ಅಂಕಲೇಶ್ವರದ ಶ್ರೀ ಗುಮನ್‌ದೇವ್‌ ಮಂದಿರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

Team Udayavani, May 14, 2019, 12:26 PM IST

ಭರೂಚ್‌ (ಗುಜರಾತ್‌): ಸುಮಾರು ಐನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಗುಜರಾತ್‌ನ ಭರೂಚ್‌ ಜಿಲ್ಲೆಯ ಅಂಕಲೇಶ್ವರದ ನವೀಕರಣಗೊಂಡ ಗುಮನ್‌ ದೇವ್‌ ಮಂದಿರದಲ್ಲಿ ಉದ್ಯಮಿ ರವಿನಾಥ್‌ ವಿಶ್ವನಾಥ್‌ ಶೆಟ್ಟಿ ಮತ್ತು ಭಾರತಿ ರವಿನಾಥ್‌ ಶೆಟ್ಟಿ ದಂಪತಿಯ ಯಜಮಾನಿಕೆಯಲ್ಲಿ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವು ಮೇ 10ರಿಂದ ಮೇ 12ರ ತನಕ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

ಮೇ 10ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಸಂಜೆ ಶ್ರೀರಾಮಚಂದ್ರ, ಲಕ್ಷ್ಮಣ, ಸೀತಾ ಮಾತೆಯ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು. ರಾತ್ರಿ ವಾಸ್ತು ಹೋಮ ಮತ್ತು ಗಣಹೋಮ ನಡೆಯಿತು.

ಮರುದಿನ ಮುಂಜಾನೆ ನವಗ್ರಹ ಹೋಮ, ತತ್ವÌಕಲಶಾಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ಅನಂತರ ಮಲ್ಲಯುದ್ದ (ಕುಸ್ತಿ) ಸಂಜೆ 4 ಗಂಟೆಗೆ ಮದ್ವಭಾಗ್‌ ಸೊಸೈಟಿಯಿಂದ ಜಲಧಾರ ಚೋಕಡಿ, ಜಿ.ಐ.ಡಿ.ಸಿ. ಅಂಕಲೇಶ್ವರದಿಂದ ಗುಮನ್‌ ದೇವ್‌ ಮಂದಿರಕ್ಕೆ ಭವ್ಯ ಶೋಭಾಯಾತ್ರೆ ನಡೆಯಿತು. ಸಂಜೆ ಚಕ್ರಭÌ ಮಂಡಲ ಪೂಜೆ, ರಾಮದೇವತಾ ಕಲಶಾಧಿವಾಸ, ಅಧಿವಸ ಹೋಮ ನಡೆಯಿತು.

ಆಶೀರ್ವಚನ
ಅನಂತರ ಶ್ರೀ ಒಡಿಯೂರು ಗುರು ದೇವ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತ, ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ಕಾರ್ಯವು ಸದಾ ನಡೆಯುತ್ತಿರಲಿ, ಧಾರ್ಮಿಕ ಕಾರ್ಯದಿಂದ ಮಾನವನ ಬದುಕು ಪಾವನಗೊಳ್ಳುವುದು ಮಾತ್ರವಲ್ಲದೆ ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುವುದು. ಈ ಕಾರ್ಯದಲ್ಲಿ ಇಂದು ನನಗೆ ಭಾಗವಹಿಸಲು ಬಹಳ ಸಂತೋಷವಾಗುತ್ತಿದೆ ಎನ್ನುತ್ತಾ ಇಂತಹ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕೆಂದರು. ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ರವಿನಾಥ್‌ ವಿ. ಶೆಟ್ಟಿ ಅವರ ಸ್ವಗೃಹಕ್ಕೆ ಭೇಟಿಯಿತ್ತರು. ಅಲ್ಲಿ ಅವರ ಪಾದಪೂಜೆ ಹಾಗೂ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ರವಿನಾಥ ವಿ. ಶೆಟ್ಟಿ ದಂಪತಿ ಮಾತ್ರವಲ್ಲದೆ ಅವರ ತಾಯಿ ತೋನ್ಸೆ ಪಡುಮನೆ ಲಕ್ಷ್ಮೀ ವಿ. ಶೆಟ್ಟಿ, ಮಕ್ಕಳಾದ ಡಾ| ಆಶ್ನಾ ಆರ್‌. ಶೆಟ್ಟಿ, ಆಸ್ಥ ಆರ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಂದು ರಾತ್ರಿ ಭಜನೆ ಹಾಗೂ ಗಾರ್ಭನೃತ್ಯ ಜರಗಿತು.

ಪೂಜಾವಿಧಿಗಳು ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ ಇವರ ಪೌರೋಹಿತ್ಯದಲ್ಲಿ ವೇದ ಮೂರ್ತಿ ಡಾ| ಡಿ. ಶಂಕರನ್‌ ವಾಸುದೇವ್‌ ಭಟ್ಟಾಚಾರ್ಯ, ಆಗಮ ಪಂಡಿತ ಮತ್ತು ಶ್ರೀ ರಾಮಕರ್ಣ ಶುಕ್ಲಾ ಇವರ ಉಪಸ್ಥಿತಿ ಯಲ್ಲಿ ನಡೆಯಿತು. ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದವನ್ನು ಸ್ವೀಕರಿಸಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಹಿರಿಯಡ್ಕ ಮೋಹನ್‌ ದಾಸ್‌, ಥಾಣೆಯ ಧೀರಜ್‌ ಹೊಟೇಲಿನ ಮಾಲಕ ಶೇಖರ ಶೆಟ್ಟಿ, ರವಿ ದೇವಾಡಿಗ, ಗುಜರಾತಿನ ಅನೇಕ ರಾಜಕೀಯ ಮುಖಂಡರುಗಳು, ಉದ್ಯಮಿಗಳು, ಸಮಾಜ ಸೇವಕರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ-ವರದಿ : ಈಶ್ವರ ಎಂ. ಐಲ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ