ಪುಲ್ವಾಮಾ ದಾಳಿ ಹುತಾತ್ಮರಿಗೆ ಆಹಾರ್‌ ವತಿಯಿಂದ 15 ಲ.ರೂ.ಸಹಾಯಧನ

Team Udayavani, May 14, 2019, 12:18 PM IST

ಮುಂಬಯಿ: ಮುಂಬಯಿ ಮಹಾನಗರದ ಹೊಟೇಲಿಗರ ಸರ್ವೋಚ್ಚ ಸಂಸ್ಥೆ ಎಂದೆನಿಸಿಕೊಂಡಿರುವ ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ (ಆಹಾರ್‌) ವತಿಯಿಂದ ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ಸಲುವಾಗಿ ಮೇ 9ರಂದು 15 ಲಕ್ಷ ರೂ.ಗಳ ಮೊತ್ತವನ್ನು ನೀಡ ಲಾಯಿತು. ಹಸ್ತಾಂತರ ಕಾರ್ಯ ಕ್ರಮದಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಯ ಐಜಿ ರಾಜ್‌ಕುಮಾರ್‌ ಅವರಿಗೆ ಆಹಾರ್‌ನ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಸಹಾಯ ಧನವನ್ನು ಹಸ್ತಾಂತರಿಸಿದರು.

ಈ ಸಂದರ್ಭ ರಾಜ್‌ಕುಮಾರ್‌ ಅವರೊಂದಿಗೆ ಡಿಐಜಿ ರಾಧಾಕೃಷ್ಣ, ಡೆಪ್ಯುಟಿ ಕಮಾಂಡರ್‌ ಮನೀಷ್‌ ಮಹಾಲೆ, ಅಸಿಸ್ಟೆಂಟ್‌ ಕಮಾಂಡರ್‌ಗಳಾದ ಅಮಿತ್‌ಕುಮಾರ್‌, ಕಿಶೋರ್‌ ರಾವ್‌, ಕಮಾಂಡರ್‌ ಬಿ. ಎಸ್‌. ಸಿದ್ದು ಮತ್ತು ಕರ್ತವ್ಯನಿರತರು ಹಾಗೂ ಆಹಾರ್‌ನ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವಪಾಲ್‌ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್‌ ನಾಯಕ್‌ ಮತ್ತು ವಲಯಾಧ್ಯಕ್ಷರಾದ ಮಹೇಂದ್ರ ಕರ್ಕೇರ, ನಿರಂಜನ್‌ ಶೆಟ್ಟಿ, ವಿಜಯ್‌ ಕೆ. ಶೆಟ್ಟಿ, ಹರೀಶ್ಚಂದ್ರ ಶೆಟ್ಟಿ, ವಿಜಯ್‌ ಶೆಟ್ಟಿ, ಅಮರ್‌ ಶೆಟ್ಟಿ, ಸಂತೋಷ್‌ ರೈ, ಭುಜಂಗ ಆರ್‌. ಶೆಟ್ಟಿ, ಸಾಗರ್‌ ಡಿ. ಶೆಟ್ಟಿ, ಪ್ರಭಾಕರ್‌ ಶೆಟ್ಟಿ, ಮಹೇಶ್‌ ಶೆಟ್ಟಿ, ಅನಿರುದ್ಧ ಶೆಟ್ಟಿ, ಸುಧಾಕರ್‌ ಶೆಟ್ಟಿ, ಆಹಾರ್‌ ಕಚೇರಿ ಪ್ರಬಂಧಕರಾದ ವಸಂತ್‌ ಕಾರ್ಕಳ ಮತ್ತು ಸಿಬಂದಿ ವರ್ಗದವರಾದ ಮಂಗೇಶ್‌, ಸಂತೋಷ್‌, ಮಾಧವಿ, ರಶ್ಮಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪುಲ್ವಾಮ ದಾಳಿಯಲ್ಲಿ ಹುತಾತ್ಮ ರಾದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾ ಯಿತು. ಆಹಾರ್‌ನ ಅಧ್ಯಕ್ಷ ಸಂತೋಷ್‌ ಶೆಟ್ಟ ಅವರು ಸಿಆರ್‌ಪಿಎಫ್‌ ಅಧಿಕಾರಿಗಳನ್ನು ಪುಷ್ಪ ಗೌರವದೊಂದಿಗೆ ಸ್ವಾಗತಿಸಿದರು. ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ