ಯುಎಸ್‌ ಓಪನ್‌ : ಮೂರನೇ ಸುತ್ತಿಗೆ ಮುನ್ನಡೆದ ಸೆರೆನಾ, ಮೆಡ್ವೆಡೇವ್‌

Team Udayavani, Sep 1, 2022, 8:44 PM IST

ಯುಎಸ್‌ ಓಪನ್‌ : ಮೂರನೇ ಸುತ್ತಿಗೆ ಮುನ್ನಡೆದ ಸೆರೆನಾ, ಮೆಡ್ವೆಡೇವ್‌

ನ್ಯೂಯಾರ್ಕ್‌: ಯುಎಸ್‌ ಓಪನ್‌ ಪಂದ್ಯಾವಳಿಯ ವನಿತಾ ಸಿಂಗಲ್ಸ್‌ನಲ್ಲಿ ಸ್ಟಾರ್‌ ಆಟಗಾರರ ನಿರ್ಗಮನ ಮುಂದುವರಿದಿದೆ. ಕಳೆದೆರಡು ಬಾರಿಯ ಚಾಂಪಿಯನ್ಸ್‌ ಪತನಗೊಂಡ ಬೆನ್ನಲ್ಲೇ 2021ರ ರನ್ನರ್‌-ಅಪ್‌ ಮತ್ತು ಸೆಮಿಫೈನಲಿಸ್ಟ್‌ ಆಟಗಾರ್ತಿಯರ ಹೋರಾಟ ಕೊನೆಗೊಂಡಿದೆ. ಆದರೆ ಆತಿಥೇಯ ನಾಡಿನ ಸೆರೆನಾ ವಿಲಿಯಮ್ಸ್‌, ಪುರುಷರ ವಿಭಾಗದ ಹಾಲಿ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೇವ್‌ ಓಟ ಮುಂದುವರಿಸಿ ತೃತೀಯ ಸುತ್ತು ಮುಟ್ಟಿದ್ದಾರೆ.

ಸೆರೆನಾ ವಿಲಿಯಮ್ಸ್‌ ದ್ವಿತೀಯ ಶ್ರೇಯಾಂಕದ ಅನೆಟ್‌ ಕೊಂಟಾವೀಟ್‌ ಅವರ ದಿಟ್ಟ ಸವಾಲನ್ನು ಮೆಟ್ಟಿನಿಂತು 7-6 (7-4), 2-6, 6-2 ಅಂತರದಿಂದ ಗೆದ್ದು ಬಂದರು. ಆಸ್ಟ್ರೇಲಿಯದ ಅಜ್ಲಾ ಟೊಮ್‌ಜಾನೋವಿಕ್‌ ಇವರ ಮುಂದಿನ ಎದುರಾಳಿ.

ಕಳೆದ ವರ್ಷದ ರನ್ನರ್‌-ಅಪ್‌, ಕೆನಡಾದ ಲೇಲಾ ಫೆರ್ನಾಂಡಿಸ್‌ ಈ ಬಾರಿ ದ್ವಿತೀಯ ಸುತ್ತಿನಲ್ಲೇ ಎಡವಿದರು. ಅವರನ್ನು ರಷ್ಯಾದ ಲಿಡ್ಮಿಲಾ ಸಮೊÕನೋವಾ 6-3, 7-6 (7-3) ಅಂತರದಿಂದ ಹಿಮ್ಮೆಟ್ಟಿಸಿದರು. ಇದಕ್ಕೂ ಒಂದು ದಿನ ಮೊದಲು ಹಾಲಿ ಚಾಂಪಿಯನ್‌ ಎಮ್ಮಾ ರಾಡುಕಾನು ಅವರನ್ನು ಫ್ರಾನ್ಸ್‌ನ ಎಲೈಜ್‌ ಕಾರ್ನೆಟ್‌ ದ್ವಿತೀಯ ಸುತ್ತಿನಲ್ಲೇ ಮನೆಗೆ ಕಳುಹಿಸಿದ್ದರು. ಹಾಗೆಯೇ ಎರಡು ಬಾರಿಯ ಚಾಂಪಿಯನ್‌ ನವೋಮಿ ಒಸಾಕಾ ಆಟ ಮೊದಲ ಸುತ್ತಿನಲ್ಲೇ ಮುಗಿದಿತ್ತು. ಇವರನ್ನು ಸೋಲಿಸಿದವರು ಆಯಿಥೇನ ನಾಡಿನ ಡೇನಿಯಲ್‌ ಕಾಲಿನ್ಸ್‌.

ಗ್ರೀಕ್‌ನ ಮರಿಯಾ ಸಕ್ಕರಿ ಚೀನದ 75ರಷ್ಟು ಕೆಳ ರ್‍ಯಾಂಕಿಂಗ್‌ ಆಟಗಾರ್ತಿ ವಾಂಗ್‌ ಕ್ಸಿಯು ವಿರುದ್ಧ ಎಡವಿದರು. ಅಂತರ 6-3, 5-7, 5-7.

ಆಲ್‌ ಅಮೆರಿಕನ್‌ ಶೋ’ ಒಂದರಲ್ಲಿ ಕೊಕೊ ಗಾಫ್ ಮತ್ತು ಮ್ಯಾಡಿಸನ್‌ ಕೀಸ್‌ ತೃತೀಯ ಸುತ್ತಿನಲ್ಲಿ ಮುಖಾಮುಖೀ ಆಗುತ್ತಿದ್ದಾರೆ. ಇವರಿಬ್ಬರು ಕ್ರಮವಾಗಿ ಎಲಾನಾ ಗ್ಯಾಬ್ರಿಯೇಲಾ ರುಸ್‌ ಮತ್ತು ಕ್ಯಾಮಿಲಿ ಜಾರ್ಜಿ ವಿರುದ್ಧ ಗೆಲುವು ಸಾಧಿಸಿದರು.

ಟ್ಯುನಿಶಿಯಾದ ಓನ್ಸ್‌ ಜೆಬ್ಯೂರ್‌, 1985ರ ಚಾಂಪಿಯನ್‌ ಹಾನಾ ಮಂಡ್ಲಿಕೋವಾ ಅವರ ಪುತ್ರಿ ಎಲಿಜಬೆತ್‌ ಮಾಂಡ್ಲಿಕ್‌ ಅವರನ್ನು 7-5, 6-2 ಅಂತರದಿಂದ ಸೋಲಿಸಿದರು.

ಪುರುಷರ ಸಿಂಗಲ್ಸ್‌ :

ಪುರುಷರ ಸಿಂಗಲ್ಸ್‌ನಲ್ಲಿ ಏರುಪೇರಿನ ಫ‌ಲಿತಾಂಶವೇನೂ ಕಂಡುಬರಲಿಲ್ಲ. ಹಾಲಿ ಚಾಂಪಿಯನ್‌ ಡ್ಯಾನಿಲ್‌ ಮೆಡ್ವಡೇವ್‌ ಫ್ರಾನ್ಸ್‌ನ ಆರ್ಥರ್‌ ರಿಂಡೆರ್ಕ್‌ನೆಕ್‌ ಅವರನ್ನು 6-2, 7-5, 6-3ರಿಂದ ಹಿಮ್ಮೆಟ್ಟಿಸಿದರು.

ವಿಂಬಲ್ಡನ್‌ ರನ್ನರ್-ಅಪ್‌ ನಿಕ್‌ ಕಿರ್ಗಿಯೋಸ್‌ 7-6 (3), 6-4, 4-6, 6-4 ಅಂತರದಿಂದ ಫ್ರಾನ್ಸ್‌ನ ಬೆಂಜಮಿನ್‌ ಬೊಂಝಿ ವಿರುದ್ಧ ಗೆದ್ದು ಬಂದರು. ಬ್ರಿಟನ್‌ನ ಆ್ಯಂಡಿ ಮರ್ರೆ ಅಮೆರಿಕದ ಎಮಿಲಿಯೊ ನಾವ ಅವರನ್ನು 5-7, 6-3, 6-1, 6-0 ಅಂತರದಿಂದ ಮಣಿಸಿದರು.

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.