ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯುತ್ಸವ ಆಚರಣೆ

ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌, ಗೋಕುಲ, ಸಾಯನ್‌ ಆಶ್ರಯದಲ್ಲಿ

Team Udayavani, May 15, 2019, 4:06 PM IST

ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌, ಗೋಕುಲ, ಸಾಯನ್‌ ಇದರ ಆಶ್ರಯದಲ್ಲಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವವನ್ನು ಬಿಎಸ್‌ಕೆಬಿ ಅಸೋಸಿಯೇಶನ್‌ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಭಾಗಿತ್ವದೊಂದಿಗೆ ಮೇ 12ರಂದು ಆಶ್ರಯ, ನೆರೂಲ್‌ ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಶ್ರೀಕೃಷ್ಣ ‘ಬಾಲಾಲಯ’ದಲ್ಲಿ ಬೆಳಗಿನ ನಿತ್ಯಪೂಜೆಯ ಅನಂತರ ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ ಬ್ರಹ್ಮಶ್ರೀ ಕೇಶವ ಶರ್ಮ ಅವರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಪುಣ್ಯಾಹವಾಚನ, ಪಂಚಗವ್ಯ, ಗಣಹೋಮ, ನವಗ್ರಹ ಹೋಮ, ಶಿವ ಪಂಚಾಕ್ಷರಿ ಹೋಮ, ರುದ್ರಾಭಿಷೇಕ, ಶಂಕರಾಚಾರ್ಯ ನಾಮಾರ್ಚನೆ, ಪೂಜೆ ಮುಂತಾದ ಧಾರ್ಮಿಕ ಕೈಂಕರ್ಯಗಳು, ಪುರೋಹಿತರಾದ ಜಯಪ್ರಕಾಶ್‌ ಹಾಗೂ ಅಶ್ವಥ್‌ ಅವರ ಸಹಯೋಗದಿಂದ ಸಾಂಗವಾಗಿ ನೆರವೇರಿದವು. ಧಾರ್ಮಿಕ ವಿಧಿಗಳ ಕತೃìಗಳಾಗಿ ಶಶಿಧರ್‌ ರಾವ್‌, ವಿಜಯಲಕ್ಷ್ಮೀ ರಾವ್‌ ದಂಪತಿ, ಸುರೇಶ್‌ ಭಾಗವತ್‌, ವೃಂದಾ ಭಾಗವತ್‌ ದಂಪತಿ, ರಾಮಚಂದ್ರ ರಾವ್‌, ಅನುರಾಧಾ ರಾವ್‌ ದಂಪತಿ, ಸುಧೀರ್‌ ಹೆಬ್ಟಾರ್‌, ಸಂಗೀತಾ ಹೆಬ್ಟಾರ್‌ ದಂಪತಿ ಮತ್ತು ಸುಬ್ರಹ್ಮಣ್ಯ ರಾವ್‌ ಉದಯಕುಮಾರಿ ದಂಪತಿ ಪಾಲ್ಗೊಂಡಿದ್ದರು. ಗೋಕುಲ ಭಜನಾ ಮಂಡಳಿ ಹಾಗೂ ವಲಯದ ಮಂಡಳಿಗಳಿಂದ ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರ ಗಳ ಪಠನೆ ನೆರವೇರಿತು. ಹವನದ ಪೂರ್ಣಾಹುತಿಯಾದ ಅನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ ವೇದ ಘೋಷ, ಸಂಗೀತ, ನೃತ್ಯ, ಸರ್ವ ವಾದ್ಯ ಸೇವೆ ಜರಗಿತು. ಪ್ರಿಯಾಂಜಲಿ ರಾವ್‌ ನೃತ್ಯ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಕೇಶವ ಶರ್ಮ ಅವರು ತಮ್ಮ ಉಪನ್ಯಾಸದಲ್ಲಿ “ದೈವಾಂಶ ಸಂಭೂತರಾದ ಶ್ರೀ ಶಂಕರ ಭಗವತ್ಪಾದರು ಕೇವಲ 32 ವರ್ಷಗಳ ತನ್ನ ಜೀವಿತಾವಧಿಯಲ್ಲಿ ಷಣ್ಮತ ಸ್ಥಾಪನಾಚಾರ್ಯ ಎನಿಸಿದ ವರು. ಹಿಂದೂ ಧರ್ಮದ ಪುನರು ತ್ಥಾನ ಮಾಡಿ ನಮಗೆಲ್ಲ ಪೂಜ
ನೀಯ ಗುರುಗಳಾಗಿ¨ªಾರೆ. ಶ್ರೀ ಗುರುಗಳ ಅನುಗ್ರಹ ಸದಾ ನಮಗಿರಲಿ’ ಎಂದು ಹಾರೈಸಿದರು.

ಅಧ್ಯಕ್ಷ ಡಾ| ಸುರೇಶ ರಾವ್‌ ಅವರು ಈ ಸಂದರ್ಭದಲ್ಲಿ ಗೋಕುಲ ಕಟ್ಟಡ ನಿರ್ಮಾಣದ ಸದ್ಯದ ಪ್ರಗತಿಯನ್ನು ವಿವರಿಸುತ್ತಾ, ಜೂನ್‌ ತಿಂಗಳಲ್ಲಿ ಗೋಕುಲ ಶ್ರೀ ಕೃಷ್ಣ ಮಂದಿರದ ಶಿಲಾನ್ಯಾಸ ಹಾಗೂ ಜೂನ್‌ 24 ರಿಂದ 30 ರ ವರೆಗೆ ಶ್ರೀ ಕೃಷ್ಣ ಮಂದಿರ ನಿರ್ಮಾಣ ಸಹಾಯಾರ್ಥ, ಪೇಜಾವರ ಮಠಾಧೀಶ ಪರಮ ಪೂಜ್ಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಅವರ ಪಟ್ಟದ ದೇವರು ಶ್ರೀ ರಾಮ ವಿಠಲ ದೇವರಿಗೆ ರಜತ ತುಲಾಭಾರ ಸಪ್ತಾಹ ಜರಗಲಿದೆ. ಏಳು ದಿನ ಏಳು ಕಡೆಯಲ್ಲಿ ಎಂಟು ಬಾರಿ ಜರಗಲಿರುವ ಈ ಅಪೂರ್ವ ಕಾರ್ಯಕ್ರಮ – ತುಲಾಭಾರ ಸೇವೆಗೆ ಸದಸ್ಯ ಬಾಂಧವರೆಲ್ಲ ತಮ್ಮ ತಮ್ಮ ದೇಣಿಗೆಯನ್ನಿತ್ತು ಸಹಕರಿಸಬೇಕೆಂದು ಕರೆ ನೀಡಿದರು.

ತೀರ್ಥ-ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಗೋಪಾಲಕೃಷ್ಣ
ಪಬ್ಲಿಕ್‌ ಟ್ರಸ್ಟ್‌, ಬಿಎಸ್‌ಕೆಬಿ ಅಸೋಸಿ
ಯೇಶನ್‌ ಹಾಗೂ ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ