ದೊಡ್ಡ ಮೊತ್ತ ಪೇರಿಸಿಯೂ ಸೋತ ಪಾಕ್‌

3ನೇ ಏಕದಿನ: ಇಂಗ್ಲೆಂಡಿಗೆ 6 ವಿಕೆಟ್ ಜಯ

Team Udayavani, May 16, 2019, 6:00 AM IST

ಬ್ರಿಸ್ಟಲ್: ಮತ್ತೂಂದು ಬೃಹತ್‌ ಮೊತ್ತದ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ 6 ವಿಕೆಟ್‌ಗಳಿಂದ ಪಾಕಿಸ್ಥಾನಕ್ಕೆ ಸೋಲುಣಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಮಂಗಳವಾರ ರಾತ್ರಿ ಬ್ರಿಸ್ಟಲ್ನಲ್ಲಿ ನಡೆದ 3ನೇ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ 358 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲವಾಯಿತು. ದಿಟ್ಟ ಜವಾಬಿತ್ತ ಇಂಗ್ಲೆಂಡ್‌ 44.5 ಓವರ್‌ಗಳಲ್ಲಿ ಕೇವಲ ನಾಲ್ಕೇ ವಿಕೆಟಿಗೆ 359 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಇಂಗ್ಲೆಂಡ್‌ 370 ಪ್ಲಸ್‌ ಮೊತ್ತದ ದ್ವಿತೀಯ ಪಂದ್ಯವನ್ನು 12 ರನ್ನುಗಳಿಂದ ಗೆದ್ದು ಬಂದಿತ್ತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಇಮಾಮ್‌ 151 ರನ್‌
ಆರಂಭಕಾರ ಇಮಾಮ್‌ ಉಲ್ ಹಕ್‌ ಜೀವನಶ್ರೇಷ್ಠ 151 ರನ್‌ (131 ಎಸೆತ, 16 ಬೌಂಡರಿ, 1 ಸಿಕ್ಸರ್‌) ಬಾರಿಸಿ ಪಾಕಿಸ್ಥಾನದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಮಧ್ಯಮ ಕ್ರಮಾಂಕದಲ್ಲಿ ಆಸಿಫ್ ಅಲಿ 52 ರನ್ನುಗಳ ಕೊಡುಗೆ ಸಲ್ಲಿಸಿದರು.

ಚೇಸಿಂಗ್‌ ವೇಳೆ ಇಂಗ್ಲೆಂಡ್‌ ಓಪನರ್‌ಗಳಾದ ಜಾನಿ ಬೇರ್‌ಸ್ಟೊ-ಜಾಸನ್‌ ರಾಯ್‌ ಸಿಡಿದು ನಿಂತರು. ಮೊದಲ ವಿಕೆಟಿಗೆ ಕೇವಲ 17.3 ಓವರ್‌ಗಳಿಂದ 159 ರನ್‌ ಹರಿದು ಬಂತು. ಬೇರ್‌ಸ್ಟೊ 93 ಎಸೆತಗಳಿಂದ 128 ರನ್‌ ಹೊಡೆದು (15 ಬೌಂಡರಿ, 5 ಸಿಕ್ಸರ್‌) 7ನೇ ಶತಕ ಸಂಭ್ರಮವನ್ನಾಚರಿಸಿದರೆ, ರಾಯ್‌ 55 ಎಸೆತ ನಿಭಾಯಿಸಿ 76 ರನ್‌ ಬಾರಿಸಿದರು (8 ಬೌಂಡರಿ, 4 ಸಿಕ್ಸರ್‌).

ಕ್ರೀಸ್‌ ಇಳಿದವರೆಲ್ಲರೂ ಮುನ್ನುಗ್ಗಿ ಬಾರಿಸಿದ್ದರಿಂದ ಇಂಗ್ಲೆಂಡ್‌ 31 ಎಸೆತ ಬಾಕಿ ಇರುವಾಗಲೇ ಗೆದ್ದು ಬಂದಿತು. ರೂಟ್, ಸ್ಟೋಕ್ಸ್‌, ಅಲಿ, ಮಾರ್ಗನ್‌ ಪಾಕ್‌ ಬೌಲರ್‌ಗಳಿಗೆ ಶಾಕ್‌ ಕೊಡುತ್ತ ಹೋದರು.

ಸರಣಿಯ 4ನೇ ಪಂದ್ಯ ಮೇ 17ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಚೀನ ವಿರುದ್ಧ 0-5 ಅಂತರದಿಂದ ಹೀನಾಯ ಸೋಲು ಕಂಡ ಭಾರತವು ಸುದಿರ್ಮನ್‌ ಕಪ್‌ ಕೂಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಿಂದ ಹೊರಬಿತ್ತು. "ಡಿ' ಬಣದ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡ ಇತ್ತೀಚೆಗಿನ ಕೆಲ ವರ್ಷದಿಂದ ತುಸು ಬಲಹೀನ ವಾಗಿರುವಂತೆ ಕಂಡಿರಬಹುದು. ಹಾಗೆಂದು ವಿಶ್ವಕಪ್‌ನ ಕೂಟದಲ್ಲಿ ದೈತ್ಯ ಆಟಗಾರರನ್ನೊಳಗೊಂಡಿರುವ...

  • ಗುವಾಹಾಟಿ: ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಶಿವ ಥಾಪ ಮತ್ತು ಏಶ್ಯನ್‌ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಪಂಘಾಲ್‌ ನಿರೀಕ್ಷೆಯಂತೆ ಇಂಡಿಯನ್‌ ಓಪನ್‌ ಬಾಕ್ಸಿಂಗ್‌...

  • ಚಿಂಚಿಯೋನ್‌: ದಕ್ಷಿಣ ಕೊರಿಯ ವಿರುದ್ಧದ ಮೂರು ಪಂದ್ಯಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ...

ಹೊಸ ಸೇರ್ಪಡೆ