇತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಇವರು ಲಾಂಗ್ಜಂಪ್, ರಿಲೇಯ ಎರಡು ವಿಭಾಗಗಳಲ್ಲಿ ಚಿನ್ನ ಗೆದ್ದು, ಮುಂದಿನ ತಿಂಗಳು ಹರಿಯಾಣದಲ್ಲಿ ನಡೆಯಲಿರುವ ಎಸ್ಜಿಎಫ್ಐ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕಾಂದಿವಲಿಯ ಎಸ್ಎಐ ಮೈದಾನದಲ್ಲಿ ನಡೆದ ಮುಂಬಯಿ ಡಿವಿಜನ್ ಆಥ್ಲೆಟಿಕ್ ಮೀಟ್ನಲ್ಲಿ ಇವರು ಲಾಂಗ್ಜಂಪ್ನಲ್ಲಿ ಚಿನ್ನ ಪಡೆದಿದ್ದರು. ಶ್ರೀನಿವಾಸ ಗುಪ್ತ ಅವರಿಂದ ಕ್ರೀಡಾ ತರಬೇತಿಯನ್ನು ಪಡೆಯುತ್ತಿರುವ ಇವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಫಾದರ್ ಅಲ್ಮೆಡಾ ಹಾಗೂ ಶಿಕ್ಷಕವೃಂದದವರು ಅಭಿನಂದಿಸಿದ್ದಾರೆ.ಇವರು ನವಿಮುಂಬಯಿ ಉದ್ಯಮಿ, ಸುಭಾಶ್ಚಂದ್ರ ಶೆಟ್ಟಿ ಮತ್ತು ಹಾವಂಜೆ ಬಾನಬೆಟ್ಟು ತನಿಷ್ಕಾ ಹೌಸ್ನ ಆಶಾ ಎಸ್. ಶೆಟ್ಟಿ ದಂಪತಿಯ ಪುತ್ರಿ. ತನಿಷ್ಕಾ ಶೆಟ್ಟಿ ಶಾಲಾ, ಕಾಲೇಜು, ತಾಲೂಕು, ರಾಜ್ಯ, ಜಿಲ್ಲಾ, ರಾಷ್ಟ್ರ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ.