ಮೇ 16ರಿಂದ ವಾಲ್ಕೇಶ್ವರ ಶ್ರೀ ಕಾಶೀ ಮಠದಲ್ಲಿ ವ್ಯಾಸ ಜಯಂತಿ ಆಚರಣೆ

Team Udayavani, May 11, 2019, 4:28 PM IST

ಮುಂಬಯಿ: ಜಿಎಸ್‌ಬಿ ಸಮಾಜದ ಧಾರ್ಮಿಕ ಸ್ಥಳವಾದ ವಾಲ್ಕೇಶ್ವರದ ಬಾಣಗಂಗಾದ ಶ್ರೀ ಕಾಶೀ ಮಠದಲ್ಲಿ ವ್ಯಾಸ ಜಯಂತಿ ಆಚರಣೆಯು ಮೇ 16ರಿಂದ ಮೇ 18ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.

ಮೇ 16ರಂದು ವ್ಯಾಸ ಜಯಂತಿದ ದಿನದಂದು ಬೆಳಗ್ಗೆ 9 ರಿಂದ ನೈರ್ಮಲ್ಯ ವಿಸರ್ಜನೆ, ವ್ಯಾಸೋಪಾಸನೆ, ಭಜನೆ, ಮಧ್ಯಾಹ್ನ 12 ರಿಂದ ಪೂಜೆ, ಆರತಿ, ಮಧ್ಯಾಹ್ನ 1.30 ರಿಂದ ಸಮಾರಾಧನೆ, ಸಂಜೆ 6 ರಿಂದ ದೀಪಾಲಂಕಾರ, ಸಂಜೆ 6.30 ರಿಂದ ಭಜನೆ,

ಬಳಿಕ ವಸಂತ ಪೂಜೆ, ರಾತ್ರಿಪೂಜೆ, ಪ್ರಸಾದ ವಿತರಣೆ ಜರಗಲಿದೆ. ಮೇ 17ರಂದು ನರಸಿಂಹ ಜಯಂತಿಯ ಅಂಗವಾಗಿ ಬೆಳಗ್ಗೆ 9 ರಿಂದ ವ್ಯಾಸೋಪಾಸನೆ, ಬಳಿಕ ಶ್ರೀ ಮಠದಲ್ಲಿ ಬೆಳಗ್ಗೆ 10 ರಿಂದ ಏಕಾಹ ಭಜನೆಯು ಆರಂಭಗೊಂಡು ಮರುದಿನ ಮೇ 18ರ ಬೆಳಗ್ಗೆ 10 ರವರೆಗೆ ಅದ್ದೂರಿಯಾಗಿ ನಡೆಯಲಿದೆ.

ಏಕಾಹ ಭಜನೆಯಲ್ಲಿ ಮುಂಬಯಿ ಹಾಗೂ ಆಸುಪಾಸಿನ ಜಿಎಸ್‌ಬಿ ಸಂಘಟನೆಗಳ 12 ಭಜನಾ ತಂಡಗಳು ಭಾಗವಹಿಸಲಿವೆ. ಮಧ್ಯಾಹ್ನ ಪೂಜೆ, ಆರತಿ, ಸಮಾರಾಧನೆ ಜರಗಲಿದೆ. ರಾತ್ರಿ 8ರಿಂದ ವಸಂತ ಪೂಜೆ, ರಾತ್ರಿಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮೇ 18ರಂದು ವಸಂತ ಪೂರ್ಣಿಮೆಯ ದಿನದಂದು ಬೆಳಗ್ಗೆ 9ರಿಂದ ವಿವಿಧ ಪೂಜೆ, ಬೆಳಗ್ಗೆ 10ರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ 12ರಿಂದ ಮಧ್ಯಾಹ್ನ ಪೂಜೆ, ಆರತಿ, ಮಧ್ಯಾಹ್ನ 2ರಿಂದ ಸಮಾರಾಧನೆ ಜರಗಲಿದೆ.

ಸಂಜೆ 6ರಿಂದ ದೀಪಾಲಂಕಾರ, ಭಜನೆ, ರಾತ್ರಿ 8ರಿಂದ ವಸಂತ ಪೂಜೆ, ರಾತ್ರಿಪೂಜೆ, ಆರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶ್ರೀ ಕಾಶೀ ಮಠದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ